ಬೆಂಗಳೂರು, (ನ.15): ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಸಹ-ಉಸ್ತುವಾರಿಯಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರನ್ನ ನೇಮಕ ಮಾಡಲಾಗಿದೆ.

ಸಚಿವ ಸುಧಾಕರ್ ಅವರೊಂದಿಗೆ ಬೆಂಗಳೂರಿನ ಬೊಮ್ಮನಹಳ್ಳಿ ಬಿಜೆಕ ಶಾಸಕ ಸತೀಶ್ ರೆಡ್ಡಿ ಅವರನ್ನ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ  ಮಹಾರಾಷ್ಟ್ರ ಶಾಸಕ ಅಶೀಶ್, ಗುಜರಾತಿನ ಬಿಜೆಪಿ ಮುಖಂಡ ಪ್ರದೀಪ್ ಸಿಂಗ್ ವಾಘೇಲಾ ಅವರನ್ನ ಸಹ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು (ಭಾನುವಾರ) ಆದೇಶ ಹೊರಡಿಸಿದ್ದಾರೆ.

ಶ್ರೀರಾಮುಲು ಖಾತೆ ಬದಲಾವಣೆ: ಡಾ.ಸುಧಾಕರ್​ ಹೆಗಲಿಗೆ ಮತ್ತೊಂದು ಜವಾಬ್ದಾರಿ..!

ಈ ಸಂಬಂಧ ಟ್ವೀಟ್ ಮಾಡಿರುವ ಸುಧಾಕರ್, ಹೈದರಾಬಾದ್ ನ ಮಹಾನಗರ ಪಾಲಿಕೆ (GHMC) ಚುನಾವಣೆಗೆ ನನ್ನನ್ನು ಸಹ-ಉಸ್ತುವಾರಿಯಾಗಿ ನೇಮಿಸಿರುವ ಬಿಜೆಪಿ ನಾಯಕರಿಗೆ ಧನ್ಯವಾದಗಳು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.