ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿ: ಪ್ರಿಯಾಂಕ್ ಖರ್ಗೆ
ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿರುವ ಪ್ರಧಾನಿ ಮೊದಿ ಹೆಸರಲ್ಲಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅವುಗಳಿಗೆ ವಾರಂಟಿ ಇಲ್ಲಾ ಅವರದ್ದು ಏನಿದ್ದರೂ ಪೇಪರ ಮೇಲಿನ ಗ್ಯಾರಂಟಿಗಳು ನಮ್ಮ ಗ್ಯಾರಂಟಿಗಳು ಜನರ ಕೈಯಲ್ಲಿ ಇವೆ ಎಂದು ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಚಿತ್ತಾಪುರ(ಏ.18): ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೊದಿಯವರು ಕಳೆದ ಹತ್ತು ವರ್ಷಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಯೊಜನೆಗಳನ್ನು ರೂಪಿಸದೇ ಮನ್‌ಕೀ ಬಾತ್ ಕಾರ್ಯಕ್ರಮದ ಮೂಲಕ ದೂರದರ್ಶನ ಹಾಗೂ ರೇಡಿಯೊದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ನಾವು ವಿಧಾನಸಭೆ ಚುನಾವಣೆಯಲ್ಲಿ ನೀಡಿದ ೫ ಗ್ಯಾರಂಟಿಗಳನ್ನು ಕೇವಲ ೮ ತಿಂಗಳಲ್ಲಿ ಜಾರಿಗೊಳಿಸಿ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇರುವ ವ್ಯಾತ್ಯಾಸದ ಗ್ಯಾರಂಟಿಯಾಗಿದೆ ಎಂದು ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸಭೆ ವ್ಯಾಪ್ತಿಯ ಭಂಕೂರ ಮತ್ತು ರಾವೂರ ಜಿಪಂ ವ್ಯಾಪ್ತಿಯಲ್ಲಿ ಲೊಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಅಚ್ಛೆದಿನ್ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದಿದ್ದು ಅಚ್ಛೆ ದಿನ್ ಬದಲಾಗಿ ಬೆಲೆ ಏರಿಕೆ, ಸಿಲಿಂಡರ್ ಬೆಲೆ, ಪೆಟ್ರೋಲ್, ಡಿಜಲ್, ನಿರುದ್ಯೊಗ, ರೈತರ ಆತ್ಮಹತ್ಯೆ, ಕನಿಷ್ಟ ಬೆಂಬಲ ಬೆಲೆ ಹಾಗೂ ರೈತರ ಆದಾಯ ದ್ವೀಗುಣಗೊಳಿಸುವ ಯಾವ ಅಶ್ವಾಸನೆಗಳು ಈಡೇರಿಲ್ಲಾ. ಅವರಿಂದ ದೊಡ್ಡ ಉದ್ದಿಮೆದಾರರಿಗೆ ಅನುಕೂಲವಾಗಿದೆಯೇ ಹೊರತು ಸಾಮಾನ್ಯ ಜನರ ಸಮಸ್ಯೆಗಳಲ್ಲಾ ಎಂದರು. ಈಗ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿರುವ ಪ್ರಧಾನಿ ಮೊದಿ ಹೆಸರಲ್ಲಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅವುಗಳಿಗೆ ವಾರಂಟಿ ಇಲ್ಲಾ ಅವರದ್ದು ಏನಿದ್ದರೂ ಪೇಪರ ಮೇಲಿನ ಗ್ಯಾರಂಟಿಗಳು ನಮ್ಮ ಗ್ಯಾರಂಟಿಗಳು ಜನರ ಕೈಯಲ್ಲಿ ಇವೆ ಎಂದು ಟೀಕಿಸಿದರು.
ಚುನಾವಣೆ ಬಳಿಕ ಬಿಜೆಪಿ ಜೊತೆ ಜೆಡಿಎಸ್ ವಿಲೀನ: ಡಿ.ಕೆ.ಶಿವಕುಮಾರ್
ನಮ್ಮ ಜಿಲ್ಲೆಯ ಸಂಸದಾರಾಗಿ ೫ ವರ್ಷಗಳಲ್ಲಿ ಅವರ ಸಾಧನೆಯನ್ನು ಮತದಾರರ ಮುಂದೆ ಇಡದೇ ಸೊಲುವ ಭೀತಿಯಿಂದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನನ್ನ ವಿರುದ್ದ ಸುಳ್ಳು ಆರೊಪಗಳನ್ನು ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ತಾವು ತಮ್ಮ ಊರಿಗೆ ಸಂಸದ ಡಾ. ಜಾಧವ ಬಂದಾಗ ನಿನ್ನ ಅವಧಿಯಲ್ಲಿನ ಅಭಿವೃದ್ದಿ ಏನು ಎಂದು ಪ್ರಶ್ನೆ ಮಾಡಬೇಕು ಎಂದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ ಡಾ. ಉಮೇಶ ಜಾಧವ ಸುಳ್ಳುಗಾರ ಅವರು ಕೊಲಿ ಸಮಾಜವನ್ನು ಎಸ್‌ಟಿ ಸೇರಿಸುವದಾಗಿ ಹೇಳಿದ್ದರಿಂದ ನಾನು ಬಿಜೆಪಿಗೆ ಹೊಗಿದ್ದೇ. ಆದರೆ ಮೊಸ ಮಾಡಿದ ಅವನ ಮಾತನ್ನು ನಂಬಬೇಡಿ ಎಂದು ಹೇಳಿದರು. ಕಾಂಗ್ರೆಸ್ ಲೊಕಸಭೆ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನಾಗರೆಡ್ಡಿ ಪಾಟೀಲ್ ಕರದಾಳ, ಶಿವಾನಂದ ಪಾಟೀಲ್ ಮಾತನಾಡಿದರು.