Asianet Suvarna News Asianet Suvarna News

ರಾಜ್ಯ ಬಿಜೆಪಿಯವರು ಸರ್ವಾಧಿಕಾರದ ಸಂತ್ರಸ್ತರು: ಪ್ರಿಯಾಂಕ್‌ ವ್ಯಂಗ್ಯ

ಪ್ರಧಾನಿ ಗಮನ ಸೆಳೆಯಲು ಹೀಗೆ ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವ ಬೀದಿಪಾಲು ಮಾಡಿಕೊಂಡಿರುವುದು ಕರುಣಾಜನಕವಾಗಿದೆ ಎಂದು ಹೇಳಿದ ಸಚಿವ ಪ್ರಿಯಾಂಕ್‌ ಖರ್ಗೆ 

Minister Priyank Kharge Slams Karnataka BJP grg
Author
First Published Aug 27, 2023, 4:00 AM IST

ಕಲಬುರಗಿ(ಆ.27):  ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ ಅಭಿನಂದಿಸಲು ಶನಿವಾರ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಬಿಜೆಪಿ ಮುಖಂಡರು ಬ್ಯಾರಿಕೇಡ್‌ ಹಿಂದೆಯೇ ನಿಂತು ಗಮನ ಸೆಳೆಯಲು ಯತ್ನಿಸಿದ ವಿದ್ಯಮಾನ ಬಿಜೆಪಿಗರು ಸರ್ವಾಧಿಕಾರದ ಸಂತ್ರಸ್ತರಾಗಿರುವುದನ್ನು ಸಾಬೀತುಪಡಿಸುವಂತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ. 

ಕಟೀಲ್‌, ಅಶೋಕ್‌, ಮುನಿರತ್ನ ಮತ್ತಿತರ ರಾಜ್ಯ ಬಿಜೆಪಿ ಮುಖಂಡರು ರಸ್ತೆಬದಿ ಅಳವಡಿಸಿದ್ದ ಬ್ಯಾರಿಕೇಡ್‌ ಹಿಂದೆ ನಿಂತಿರುವ ಚಿತ್ರಗಳನ್ನು ಟ್ವೀಟ್‌ ಮಾಡಿರುವ ಸಚಿವ ಪ್ರಿಯಾಂಕ್‌, ಪ್ರಧಾನಿ ಗಮನ ಸೆಳೆಯಲು ಹೀಗೆ ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವ ಬೀದಿಪಾಲು ಮಾಡಿಕೊಂಡಿರುವುದು ಕರುಣಾಜನಕವಾಗಿದೆ ಎಂದು ಹೇಳಿದ್ದಾರೆ. 

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಮುಂದಾ​ಗಿ: ಸಚಿವ ಪ್ರಿಯಾಂಕ್‌ ಖರ್ಗೆ

ಇವರೆಲ್ಲಾ ‘ಬ್ಯಾರಿಕೇಡ್‌ ಬಂಧಿಗಳು’. ರಾಜ್ಯ ಬಿಜೆಪಿ ಮುಖಂಡರನ್ನು ಇಷ್ಟೊಂದು ತಿರಸ್ಕಾರಕ್ಕೆ ಒಳಪಡಿಸಿರುವಾಗ ಇನ್ನು ವಿರೋಧ ಪಕ್ಷದ ನಾಯಕರ ಆಯ್ಕೆ ಸಾಧ್ಯವಾಗುವುದೇ? ಎಂದೂ ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios