Asianet Suvarna News Asianet Suvarna News

ಕೇಂದ್ರದಿಂದ ಎಷ್ಟು ಪರಿಹಾರ ತರುತ್ತಾರೆ ಎಂದು ವಿಪ ನಾಯಕ ಮೊದಲು ಹೇಳಲಿ: ಆರ್‌‌.ಬಿ.ತಿಮ್ಮಾಪುರ

ನಾವು ರಾಜ್ಯ ಸರ್ಕಾರದಿಂದ ಬರ ಪರಿಹಾರ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರದ ಎನ್‌ಡಿಆರ್‌‌ಎಫ್ ಕೊಡಬೇಕಲ್ಲ, ಕಾಂಗ್ರೆಸ್‌ ಪಕ್ಷದ ನಿಯೋಗ ಭೇಟಿಗೆ ಕೇಂದ್ರಕ್ಕೆ ತೆರಳಿದರೆ, ಭೇಟಿಗೂ ಬಿಡ್ತಿಲ್ಲ. ಇಂಥ ಕೇಂದ್ರ ಸರ್ಕಾರ ನಮ್ಮಲ್ಲಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ವಿಪಕ್ಷ ನಾಯಕ ಅಶೋಕ ಮಾಧ್ಯಮಗಳಿಗೆ ಹೇಳೋದು ಬಿಟ್ಟು ಪಿಎಂಗೆ ಹೇಳಲಿ ಎಂದು ಸಲಹೆ ನೀಡಿದ ಸಚಿವ ಆರ್‌‌.ಬಿ.ತಿಮ್ಮಾಪುರ 

Minister RB Timmapur Slams Opposition Party Leader R Ashok grg
Author
First Published Dec 4, 2023, 12:00 AM IST

ಬಾಗಲಕೋಟೆ(ಡಿ.04): ಮೊದಲು ವಿಪಕ್ಷ ನಾಯಕ ಆರ್‌.ಅಶೋಕ ಅವರು ಕೇಂದ್ರದಿಂದ ಎಷ್ಟು ಪರಿಹಾರ ತರುತ್ತಾರೆ ಎಂಬುವುದನ್ನು ಮೊದಲು ಹೇಳಲಿ. ವಿಪಕ್ಷ ನಾಯಕರು ಮಾತನಾಡುವ ಮಾತಿನಲ್ಲಿ ತೂಕ ಇರಬೇಕು. ವಿಪಕ್ಷ ನಾಯಕ ಆರ್‌.ಅಶೋಕ್‌ಗೆ ಎಲ್ಲಿದೆ ನೈತಿಕತೆ ಎಂದು ಸಚಿವ ಆರ್‌‌.ಬಿ.ತಿಮ್ಮಾಪುರ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಬರ ಎದುರಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ. ಬರ ಪರಿಹಾರ ನೀಡಿಲ್ಲ ಎಂದು ವಿಪ ನಾಯಕ ಆರ್‌‌.ಅಶೋಕ ನೀಡಿದ್ದ ಹೇಳಿಕೆಗೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ನಾವು ರಾಜ್ಯ ಸರ್ಕಾರದಿಂದ ಬರ ಪರಿಹಾರ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರದ ಎನ್‌ಡಿಆರ್‌‌ಎಫ್ ಕೊಡಬೇಕಲ್ಲ, ಕಾಂಗ್ರೆಸ್‌ ಪಕ್ಷದ ನಿಯೋಗ ಭೇಟಿಗೆ ಕೇಂದ್ರಕ್ಕೆ ತೆರಳಿದರೆ, ಭೇಟಿಗೂ ಬಿಡ್ತಿಲ್ಲ. ಇಂಥ ಕೇಂದ್ರ ಸರ್ಕಾರ ನಮ್ಮಲ್ಲಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ವಿಪಕ್ಷ ನಾಯಕ ಅಶೋಕ ಮಾಧ್ಯಮಗಳಿಗೆ ಹೇಳೋದು ಬಿಟ್ಟು ಪಿಎಂಗೆ ಹೇಳಲಿ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಎಲ್ಲ ಸಮುದಾಯದ ಜನಪ್ರಿಯ ನಾಯಕ: ಜೆ.ಟಿ.ಪಾಟೀಲ

ಅಧಿವೇಶನಲ್ಲಿ ಉಕ ಸಮಸ್ಯೆ ಚರ್ಚೆ:

ಬೆಳಗಾವಿ ಅಧಿವೇಶನದಲ್ಲಿ ಕೇವಲ ಕಾಲಹರಣವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ತಿಮ್ಮಾಪೂರ, ಅಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತದೆ, ವಿಶೇಷವಾಗಿ ಮುಳುಗಡೆ ವಿಷಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತೆ ಎಂದರಲ್ಲದೇ ನಮ್ಮ ಸಿಎಂ ಅವರ ಜೊತೆ ನಾವು ಇದ್ದು ಸಮಸ್ಯೆ ಗಳಪರಿಹಾರಕ್ಕೆ ಮನವಿ ಮಾಡುತ್ತೇವೆ ಎಂದರು.

ಬಾದಾಮಿ: ನಾನು ರಾಜಕಾರಣ ಮಾಡುವ ಶಾಸಕನಲ್ಲ, ಕಾಂಗ್ರೆಸ್‌ ಎಂಎಲ್‌ಎ ಚಿಮ್ಮನಕಟ್ಟಿ

ಉತ್ತರ ಕರ್ನಾಟಕದ ಸಮಸ್ಯೆಗಳು ಬೆಳಗಾವಿ ಅಧಿವೇಶನದಲ್ಲಿ ಅದು ಕೊನೆ ಗಳಿಗೆಯಲ್ಲಿ ಚರ್ಚೆ ಆಗ್ತಿವೆ ಅನ್ನೋದು ನಿಮ್ಮ ವಾದವಾಗಿದೆ. ಈ ಬಾರಿ ಸಿಎಂ ಅವರಿಗೆ ಹೇಳಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನ ಆರಂಭದಲ್ಲೇ ಚರ್ಚೆ ಮಾಡುವಂತೆ ಮನವಿ ಮಾಡುತ್ತೇವೆ. ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆಗುವುದಿಲ್ಲ ಎಂಬ ಪ್ರಶ್ನೆಗೆ ಸಚಿವ ತಿಮ್ಮಾಪೂರ ಪ್ರತಿಕ್ರಿಯೆ ನೀಡಿ, ನಮ್ಮಲ್ಲಿರುವ ಸಮಸ್ಯೆ ಕುರಿತು ಸಿಎಂ ಜೊತೆ ಚರ್ಚೆ ಆಗುತ್ತವೆ. ಮುಳುಗಡೆ ಸಮಸ್ಯೆ ಕುರಿತು ಸಿಎಂಗೆ ಮನವಿ ಜೊತೆಗೆ ಮನವರಿಕೆ ಮಾಡಿಕೊಡುತ್ತೇವೆ. ಇಲ್ಲಿನ ಜನಪ್ರತಿನಿಧಿಗಳ ಜೊತೆಗೆ ನಾವು ಇರುತ್ತೇವೆ. ಈ ಭಾಗದ ಬಗ್ಗೆ ಚರ್ಚೆ ಆಗುತ್ತದೆ. ಆ ಬಗ್ಗೆ ನಾನು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಸಚಿವ ತಿಮ್ಮಾಪುರ ವಿಶ್ವಾಶ ವ್ಯಕ್ತಪಡಿಸಿದರು.

ಜನತೆಯ ತೀರ್‌ಪಿಗೆ ತಲೆಬಾಗಲೇಬೇಕು

ಪಂಚರಾಜ್ಯಗಳ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿನಾ? ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಸಚಿವ ಆರ್‌.ಬಿ.ತಿಮ್ಮಾಪೂರ ಮಾತನಾಡಿ, ರಾಮಕೃಷ್ಣ ಹೆಗಡೆ ಸಾಹೇಬ್ರನ ಗೆಲ್ಲಿಸಿ, 6 ತಿಂಗಳೂ ಆಗಿರಲಿಲ್ಲ, 28 ಜನ ಕಾಂಗ್ರೆಸ್‌ನವರನ್ನು ಲೋಕಸಭೆಗೆ ಗೆಲ್ಲಿಸಿದ್ದರು. ಲೋಕಸಭೆಯೇ ಬೇರೆ, ವಿಧಾನಸಭೆಯೇ ಬೇರೆ. ಒಂದು ಹಂತದಲ್ಲಿ ಸೆಮಿಫೈನಲ್ ಅಂತಾರೆ. ಆದರೆ, ರಾಜ್ಯದ ಇತಿಹಾಸದಲ್ಲೇ ನಾವು ಇಂಥ ಹಲವು ಫಲಿತಾಂಶಗಳನ್ನು ನೋಡಿದ್ದೇವೆ. ಜನತೆಯ ತೀರ್‌ಪಿಗೆ ತಲೆ ಬಾಗಲೇಬೇಕು ಎಂದರು.

Follow Us:
Download App:
  • android
  • ios