ಬಿಜೆಪಿಯಲ್ಲಿ ಹುದ್ದೆ, ಟಿಕೆಟ್ ಹಂಚಿಕೆಗೆ ಟೆಂಡರ್: ಸಚಿವ ತಂಗಡಗಿ ವ್ಯಂಗ್ಯ
ಬಿಜೆಪಿಯಲ್ಲಿ ಸಿಎಂ ಹುದ್ದೆ ಸೇರಿದಂತೆ ಎಂಎಲ್ಎ , ಎಂಪಿ ಟಿಕೆಟ್‌ಗಳ ಟೆಂಡರ್ ಕರೆಯಲಾಗುತ್ತದೆ. ಈಗ ಪ್ರತಿ ಪಕ್ಷದ ನಾಯಕನ ಹುದ್ದೆಗೂ ಟೆಂಡರ್ ಕರೆಯಲಾಗಿದ್ದು, ಯಾರೂ ಬಂದಂತೆ ಕಾಣುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.

ಕೊಪ್ಪಳ (ಸೆ.19): ಬಿಜೆಪಿಯಲ್ಲಿ ಸಿಎಂ ಹುದ್ದೆ ಸೇರಿದಂತೆ ಎಂಎಲ್ಎ , ಎಂಪಿ ಟಿಕೆಟ್‌ಗಳ ಟೆಂಡರ್ ಕರೆಯಲಾಗುತ್ತದೆ. ಈಗ ಪ್ರತಿ ಪಕ್ಷದ ನಾಯಕನ ಹುದ್ದೆಗೂ ಟೆಂಡರ್ ಕರೆಯಲಾಗಿದ್ದು, ಯಾರೂ ಬಂದಂತೆ ಕಾಣುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಿಎಂ ಹುದ್ದೆಗೆ ₹ 2500 ಕೋಟಿ ನೀಡಬೇಕು ಎಂದಿದ್ದರು.
ಈಗ ಎಂಎಲ್ಎ ಟಿಕೆಟ್‌ಗಾಗಿ ₹ 5-7 ಕೋಟಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿರುವುದನ್ನು ನೋಡಿದರೆ ಬಿಜೆಪಿಯಲ್ಲಿ ಹುದ್ದೆಗಳು ಮತ್ತು ಟಿಕೆಟ್‌ಗಳನ್ನು ಟೆಂಡರ್ ಮಾಡಲಾಗುತ್ತಿದೆ. ಅಲ್ಲಿ ಎಲ್ಲವೂ ಮಾರಾಟಕ್ಕಿವೆ ಎಂದು ಕುಟುಕಿದರು. ಚೈತ್ರಾ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲಿ ಅಣ್ಣ-ತಂಗಿ ಇದ್ದಂತೆ, ಅವರು ಪ್ರಖರವಾಗಿ ಭಾಷಣ ಮಾಡುವುದು ಸೇರಿದಂತೆ ಈಗ ಬೆಳಕಿಗೆ ಬಂದಿರುವ ಪ್ರಕರಣ ಎಲ್ಲವನ್ನು ಬಯಲು ಮಾಡಿದೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ: ಬಿಎಸ್‌ವೈ
ಪ್ರತಿಪಕ್ಷದ ನಾಯಕನ ಹುದ್ದೆಗೆ ಟೆಂಡರ್ ಕರೆದರೆ ಯಾರೂ ಬರುತ್ತಿಲ್ಲ ಅಂತ ಕಾಣುತ್ತೆ. ಅದಕ್ಕೆ ಗ್ಲೋಬಲ್ ಟೆಂಡರ್ ಕರೆಯುವ ಸಾಧ್ಯತೆ ಇದೆ. ಆಗ ಜೆಡಿಎಸ್ ಪಕ್ಷದವರು ಅರ್ಜಿ ಹಾಕಬಹುದು ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಚೈತ್ರಾ ಕುಂದಾಪುರ ಪ್ರಕರಣದಿಂದ ಎಲ್ಲವೂ ಬಟಾಬಯಲಾಗಿದೆ. ಜಿಲ್ಲೆಯಲ್ಲಿಯೂ ಟಿಕೆಟ್‌ಗಾಗಿ ಹಣ ನೀಡಿರುವ ಪ್ರಕರಣ ನಡೆದಿದ್ದು, ಅದು ಸಹ ತನಿಖೆಯಾಗಬೇಕು ಎಂದರು.
500 ಬಸ್ ಖರೀದಿ: ಬಸ್‌ಗಳ ಕೊರತೆ ನೀಗಿಸಲು ಈಗಾಗಲೇ 500 ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಇದರ ಜೊತೆಗೆ ಹಾಸ್ಟೆಲ್‌ಗಳಲ್ಲಿ ಸೀಟ್‌ಗಳ ಹೆಚ್ಚಳಕ್ಕಾಗಿ ವಾರದೊಳಗಾಗಿ ಸಭೆ ನಡೆಸಿ, ತೀರ್ಮಾನ ಮಾಡಲಾಗುವುದು ಎಂದರು.
Dasara 2023: 575 ಕೆ.ಜಿ ಬಾರ ಹೊತ್ತು ಸಾಗಿದ ಮಹೇಂದ್ರ: ಭವಿಷ್ಯಕ್ಕೆ ಭರವಸೆ ಮೂಡಿಸುತ್ತಿರುವ ಆನೆ
ಕೇಂದ್ರ ಅಡ್ಡಿ: ಬರ ಪರಿಹಾರ ನೀಡಲು ಕೇಂದ್ರ ಸರ್ಕಾರದ ನಿಯಮಾವಳಿಗಳು ಅಡ್ಡಿಯಾಗಿವೆ. ಇದನ್ನು ತಿದ್ದುಪಡಿ ಮಾಡಿ, ರೈತರ ಹಿತಕ್ಕಾಗಿ ಅನುಕೂಲ ಮಾಡಿಕೊಡುವಂತೆ ಕೋರಲಾಗಿದ್ದು, ಇದುವರೆಗೂ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಬರಪರಿಹಾರ ವಿತರಣೆ ವಿಳಂಬವಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಶೀಘ್ರದಲ್ಲಿಯೇ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.