ಪ್ರಗತಿ ಬಗ್ಗೆ ಮಾತಾಡಿ ಅಂದ್ರೆ ಉಡಾಫೆ ಮಾತಾಡ್ತಾರೆ: ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಸಂತೋಷ್ ಲಾಡ್ ಗರಂ
ಬಿಜೆಪಿ ನಾಯಕರು ನಾಲಗೆ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಎಲ್ಲಿ ಬೇಕಾದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂಸತ್‌ನಲ್ಲಿಯೂ ಸಹ ಕೆಲ ಅಸಂಸದೀಯ ಪದ ಬಳಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಬೇಕಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಧಾರವಾಡ (ಫೆ.18): ಬಿಜೆಪಿ ನಾಯಕರು ನಾಲಗೆ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಎಲ್ಲಿ ಬೇಕಾದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂಸತ್‌ನಲ್ಲಿಯೂ ಸಹ ಕೆಲ ಅಸಂಸದೀಯ ಪದ ಬಳಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಬೇಕಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಸಂಸದ ಅನಂತಕುಮಾರ್ ಹೆಗ್ಡೆಗೆ ಕೋರ್ಟ್ ಸೂಚನೆ ನೀಡಿರುವ ವಿಚಾರ ಸಂಬಂಧ ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಾಕ್ ಸ್ವಾತಂತ್ರ್ಯ ಕೊಟ್ಟಿದ್ದು ಅಂಬೇಡ್ಕರರು. ಆದರೆ ಈ ವಾಕ್ ಸ್ವಾತಂತ್ರ್ಯ ದುರ್ಬಳಕೆಯಲ್ಲಿ ಬಿಜೆಪಿ ನಂಬರ್ ಒನ್ ಆಗಿದೆ. ಜನರು ಇವರ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲದಕ್ಕೂ ಒಂದು ಕಾಲ, ಮೀತಿ ಇರುತ್ತೆ. ಏನೋ ಒಂದು ಗಾಳಿ ಇದೆ ಆ ಗಾಳಿಯಲ್ಲಿ ಗೆಲ್ಲುತ್ತಾ ಹೊರಟಿದ್ದಾರೆ. ಪ್ರಗತಿ ಬಗ್ಗೆ ಮಾತನಾಡಿ ಅಂದ್ರೆ ಉಡಾಫೆ ಮಾತುಗಳನ್ನು ಹೇಳುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ 71000 ರು.ನ ಲ್ಯಾಪ್‌ಟಾಪ್: ಸಚಿವ ಸಂತೋಷ್ ಲಾಡ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ಅವರು ಎಷ್ಟೇ ಒದ್ದಾಡಿದ್ರೂ ಆಗ 370 ಸೀಟು ಗೆಲ್ಲಲು ಆಗಿಲ್ಲ. ಈಗ 300 ಗೆಲ್ಲೋಕೆ ಆಗುವುದಿಲ್ಲ. ಆದರೆ ಕಾಟಾಚಾರಕ್ಕೆ ಹಾಗೆ ಹೇಳುತ್ತಾರೆ. ಅವರು ಹೇಳುವ ನಂಬರ್ ಅನ್ನೇ ಮೀಡಿಯಾಗಳು ತೋರಿಸುತ್ತಿವೆ. ನಾವಂತೂ ಅಷ್ಟು ಇಷ್ಟು ಅಂತಾ ಮೊದಲೇ ಹೇಳಲ್ಲ. ರಾಜ್ಯದಲ್ಲಿ ನಾವು 16-17 ಸ್ಥಾನ ಗೆಲ್ಲುತ್ತೇವೆ. 20 ಸ್ಥಾನ ಗೆದ್ದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ತಯಾರಿ ನಡೆದಿದೆ. ಮೊದಲ ಪಟ್ಟಿಯಲ್ಲೇ ಎಲ್ಲವೂ ಬರಬಹುದು ಧಾರವಾಡ ಸಹ ಕ್ಲಿಯರ್ ಆಗಬಹುದು ಟಿಕೆಟ್ ಕೊಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ಫೆ.24ರಂದು ಧಾರವಾಡಕ್ಕೆ ಸಿಎಂ ಆಗಮನ
ಫೆ.24 ರಂದು ಧಾರವಾಡ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನೆಲೆ ಸಿಎಂ ಕಾರ್ಯಕ್ರಮದ ಸ್ಥಳ ಪರಿಶೀಲನೆ ಸಚಿವ ಸಂತೋಷ್ ಲಾಡ್ ಪರಿಶೀಲನೆ ನಡೆಸಿದರು.
ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ನಾವು ಸಿದ್ಧ: ಸಚಿವ ಸಂತೋಷ್ ಲಾಡ್
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣ ಮತ್ತು ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. ಕೀ ಹಿನ್ನೆಲೆ ಕಾರ್ಯಕ್ರಮಗಳ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿದ ಸಚಿವರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2000 ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ಈ ಹಿನ್ನೆಲೆ ಆಶ್ರಯ ಮನೆ ನಿವೇಶನಕ್ಕೂ ಸಚಿವ ಸಂತೊಷ್ ಲಾಡ್ ಭೇಟಿ ನೀಡಿದರು. ಸಚಿವರಿಗೆ ಶಾಸಕ ಎನ‌್.ಎಚ್. ಕೋನರಡ್ಡಿ ಸಾಥ್ ನೀಡಿದರು.