ಪಾಪ ಯತ್ನಾಳ ಏನೋ ಆಗಬೇಕು ಎಂದು ಕಷ್ಟಪಟ್ಟು ಏನೇನೋ ಗಿಮಿಕ್‌ ಮಾಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದರಿಂದ ನಮಗೇ ಅನುಕೂಲ ಆಗಲಿದೆ. ಹೀಗಾಗಿ, ಬಿಜೆಪಿ ಯತ್ನಾಳರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದ ಸಚಿವ ಆರ್‌.ಬಿ.ತಿಮ್ಮಾಪೂರ 

ಬಾಗಲಕೋಟೆ(ಆ.16): ಯತ್ನಾಳ್‌ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಟ್ಟರೆ ಕಾಂಗ್ರೆಸ್‌ಗೆ ಇನ್ನಷ್ಟುಅನುಕೂಲ ಆಗುತ್ತದೆ. ಬಿಜೆಪಿಯವರು ಮೊದಲು ಆ ಕೆಲಸ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಲೇವಡಿ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ಪಾಪ ಯತ್ನಾಳ ಏನೋ ಆಗಬೇಕು ಎಂದು ಕಷ್ಟಪಟ್ಟು ಏನೇನೋ ಗಿಮಿಕ್‌ ಮಾಡುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದರಿಂದ ನಮಗೇ ಅನುಕೂಲ ಆಗಲಿದೆ. ಹೀಗಾಗಿ, ಬಿಜೆಪಿ ಯತ್ನಾಳರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದರು.

ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

ಕಾಂಗ್ರೆಸ್‌ನಲ್ಲಿ ಯಾವ ಶಾಸಕರಲ್ಲೂ ಅಸಮಾಧಾನವಿಲ್ಲ. ಅದೆಲ್ಲ ಬಿಜೆಪಿಯ ಕಪೋಲಕಲ್ಪಿತ ವಿಚಾರ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ತಿಮ್ಮಾಪೂರ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು, ಕೇಳಲು, ಅವಕಾಶ ಇದೆ. ಭಿನ್ನಾಭಿಪ್ರಾಯಗಳು ಇವೆ ಎಂದಾದರೆ ಚರ್ಚೆ ಮಾಡಿ ಸರಿ ಮಾಡಿಕೊಳ್ಳುತ್ತೇವೆ. ಇಂಥ ಭಿನ್ನಾಭಿಪ್ರಾಯಗಳನ್ನೇ ದೊಡ್ಡದಾಗಿ ಬಿಂಬಿಸುವುದು ಬಿಜೆಪಿಯ ದಂಧೆ ಆಗಿದೆ. ಇದನ್ನೆಲ್ಲ ಅರಿತೇ ಜನರು ಬಿಜೆಪಿಯವರನ್ನು ಮನೆಗೆ ಕಳುಹಿಸಿದ್ದಾರೆ. ಆದರೆ, ಅ​ಧಿಕಾರದ ಹಪಾಹಪಿ ಹೊಂದಿರುವ ಬಿಜೆಪಿಗರು ಈಗ ಅಡ್ಡದಾರಿ ಹಿಡಿಯೋಣ, ಉದ್ದ ದಾರಿ ಹಿಡಿಯೋಣ, ಅಲ್ಲಿ ದುಡ್ಡು ತರೋಣ, ಇಲ್ಲಿ ದುಡ್ಡು ತರೋಣ ಎಂದು ಹುಚ್ಚು ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಆದರೆ, ಈ ಬಾರಿ ಅವರ ಆಟ ನಡೆಯುವುದಿಲ್ಲ ಎಂದು ತಿಮ್ಮಾಪೂರ ಹೇಳಿದರು.