ದೇಶದಲ್ಲಿರುವ ಭ್ರಷ್ಟರೆಲ್ಲ ಬಿಜೆಪಿಯಲ್ಲಿದ್ದಾರೆ: ರಾಮಲಿಂಗಾರೆಡ್ಡಿ ಆರೋಪ
ಬೇರೆ ಬೇರೆ ಪಕ್ಷಗಳಲ್ಲಿದ್ದ ಭ್ರಷ್ಟರ ಮೇಲೆಯೂ ಇಡಿ, ಐಟಿ ಛೂ ಬಿಟ್ಟು ಬಿಜೆಪಿಗೆ ಸೇರಿಸಿಕೊಂರು. ಅವರನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕಿ ಕ್ಲೀನ್ ಚಿಟ್ ಕೊಡುತ್ತಾರೆ. ಭ್ರಷ್ಟರ ಮೇಲೆ ದಾಳಿ ನಡೆಸಿ ಅವರಿಂದಲೇ ಸುಮಾರು 9 ಸಾವಿರ ಕೋಟಿ ಚುಣಾವಣಾ ಬಾಂಡ್ ಪಡೆದಿದ್ದಾರೆ. ಇದು ಪ್ರಪಂಚದಲ್ಲೇ ಅತೀ ದೊಡ್ಡ ಹಗರಣ: ಸಚಿವ ರಾಮಲಿಂಗಾರೆಡ್ಡಿ
ಸಿಂಧನೂರು(ಮೇ.05): ಬಿಜೆಪಿಗರು ಸತ್ಯ ಹರಿಶ್ಚಂದ್ರರಂತೆ ವರ್ತಿಸುತ್ತಿದ್ದಾರೆ. ನಾ ಕಾವುಂಗಾ ನಾ ಕಾನೆ ದೇವುಂಗಾ ಎಂದು ಮೋದಿ ಹೇಳುತ್ತಾರೆ. ಆದರೆ ಇಡೀ ದೇಶದಲ್ಲಿರುವ ಭ್ರಷ್ಟರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಬೇರೆ ಪಕ್ಷಗಳಲ್ಲಿದ್ದ ಭ್ರಷ್ಟರ ಮೇಲೆಯೂ ಇಡಿ, ಐಟಿ ಛೂ ಬಿಟ್ಟು ಬಿಜೆಪಿಗೆ ಸೇರಿಸಿಕೊಂರು. ಅವರನ್ನು ವಾಷಿಂಗ್ ಮಷಿನ್‌ನಲ್ಲಿ ಹಾಕಿ ಕ್ಲೀನ್ ಚಿಟ್ ಕೊಡುತ್ತಾರೆ. ಭ್ರಷ್ಟರ ಮೇಲೆ ದಾಳಿ ನಡೆಸಿ ಅವರಿಂದಲೇ ಸುಮಾರು 9 ಸಾವಿರ ಕೋಟಿ ಚುಣಾವಣಾ ಬಾಂಡ್ ಪಡೆದಿದ್ದಾರೆ. ಇದು ಪ್ರಪಂಚದಲ್ಲೇ ಅತೀ ದೊಡ್ಡ ಹಗರಣ. ಈ ಬಾರಿ ಮೋದಿ ಗೆದ್ದರೆ ದೇಶದಲ್ಲಿ ಚುನಾವಣೆಗಳೇ ನಡೆಯುವದಿಲ್ಲ ಎಂದು ವಿತ್ತ ಸಚಿವ ನಿರ್ಮಲಾ ಸೀತರಾಮನ್ ಅವರ ಪತಿಯೇ ಹೇಳಿದ್ದಾರೆ ಎಂದು ದೂರಿದರು.
ಪ್ರಜ್ವಲ್ ರೇವಣ್ಣ ಕೇಸ್: ಇದು ಪ್ರಪಂಚದ ಅತೀ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ, ಕೃಷ್ಣಭೈರೇಗೌಡ
ದೇಶದಲ್ಲಿ ಬಿಜೆಪಿಯ ಕೆಟ್ಟ ಆಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಬಡ ವರ್ಗದ ಜನತೆಗೆ ಅನುಕೂಲವಾಗಲು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದಿದ್ದೇವೆ. ಮೋದಿ ಕೊಟ್ಟ ಮಾತು ಯಾವುದು ಉಳಿಸಿಕೊಂಡಿಲ್ಲ. ಶೀಘ್ರ ಆರ್‌ಟಿಒ ಕಚೇರಿ ಮಂಜೂರು:
ಶೀಘ್ರವೇ ಸಿಂಧನೂರಿಗೆ ಎಆರ್‌ಟಿಒ ಕಚೇರಿ ಮಂಜೂರು ಮಾಡಲಾಗುವುದು. ರಾಜ್ಯದಲ್ಲಿಯೇ ಅತೀ ಹೆಚ್ಚು ವಾಹನಗಳ ನೋಂದಣಿ ಸಿಂಧನೂರು ತಾಲೂಕಿನಿಂದ ಆಗುತ್ತಿವೆ. ಆಯುಕ್ತರ ಹತ್ತಿರ ಫೈಲ್ ಇದ್ದು, ನನ್ನ ಬಳಿ ಬಂದ ತಕ್ಷಣವೇ ಅನುಮೋದನೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮುಖಂಡರು ಇದ್ದರು.