ಬಳ್ಳಾರಿಗೆ ಹೋಗುವುದಕ್ಕೆ ಜನಾರ್ಧನ ರೆಡ್ಡಿಗೆ ನ್ಯಾಯಾಲಯ ಈಗ ಒಪ್ಪಿಗೆ ಕೊಟ್ಟಿದ್ದು ಅವರು ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಜನಾರ್ಧನ ರೆಡ್ಡಿಗೆ ಈಗ ಯಾವುದೇ ಅಸ್ಥಿತ್ವ ಇಲ್ಲ. ಆದರೆ ಶ್ರೀರಾಮುಲುಗೆ ಒಂದಿಷ್ಟು ಹಿಡಿತ ಇರುವುದರಿಂದ ರೆಡ್ಡಿ ಶ್ರೀರಾಮುಲುನನ್ನು ಬಿಜೆಪಿಯಿಂದ ಹೊರಗೆ ಹಾಕುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.25): ಬಳ್ಳಾರಿಗೆ ಹೋಗುವುದಕ್ಕೆ ಜನಾರ್ಧನ ರೆಡ್ಡಿಗೆ ನ್ಯಾಯಾಲಯ ಈಗ ಒಪ್ಪಿಗೆ ಕೊಟ್ಟಿದ್ದು ಅವರು ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಜನಾರ್ಧನ ರೆಡ್ಡಿಗೆ ಈಗ ಯಾವುದೇ ಅಸ್ಥಿತ್ವ ಇಲ್ಲ. ಆದರೆ ಶ್ರೀರಾಮುಲುಗೆ ಒಂದಿಷ್ಟು ಹಿಡಿತ ಇರುವುದರಿಂದ ರೆಡ್ಡಿ ಶ್ರೀರಾಮುಲುನನ್ನು ಬಿಜೆಪಿಯಿಂದ ಹೊರಗೆ ಹಾಕುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಇವರಿಬ್ಬರು ನಾಯಕರಾಗುವುದಕ್ಕೆ ಅರ್ಹರಲ್ಲ ಎಂದು ಸಣ್ಣನೀರಾವರಿ ಹಾಗೂ ಕೊಡಗು ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ಕೊಡಗಿನ ವಿರಾಜಪೇಟೆ ಸಮೀಪದ ಬಿಟ್ಟಂಗಾಲದ ಕೆಇಬಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. 

ಶ್ರೀರಾಮುಲು ಜನಾರ್ಧನ ರೆಡ್ಡಿ ಇಬ್ಬರ ಜಗಳ ಅದು, ಅವರಿಬ್ಬರು ಅಂತವರೇ ಇದ್ದಾರೆ. ಅವರಿಬ್ಬರು ನಾಯಕರಾಗುವುದಕ್ಕೆ ಅರ್ಹರಲ್ಲ. ಅವರಿಬ್ಬರು ಏನು ಮಾಡಿದ್ದಾರೆ ಅಂತ ಇಡೀ ದೇಶಕ್ಕೆ ಗೊತ್ತಿದೆ. ಕಳ್ಳತನ ಮಾಡಿದವರು ಹೇಗೆ ಇರುತ್ತಾರೆ, ಒಬ್ಬರ ಮೇಲೊಬ್ಬರು ಹಾಕಿಕೊಳ್ಳುತ್ತಿದ್ದಾರೆ ಅಷ್ಟೇ. ಅದರಲ್ಲಿ ಕಾಂಗ್ರೆಸ್ ಗೆ ಏನು ಸಂಬಂಧ, ಶ್ರೀರಾಮುಲು ಮೂರು ಬಾರಿ ಸೋತಿದ್ದಾರೆ. ಕಾಂಗ್ರೆಸ್ ಗೆ ಅವರನ್ನು ಆಹ್ವಾನಿಸುವುದಕ್ಕೆ ಶ್ರೀರಾಮುಲು ಏನು ದೊಡ್ಡ ನಾಯಕರೇ ಎಂದು ಸಚಿವ ಭೋಸರಾಜ್ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ವಿರುದ್ಧ ಗರಂ ಆದರು. ಕೆಪಿಸಿಸಿ ಅಧ್ಯಕ್ಷರೂ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. 

ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

2023 ರ ಚುನಾವಣೆಗೂ ಮುನ್ನ ಸಾಕಷ್ಟು ಜನರೊಂದಿಗೆ ಮಾತನಾಡಿದ್ದಾರೆ. ಅದರಲ್ಲಿ ರಾಮುಲು ಕೂಡ ಒಬ್ಬರಿದ್ದಾರೆ. ಇದು ಸಾಗರ ಇದ್ದಂತೆ ಎಷ್ಟೋ ಜನರು ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ ಎಂದಿದ್ದಾರೆ. ವಿಪಕ್ಷಗಳನ್ನು ಅಸ್ಥಿರಗೊಳಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎನ್ನುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜ್ ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದ್ದಾರೆ. ದೇಶದಲ್ಲಿ ಅಸ್ಥಿರ ಅಂತ ತಂದಿದ್ದೇ ಬಿಜೆಪಿಯವರು, ಕರ್ನಾಟಕ ಸೇರಿದಂತೆ ದೇಶದಲ್ಲಿ ಆಪರೇಷನ್ ಅನ್ನುವ ಶಬ್ಧ ತಂದಿದ್ದೇ ಬಿಜೆಪಿ. 

ಅವರ ಜೊತೆಗೆ ಸೇರಿಕೊಂಡಿರುವ ಕುಮಾರಸ್ವಾಮಿ ಹೀಗೆ ಹೇಳುತ್ತಿದ್ದಾರೆ. ಹೀಗೆ ಹೇಳುವುದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದು ಸಚಿವ ಭೋಸರಾಜ್ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳು ನೀಡುತ್ತಿರುವ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಚಿವ ಸಂಪುಟ ಸಭೆ ನಡೆದಿದೆ. ಇವತ್ತು ಕಠಿಣವಾದ ಕಾನೂನು ತರುವುದಕ್ಕೆ ನಿರ್ಧಾರ ಆಗಲಿದೆ ಎಂದು ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜ್ ಹೇಳಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲಿ ಮಾತನಾಡಿದ ಅವರು ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. 

ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರೆ ಸ್ವಾಗತ: ಸಚಿವ ಚಲುವರಾಯಸ್ವಾಮಿ

ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಈ ರೀತಿ ಅನಾವುತ ಆಗದಂತೆ ಕ್ರಮವಾಗಲಿದೆ. ಇಂತಹ ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿಯೇ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುತ್ತಿತ್ತು. ಸಹಕಾರ ಸಂಘಗಳ ಮೂಲಕ ಸಾಲಕೊಡಲಾಗುತ್ತಿದೆ. ಆದರೂ ಜನರು ಈ ರೀತಿ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ಸಾಲ ತೆಗೆದುಕೊಳ್ಳಬಾರದೆಂದು ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಅನುದಾನ ಕೊಡುತ್ತಿದೆ. ಆದರೂ ಕೆಲವರು ಈ ರೀತಿ ಸಾಲ ತೆಗೆದುಕೊಂಡು ಸಮಸ್ಯೆ ಆಗುತ್ತಿದೆ. ಆದರೂ ಮೈಕ್ರೋ ಫೈನಾನ್ಸ್ ಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಭೋಸರಾಜ್ ಹೇಳಿದ್ದಾರೆ.