ಬಾದಾಮಿ: ನಾನು ರಾಜಕಾರಣ ಮಾಡುವ ಶಾಸಕನಲ್ಲ, ಕಾಂಗ್ರೆಸ್ ಎಂಎಲ್‌ಎ ಚಿಮ್ಮನಕಟ್ಟಿ
ಮತಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ, ಸಲಹೆ ನನಗೆ ಬೇಕು. ಆದರೆ ಅಂದು ಕಾಮಗಾರಿಗೆ ವಿರುದ್ಧವಾಗಿ ಪ್ರತಿಭಟನೆ ಮಾಡಿಸಿ ರಾಜಕಾರಣ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮಾಡಿದವರಿಗೆ ಕೇಳಿ ಎಂದ ಶಾಸಕ ಭೀಮಸೇನ ಚಿಮ್ಮನಕಟ್ಟಿ
ಗುಳೇದಗುಡ್ಡ(ಡಿ.04): ನಾನು ರಾಜಕಾರಣ ಮಾಡುವ ಶಾಸಕನಲ್ಲ. ನನಗೆ ಎಲ್ಲರೂ ಬೇಕು. ನಾನು ಜಾತಿ, ಧರ್ಮ ನೋಡಿ ಕೆಲಸ ಮಾಡುವವನಲ್ಲ. ನಮ್ಮ ತಂದೆ ನನಗೆ ಅದನ್ನು ಕಲಿಸಿಲ್ಲ. ಮತಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ, ಸಲಹೆ ನನಗೆ ಬೇಕು. ಆದರೆ ಅಂದು ಕಾಮಗಾರಿಗೆ ವಿರುದ್ಧವಾಗಿ ಪ್ರತಿಭಟನೆ ಮಾಡಿಸಿ ರಾಜಕಾರಣ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮಾಡಿದವರಿಗೆ ಕೇಳಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ರಸ್ತೆ ಕಾಮಗಾರಿ ಏಕೆ ತಡವಾಯ್ತು ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ನಾನು ಈ ಮೊದಲು ಈ ತೊಂದರೆ ನಿಮಾರಣೆಗೆ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಇಂಜನಿಯರ್ ಹಾಗೂ ಗುತ್ತಿಗೆದಾರರನ್ನು ಕಳಿಸಿದ್ದೆ. ಆದರೆ, ಕೆಲವು ಜನ ಅದನ್ನು ತಡೆದು ಕಾಮಗಾರಿ ನಿಲ್ಲಿಸಿದರು. ಇದು ಸರಿಯೇ? ಎಂದು ಮರು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಅನ್ಯಾಯ, ಬಿಎಸ್‌ವೈಗೆ ಆದ ಸ್ಥಿತಿ ವಿಜಯೇಂದ್ರನಿಗೂ ಬರಲಿದೆ: ಸಚಿವ ತಿಮ್ಮಾಪುರ
ಕಳೆದ ಬಹಳದಿನಗಳಿಂದ ಸಾರ್ವಜನಿಕರಿಗೆ ತೊಂದರೆಯಾದ ಬಗ್ಗೆ ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ರಸ್ತೆ ದುರಸ್ತಿ ಬಗ್ಗೆ ಹೇಳಿದ್ದರು. ಆದರೆ, ಕೆಲವು ತೊಂದರೆಯಿಂದ ಕಾಮಗಾರಿ ತಡವಾಯಿತು. ಪಟ್ಟಣದ ಗುಲಾಬ್ ಚಿತ್ರಮಂದಿರದಿಂದ ಹರದೊಳ್ಳಿ ಕಮತಗಿ ನಾಕಾದವರೆಗೆ ಸುಮಾರು 900 ಮೀ. ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದೂ ಡಿ.3 ರಂದು ಕಾಮಗಾರಿಗೆ ಭೂಮಿಪೂಜೆ ಮಾಡಲಾಗುವುದೆಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ, ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ, ಪ್ರಕಾಶ ಮೇಟಿ, ಮೂಕಪ್ಪ ಹೂನೂರ ಹಾಗೂ ಕಾರ್ಯಕರ್ತರು ಇದ್ದರು.