ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ವೀರ್ ಸಾವರ್ಕರ್ ಸೋಲಿಸಿದ್ದಾರೆ ಎಂಬುದನ್ನು ನಿರೂಪಿಸುವ ಅಂಬೇಡ್ಕರ್ ಪತ್ರ ಬಿಡುಗಡೆ ಮಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ.
ಬೆಂಗಳೂರು (ಮೇ.07): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ವೀರ್ ಸಾವರ್ಕರ್ ಸೋಲಿಸಿದ್ದಾರೆ ಎಂಬುದನ್ನು ನಿರೂಪಿಸುವ ಅಂಬೇಡ್ಕರ್ ಪತ್ರ ಬಿಡುಗಡೆ ಮಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಈ ಕುರಿತು ಸವಾಲು ಹಾಕಿದ್ದ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಲಿ ಎಂದು ತಿರುಗೇಟು ನೀಡಿದ್ದಾರೆ. ನಾರಾಯಣಸ್ವಾಮಿ ತಾವೇ ಹೇಳಿದಂತೆ ಮುಂದಿನ 24 ಗಂಟೆ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು.
ಯಾರ ಬಳಿ ಕ್ಷಮೆ ಕೇಳಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದು ಮಾತಿನ ಚಾಟಿ ಬೀಸಿದರು. ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಪ್ರಿಯಾಂಕ್ ಖರ್ಗೆ, ತಮ್ಮ ಸೋಲಿಗೆ ಸಾರ್ವಕ ಕಾರಣ ಎಂದು ಅಂಬೇಡ್ಕರ್ ಬರೆದಿದ್ದಾರೆ ಎನ್ನಲಾದ ಪತ್ರ ಬಿಡುಗಡೆ ಮಾಡಿದರು. ಡಾ| ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಸ್ನೇಹಿತ ಕಮಲಕಾಂತ್ ಅವರಿಗೆ ಬರೆದಿದ್ದ ಪತ್ರದಲ್ಲಿ ತಮ್ಮ ಸೋಲಿಗೆ ಡಾಂಗೆ ಮತ್ತು ಸಾವರ್ಕರ್ ಕಾರಣ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ನಾವು ಸಾಬೀತುಪಡಿಸಿದ್ದೇವೆ.
ಹೀಗಾಗಿ ಡಾಂಗೆ ಮತ್ತು ಸಾವರ್ಕರ್ ಅವರು ಅಂಬೇಡ್ಕರ್ ಸೋಲಿಗೆ ಕಾರಣ ಎಂಬುದನ್ನು ಸಾಬೀತುಪಡಿಸಿ ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಹೇಳಿದ ಛಲವಾದಿ ನಾರಾಯಣಸ್ವಾಮಿ ತಾವು ಹೇಳಿದಂತೆ ನಡೆ ದುಕೊಳ್ಳಬೇಕು. ಇದರ ಜತೆಗೆ, ಅವರು ಘೋಷಿಸಿದಂತೆ ಒಂದು ಲಕ್ಷದ ಒಂದು ರುಪಾಯಿಯ ಇನಾಮು ನಮಗೆ ನೀಡುವುದು ಬೇಡ, ಬದಲಿಗೆ ಪಂಚಾಯತ್‌ರಾಜ್ ಇಲಾಖೆಗೆ ನೀಡಲಿ. ಆ ಹಣದಲ್ಲಿ ನಮ್ಮ ಅರಿವು ಕೇಂದ್ರಗಳಿಗೆ ಪುಸ್ತಕಗಳನ್ನು ಖರೀದಿಸುತ್ತೇವೆ. ಅದರ ರಸೀದಿಯನ್ನೂ ಅವರಿಗೆ ತಲುಪಿಸುತ್ತೇವೆ ಎಂದು ಟಾಂಗ್ ಕೊಟ್ಟರು.
ಫೇಲ್ ಆದವರಿಂದ ಪತ್ರ ವಿಶ್ಲೇಷಣೆ ಅಸಾಧ್ಯ: ಛಲವಾದಿ ನಾರಾಯಣಸ್ವಾಮಿ
ಅಂಬೇಡ್ಕರ್ ತಮ್ಮ ಚುನಾವಣಾ ಸೋಲಿಗೆ ಸಾವರ್ಕ‌್ರಕಾರಣ ಎಂದು ಹೇಳಿದ ಪತ್ರ ಈಗಾಗಲೇ ಜಗಜ್ಜಾಹೀರಾಗಿದೆ. ಬಿಜೆಪಿ ನಾಯಕರು ಸಾಧ್ಯವಾದರೆ ದೆಹಲಿ ಪ್ರವಾಸ ಕೈಗೊಂಡು, ಅಂಬೇ ಡ್ಕರ್ ಅವರ ಪತ್ರಗಳ ಸಂಗ್ರಹವಿರುವ ರಾಷ್ಟ್ರೀಯ ದಾಖಲೆಗಳ ಸಂಸ್ಥೆಗೆ ಭೇಟಿ ನೀಡಲಿ. ಅವರ ಪ್ರವಾಸದ ಖರ್ಚು ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿದೆ. ಬಿಜೆಪಿ ನಾಯಕರಿಗೆ ಅಲ್ಲಿರುವ 313 ಪೇಪರ್ ಓದಲು ಬರುವುದಿಲ್ಲ ಎನ್ನುವುದು ಗೊತ್ತಿದೆ ಎಂದರು.