ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಿತ್ತಾಪೂರ ಮರಳು ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿರುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಈ ಹಿಂದಿನ ಆರೋಪಗಳ ಬಗ್ಗೆ ನೆನಪಿಸಿ‌ ಬಿಜೆಪಿ ನಾಯಕರಿಗೆ ವ್ಯಂಗ್ಯೋಕ್ತಿ ಮೂಲಕ ಜಿಲ್ಲೆಗೆ ಸ್ವಾಗತ ಕೋರಿದ್ದಾರೆ.

ಕಲಬುರಗಿ (ಏ.20): ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಿತ್ತಾಪೂರ ಮರಳು ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿರುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಈ ಹಿಂದಿನ ಆರೋಪಗಳ ಬಗ್ಗೆ ನೆನಪಿಸಿ‌ ಬಿಜೆಪಿ ನಾಯಕರಿಗೆ ವ್ಯಂಗ್ಯೋಕ್ತಿ ಮೂಲಕ ಜಿಲ್ಲೆಗೆ ಸ್ವಾಗತ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿರುವ ಖರ್ಗೆ, ಈ ಹಿಂದೆ ತಾವು ಕಲಬುರಗಿಗೆ ಬಂದಾಗ ಸಾಕಷ್ಟು ಆರೋಪ ಮಾಡಿದ್ರಿ, ಪ್ರಿಯಾಂಕ್ ಖರ್ಗೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್‌ರನ್ನು ಕೊಲ್ಲಲು ಪ್ರಯತ್ನಿಸಿದ್ದರು ಎಂದಿದ್ರಿ, ಈ ಆರೋಪದ ಕಥೆ ಏನಾಯಿತು?. ಪ್ರಿಯಾಂಕ್ ಖರ್ಗೆ ಸಚಿನ್ ಪಾಂಚಾಲ್ ಸಾವಿಗೆ ಕಾರಣ ಎಂದಿದ್ರಿ ದಯವಿಟ್ಟು ಈ ಪ್ರಕರಣದ ತನಿಖೆಯ ಬಗ್ಗೆ ಜನರಿಗೆ ವಿವರಿಸಿ ಎಂದಿದ್ದಾರೆ.

ಈಗ ಹೊಸ ಆರೋಪವಾಗಿ ಅಕ್ರಮ ಮರಳು ಗಣಿಗಾರಿಕೆಯಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದೀರಿ ಇದು ಕೂಡ ಸುಳ್ಳು ಎಂದು ಸಾಬೀತಾಗುತ್ತದೆ. ಬಿಜೆಪಿಯವರ ಹಿಂದಿನ ಎಲ್ಲಾ ಆರೋಪಗಳು ಹೂರಣವಿಲ್ಲದ ಹೋಳಿಗೆಯಂತೆ ಕಳೆದು ಹೋದವು ಎಂದು ತಿವಿದಿದ್ದಾರೆ. ಚಿತ್ತಾಪುರ ಕ್ಷೇತ್ರದ ನಿಮ್ಮ ಘನ ಅಭ್ಯರ್ಥಿ ಬಡವರ ಅಕ್ಕಿ ಕದಿಯುವ ಕಸುಬು ಮುಂದುವರೆಸಿರುವುದೇಕೆ? ಈ ಬಗ್ಗೆ ಬಿಜೆಪಿ ನಾಯಕರು ಮೊದಲು ಉತ್ತರಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪತ್ರಿಕೆಗಳ ಕ್ಲಿಪ್ಪಿಂಗ್‌ ಹಾಕಿ ಸಚಿವ ಪ್ರೀಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇ.ಡಿ ದಾಳಿ ಮಾಡಲಿ: ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಕುಗ್ಗುತ್ತಿದ್ದಂತೆಯೇ ಇವೆಲ್ಲ ದಾಳಿ ಶುರು ಆಗ್ತಾವೆ. ಆರ್ ಎಸ್ ಎಸ್ ಅವರಿಗೆ ಐಟಿ, ಇ.ಡಿ ಇಲ್ವಾ.? ಆರ್ ಎಸ್ ಎಸ್ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಖರ್ಗೆ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ಐಟಿ, ಇ.ಡಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ತಿದೆ. ಇಷ್ಟು ವರ್ಷ ಅವ್ರು ಎಲ್ಲಿ ಮನಿಲಾಂಡ್ರಿಗ್ ಆಗಿದೆ, ಹೇಗ್ ಆಗಿದೆ ಅಂತ ಪ್ರೂವ್ ಮಾಡಲು ಆಗಿಲ್ಲ. ಇದು ಎಜಿ, ನ್ಯಾಷನಲ್ ಹೆರಾಲ್ಡ್ ಅಲ್ಲಿ ಇರಬಹುದು, ಬೇರೆ ಸಂಸ್ಥೆಗಳು ನಾಟ್ ಫಾರ್ ಬೆನಿಫಿಟ್ ಸಂಸ್ಥೆಗಳು ಒಂದೂ ರುಪಾಯಿ ಕೂಡ ಅವರು ಡಿವಿಡೆಂಟ್, ಸ್ಯಾಲರಿ ತೊಗೊಳ್ಳುವ ಹಾಗಿಲ್ಲ. ಆದ್ರು ಕೂಡ ಇವರು ಐಟಿ, ಇ.ಡಿ ಅವರು ವೈಯುಕ್ತಿಕ ರಾಜಕೀಯ ದ್ವೇಷ ಸಾಧಿಸಲು ಕೇಂದ್ರದಿಂದ ಆರ್ಡರ್ ತೊಗೊತ್ತಿದ್ದಾರೆ ಎಂದರು.

ಅಧಿಕಾರ ಶಾಶ್ವತವಲ್ಲ, ಭಕ್ತಿ ಶಾಶ್ವತ: ಧರ್ಮಸ್ಥಳದಲ್ಲಿ ಡಿ.ಕೆ ಶಿವಕುಮಾರ್ ಭಾವನಾತ್ಮಕ ಭಾಷಣ

ಯಾವಾಗ ಮೋದಿ ಅವರ ಜನಪ್ರಿಯತೆ ಕಡಿಮೆ ಆಗುತ್ತೆ, ಬೆಲೆಯೇರಿಕೆ ಬಗ್ಗೆ ಜನ ಪ್ರಶ್ನೆ ಮಾಡ್ತಾರೆ ಆಗ ಮಾತ್ರ ಐಟಿ, ಇ.ಡಿ, ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ ನೆನಪಿಗೆ ಬರ್ತಾರೆ. ಇಷ್ಟು ವರ್ಷದಿಂದ ಏನ್ ಮಾಡಿದ್ರೆ, ಏನಾದ್ರು ದಾಖಲೆಗಳು ಸಿಕ್ಕಿವೆಯಾ? ಸ್ಪಷ್ಟತೆ ಸಿಕ್ಕಿದೆಯಾ? ಯಾಕೆ ಚಾರ್ಜಶೀಟ್ ಮಾಡ್ತಿದ್ದಾರೆ ಅಂತ ಗೊತ್ತೇ ಇಲ್ಲ, ಹೀಗೆ ಇವ್ರ ದಾಳಿಗಳು ಸಾಗಿವೆ ಎಂದು ಜರಿದರು. ಮನಿ ಲ್ಯಾಂಡ್ರಿಂಗ್, ಲ್ಯಾಂಡ್ ಡೀಲ್ ಎಲ್ಲಾಯ್ತು ಅಂತ ಏನಾದ್ರು ದಾಖಲೆಗಳು ಸಿಕ್ಕಿವೆಯಾ.? ಮೋದಿ ಜನಪ್ರಿಯತೆ ಕುಸಿತ ಆಗ್ತಿದೆ. ಇವೆಲ್ಲ ಮುಚ್ಚಿಹಾಕಲು ಇದರ ಮುಖಾಂತರ ನಡೆಯುತ್ತಿದೆ. ಎಲ್ಲಿ ಮನಿ ಲಾಂಡ್ರಿಂಗ್ ಆಗಿದೆ ಅಂತಾ ಹೇಳಲಿ. ನಿಜವಾಗಲೂ ಇವರು ಇಡಿ ದಾಳಿ ಮಾಡಬೇಕಾದ್ರೆ, ಎಲೆಕ್ಷನ್ ಬಾಂಡ್ ಬಗ್ಗೆ ದಾಳಿ ಮಾಡಬೇಕು. ಬಿಜೆಪಿಗೆ ಆರ್ ಎಸ್ ಎಸ್ ಅವರಿಗೆ ಐಟಿ, ಇ.ಡಿ ಇಲ್ವಾ.? ಆರ್ ಎಸ್ ಎಸ್ ಕಚೇರಿಗಳ ಮೇಲೆ ಇ.ಡಿ ದಾಳಿ ಮಾಡಬೇಕು ದೇಶದ ಜಿಲ್ಲೆಗಳಲ್ಲಿ 600 ಆರ್ ಎಸ್ ಎಸ್ ಹಾಗೂ ಬಿಜೆಪಿ ಅತ್ಯಾಧುನಿಕ ಕಚೇರಿಗಳನ್ನು ಕಟ್ಟಿದ್ದಾರೆ ಕಚೇರಿ ಕಟ್ಟಲು ಹಣ ಎಲ್ಲಿಂದ ಬಂತು.? ಎಂದು ಪ್ರಶ್ನಿಸಿದರು.