ಅಧಿಕಾರ ಕಳೆದುಕೊಂಡು ನೂರು ದಿನವಾಗಿದೆ, ಹತಾಷರಾಗಿದ್ದಾರೆ. ಮೊದಲು ತಮ್ಮ ಮನೆಯಂಗಳದ ಕಸ ಗುಡಿಸಲಿ, ಬಳಿಕ ನಮ್ಮ ಬಗ್ಗೆ ಮಾತನಾಡಲಿ ಎಂದು ತಿವಿದರು. ನಾವು ನಮ್ಮ ಐದು ಗ್ಯಾರಂಟಿ ಪೈಕಿ ನಾಲ್ಕನ್ನು ಈಡೇಸ್ತಿದೀವಿ. ಚಂದ್ರಯಾನ ಚಂದ್ರನ ಅಂಗಳ ತಲುಪಿದೆ. ಆದರೂ ಇಲ್ಲಿ ಬಿಜೆಪಿ ನಾಯಕರು ಯಾರು ಅಂತ ಇನ್ನೂ ಗೊತ್ತಾಗ್ತಿಲ್ಲ ಎಂದು ಲೇವಡಿ ಮಾಡಿದ ಪ್ರಿಯಾಂಕ್‌ ಖರ್ಗೆ 

ಕಲಬುರಗಿ(ಆ.30): ಇಸ್ರೋದ ಚಂದ್ರಯಾನದ ವಿಕ್ರಂ ಲ್ಯಾಂಡರ್‌ ಚಂದ್ರನ ಚುಂಬಿಸಿತು. ಆದರೆ ರಾಜ್ಯದ ಬಿಜೆಪಿಯವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನ ನೇಮಕ ಮಾಡೋದಕ್ಕಾಗಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ಸರ್ಕಾರದ ನೂರು ದಿನದ ಆಡಳಿತದ ಬಗ್ಗೆ ಬಿಜೆಪಿ ಚಾರ್ಜ್‌ಶೀಟ್‌ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಅಧಿಕಾರ ಕಳೆದುಕೊಂಡು ನೂರು ದಿನವಾಗಿದೆ, ಹತಾಷರಾಗಿದ್ದಾರೆ. ಮೊದಲು ತಮ್ಮ ಮನೆಯಂಗಳದ ಕಸ ಗುಡಿಸಲಿ, ಬಳಿಕ ನಮ್ಮ ಬಗ್ಗೆ ಮಾತನಾಡಲಿ ಎಂದು ತಿವಿದರು. ನಾವು ನಮ್ಮ ಐದು ಗ್ಯಾರಂಟಿ ಪೈಕಿ ನಾಲ್ಕನ್ನು ಈಡೇಸ್ತಿದೀವಿ. ಚಂದ್ರಯಾನ ಚಂದ್ರನ ಅಂಗಳ ತಲುಪಿದೆ. ಆದರೂ ಇಲ್ಲಿ ಬಿಜೆಪಿ ನಾಯಕರು ಯಾರು ಅಂತ ಇನ್ನೂ ಗೊತ್ತಾಗ್ತಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯ ಬಿಜೆಪಿಯವರು ಸರ್ವಾಧಿಕಾರದ ಸಂತ್ರಸ್ತರು: ಪ್ರಿಯಾಂಕ್‌ ವ್ಯಂಗ್ಯ

ಅಲ್ಲದೆ, ಬಿಜೆಪಿಯವರು ಹತಾಷರಾಗಿ ಬ್ಯಾರಿಕೇಡ್‌ ಬಂಧಿಯಾಗಿದ್ದಾರೆ. ಬಿಜೆಪಿಯ ರಾಜ್ಯ ನಾಯಕರಿಗೇ ಮೋದಿ ಭೇಟಿ ಸಾಧ್ಯವಾಗಿಲ್ಲ. ಇನ್ನು ಈ ಬೆಳವಣಿಗೆಯಿಂದ ಕನ್ನಡಿಗರ ಮರ್ಯಾದೆ ಬೀದಿಗೆ ಬಂದಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಅದೆಷ್ಟು ತಾಕತ್ತಿನದ್ದಾಗಿದೆ ಎಂಬುದನ್ನು ಇದು ತೋರಿಸುತ್ತಿದ್ದಾರೆಂದು ಟೀಕಿಸಿದರು.