ವಿಶ್ವನಾಥ್‌ ವಿಶ್ವಕ್ಕೇ ಪ್ರಶ್ನೆ ಕೇಳ್ತಾರೆ, ಸಲಹೆ ಕೊಡ್ತಾರೆ: ಸಚಿವ ಎಸ್‌.ಟಿ.ಸೋಮಶೇಖರ್‌ ವ್ಯಂಗ್ಯ

ಎಚ್‌. ವಿಶ್ವನಾಥ್‌ ಅವರು ಕೇವಲ ನನಗೆ ಮಾತ್ರ ಪ್ರಶ್ನೆ ಕೇಳುವುದಿಲ್ಲ, ಸಲಹೆ ಕೊಡುವುದಿಲ್ಲ. ಅವರು ದೇಶ, ವಿಶ್ವಕ್ಕೆ ಪ್ರಶ್ನೆ ಕೇಳುತ್ತಾರೆ, ಸಲಹೆ ಕೊಡುತ್ತಾರೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ವ್ಯಂಗ್ಯವಾಡಿದರು.

minister st somashekar slams on h vishwanath in mysuru gvd

ಮೈಸೂರು (ಮೇ.23): ಎಚ್‌. ವಿಶ್ವನಾಥ್‌ ಅವರು ಕೇವಲ ನನಗೆ ಮಾತ್ರ ಪ್ರಶ್ನೆ ಕೇಳುವುದಿಲ್ಲ, ಸಲಹೆ ಕೊಡುವುದಿಲ್ಲ. ಅವರು ದೇಶ, ವಿಶ್ವಕ್ಕೆ ಪ್ರಶ್ನೆ ಕೇಳುತ್ತಾರೆ, ಸಲಹೆ ಕೊಡುತ್ತಾರೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ವ್ಯಂಗ್ಯವಾಡಿದರು. ಜಿಲ್ಲಾ ಮಂತ್ರಿ ಎಲ್ಲಿದ್ದಾರೆಂಬ ಎಚ್‌. ವಿಶ್ವನಾಥ್‌ ಪ್ರಶ್ನೆಗೆ ಭಾನುವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅವರ ಈಗ ಕೊಟ್ಟಿರುವ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ. ಅವರು ಮೈಸೂರು ಉಸ್ತುವಾರಿ ಆದಾಗ ಎಷ್ಟುಸಭೆ ಮಾಡಿದ್ದರು? ಎಷ್ಟುಬಾರಿ ತಾಲೂಕು ಪ್ರವಾಸ ಮಾಡಿದ್ದರು ನನಗೆ ಗೊತ್ತಿಲ್ಲ.

ನಾನು ಯಾರು ಮಾಡದಷ್ಟುಜಿಲ್ಲೆಯ, ತಾಲೂಕು, ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಇದನ್ನು ವಿಶ್ವನಾಥ್‌ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು. ಎಷ್ಟು ಸಭೆ ಮಾಡಿದ್ದೇನೆ? ಎಷ್ಟುಬಾರಿ ಮೈಸೂರಿಗೆ ಬಂದಿದ್ದೇನೆ ತಿಳಿದುಕೊಳ್ಳಲಿ. ಚುನಾವಣಾ ನೀತಿ ಸಂಹಿತಿ ಹಿನ್ನೆಲೆ ನಾನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿ ಹಾನಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಸಭೆ ಮಾಡಬಾರದು, ಸ್ಥಳ ಪರಿಶೀಲನೆಗೆ ಹೋಗಬಾರದು, ಇದು ಸ್ಪಷ್ಟವಾಗಿ ನೀತಿ ಸಂಹಿತೆಯಲ್ಲಿ ಇದೆ. ಸಂಸದರು, ಸಚಿವರು ಆಗಿದ್ದ ಎಚ್‌. ವಿಶ್ವನಾಥ್‌ ಅವರಿಗೆ ಇದು ಗೊತ್ತಿರಬೇಕಿತ್ತು ಎಂದು ಅವರು ಕುಟುಕಿದರು.

ಆಪರೇಷನ್​ ಕಮಲದ ಸುಳಿವು ನೀಡಿದ ಸಚಿವ, ಘಟಾನುಘಟಿ ನಾಯಕರು ಬಿಜೆಪಿ ಸೇರ್ತಾರಾ?

ಆರ್‌ಎಸ್‌ಎಸ್‌ ಕಾರ್ಯಕರ್ತ ಪಠ್ಯಪುಸ್ತಕ ತಯಾರಿ ಅಧ್ಯಕ್ಷರಾಗಿರೋದು ದುರಂತ: ಪಠ್ಯಪುಸ್ತಕ ಪರಿಷ್ಕರಣೆ (Text Book Revision Committee) ರಾಜಕೀಯ ಸಂಘರ್ಷ ಅಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ ಎಂದು ವಿಧಾನ ಪರಿಷತ್ತು ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್‌ ಚಕ್ರತೀರ್ಥ ಯಾರಪ್ಪ? ಸಂಘ ಪರಿವಾರದ ಕಾರ್ಯಕರ್ತ. ಶಿಕ್ಷಣ ತಜ್ಞರಲ್ಲದೆ ಇರುವವರು ಪಠ್ಯ ಪುಸ್ತಕ ತಯಾರಿಯ ಅಧ್ಯಕ್ಷರಾಗಿರೋದು ದುರಂತ ಎಂದು ಕಿಡಿಕಾರಿದರು. ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ. 

DCC Bank ಕೇರಳ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್ ಬಂದ್?

ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧಿಸುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ ಅವರ ಪಠ್ಯ ತೆಗೆಯುವುದು ತಪ್ಪು ಎಂದು ಅವರು ಖಂಡಿಸಿದರು. ಹೆಡ್ಗೆವರ್‌ ಯಾರು ಎಂಬುದೆ ನಮಗೆ ಗೊತ್ತಿಲ್ಲ. ಬಾಯಿಗೆ ಬಂದಂಗೆ ಯಾರು ಯಾರೋದು ಪಾಠ ಸೇರಿಸಿದರೆ ಹೇಗೆ? ಹೆಡ್ಗೆವರ್‌ಗೂ ಟಿಪ್ಪುಗೆ ಹೋಲಿಕೆ ಮಾಡುತ್ತೀರಾ ನೀವು? ಇದು ಸರಿನಾ? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಚರಿತೆ ಗೊತ್ತಿಲ್ವಾ? ಹೆಡ್ಗೆವರ್‌ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ? ಬ್ರಿಟಿಷರ ಮುಂದೆ ಮಂಡಿಯೂರಿದ್ದು ಯಾರು? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios