Asianet Suvarna News Asianet Suvarna News

ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್‌ಗೆ ಕೆಟ್ಟ ಪರಿಸ್ಥಿತಿ: ಸಚಿವ ಚೆಲುವರಾಯಸ್ವಾಮಿ

ಕುಮಾರಸ್ವಾಮಿಯವರು ಅತ್ಯಂತ ಪ್ರಭಾವಿ ವ್ಯಕ್ತಿಗಳು, ಅವರು ಸಹ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದಾರೆ. ಅವರ ಆಡಳಿತವನ್ನು ಒಂದು ಬಾರಿ ಜೊತೆಯಲಿದ್ದು ನೋಡಿದ್ದೇನೆ. ಇನ್ನೊಂದು ಬಾರಿ ದೂರದಿಂದಲೇ ನೋಡಿದ್ದೇನೆ. ಕುಮಾರಸ್ವಾಮಿಯವರು ಏನಾದರೂ ಇದ್ದರೆ ಸಲಹೆ ನೀಡಲಿ: ಸಚಿವ ಎನ್‌.ಚೆಲುವರಾಯಸ್ವಾಮಿ 

Minister N Cheluvarayaswamy Slams BJP JDS grg
Author
First Published Oct 24, 2023, 12:46 PM IST

ಹಾಸನ(ಅ.24): ಕಳೆದ ವಿದಾನಸಭೆ ಚುನಾವಣೆ ಫಲಿತಾಂಶ ನೋಡಿದರೆ ಹಾಸನದಲ್ಲಿ ಕಾಂಗ್ರೆಸ್‌ ಚೆನ್ನಾಗಿದ್ದು ಬಿಜೆಪಿ ಮತ್ತು ಜೆಡಿಎಸ್‌ಗೆ ಕೆಟ್ಟ ಪರಿಸ್ಥಿತಿ ಇರುವುದು ತಿಳಿಯುತ್ತದೆ ಎಂದು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನನಗೆ ವೀಕ್ಷಕನಾಗಿ ಪಕ್ಷ ನೇಮಕ ಮಾಡಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಬಾರಿ ಸಂಸತ್ ಸದಸ್ಯರನ್ನು ಗೆಲ್ಲಿಸಬೇಕೆಂದು ಪ್ರಯತ್ನ ಇದೆ. ಆಕಾಂಕ್ಷಿಗಳ ಬಗ್ಗೆ ಮಾಹಿತಿ ಪಡೆಯುತ್ತೇವೆ. ಅಂತಿಮವಾಗಿ ಪಕ್ಷ ಕೈಗೊಳ್ಳೊವ ತೀರ್ಮಾನಕ್ಕೆ ಎಲ್ಲರು ಬದ್ದವಾಗಿ ಇರುತ್ತಾರೆ. ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿದರೆ ಪಕ್ಷಗಳ ಸ್ಥಿತಿ ತಿಳಿಯಲಿದೆ ಎಂದು ತಿಳಿಸಿದರು.

ಸರ್ಕಾರಿ ಹಣ ಲೂಟಿ ಹೊಡೆದಿಲ್ಲ ಅಂತ ದೇವರ ಮುಂದೆ ಪ್ರಮಾಣ ಮಾಡಲಿ: ಎಚ್.ಡಿ.ರೇವಣ್ಣಗೆ ಪಟೇಲ್‌ ಸವಾಲ್‌

ಸರ್ಕಾರಲ್ಲಿ ಕಮಿಷನ್ ಬಗ್ಗೆ ಕುಮಾರಸ್ವಾಮಿ ಆರೋಪ ಪ್ರಕರಣವಾಗಿ ಮಾತನಾಡಿ, ಕೈ ಮುಗಿಯುವೆ, ಅವರು ದೊಡ್ಡ ನಾಯಕರು ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

ಸಕಾಲಕ್ಕೆ ಬಾರದೆ ಕೈಕೊಟ್ಟ ಮಳೆಯಿಂದ ರಾಜ್ಯದಲ್ಲಿ ಬರ ಆವರಿಸಿದ್ದು, ಮೊದಲ ಹಂತದಲ್ಲಿ ೧೯೫ ತಾಲೂಕು ಹಾಗೂ ಎರಡನೇ ಹಂತದಲ್ಲಿ ೨೧ ತಾಲೂಕುಗಳನ್ನು ಬರಪೀಡಿತ ತಾಲೂಕಾಗಿ ಸರ್ಕಾರ ಘೋಟಣೆ ಮಾಡಿದೆ. ಕೇಂದ್ರ ಬರ ಅಧ್ಯಯನ ತಂಡವೂ ಭೇಟಿ ನೀಡಿ ಹೋಗಿದೆ. ಬರಪರಿಹಾರವಾಗಿ ೫ ಸಾವಿರದ ೨೧ ಕೋಟಿ ರು. ನೀಡುವಂತೆ ಕೇಂದ್ರಕ್ಕೆ ವರದಿ ನೀಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರನ್ನು, ಕಾರ್ಯದರ್ಶಿಗಳನ್ನು ಭೇಟಿ ಮಾಡಲು ನಾನು ಮತ್ತು ಸಚಿವ ಕೃಷ್ಣಭೈರೇಗೌಡರು ಸಮಯ ಕೇಳಿದ್ದೇವೆ. ಆದರೆ ಕೇಂದ್ರ ಸಚಿವರ ಸಮಯ ನೀಡುತ್ತಿಲ್ಲ. ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ರಾಜ್ಯದಲ್ಲಿ ೫ ಸಾವಿರದ ೨೧ ಕೋಟಿ ರು. ಬೆಳೆಹಾನಿ ವರದಿಯಾಗಿದ್ದರೆ, ಹಾಸನ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ೧೩೧. ೬೨ ಕೋಟಿ ರು. ಬೆಳೆ ನಷ್ಟದ ವರದಿ ನೀಡಲಾಗಿದೆ, ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಸಕಲೇಸಪುರ ಸಾಧರಣ ಎಂದು ಘೋಷಣೆ ಮಾಡಲಾಗಿದೆ. ಅದನ್ನು ಸಹ ಪೂರ್ಣ ಬರವೆಂದು ಘೋಷಣೆ ಮಾಡಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಪರ್ಸೆಂಟೇಜ್ ಆಡಳಿತ ನಡೆಸುತ್ತಿದೆ, ಆದರಿಂದ ವಿದ್ಯುತ್ ಅಭಾವ ಸೃಷ್ಟಿಯಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಕುಮಾರಸ್ವಾಮಿಯವರು ಅತ್ಯಂತ ಪ್ರಭಾವಿ ವ್ಯಕ್ತಿಗಳು, ಅವರು ಸಹ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದಾರೆ. ಅವರ ಆಡಳಿತವನ್ನು ಒಂದು ಬಾರಿ ಜೊತೆಯಲಿದ್ದು ನೋಡಿದ್ದೇನೆ. ಇನ್ನೊಂದು ಬಾರಿ ದೂರದಿಂದಲೇ ನೋಡಿದ್ದೇನೆ. ಕುಮಾರಸ್ವಾಮಿಯವರು ಏನಾದರೂ ಇದ್ದರೆ ಸಲಹೆ ನೀಡಲಿ, ಅವರು ಗಣ್ಯರು, ಸಾರ್ವಜನಿಕರಿಗೆ ಅನುಕೂಲವಾಗುವಾದರೆ ಅವರ ಸಲಹೆಗಳನ್ನು ಈಡೇರಿಸೋಣ ಎಂದು ಕುಹಕವಾಡಿದರು.

ಡಿಸಿಎಂಗೆ ವಿದಸನಸೌದದಲ್ಲಿ ಪ್ರತ್ಯೇಕ ಮೀಟಿಂಗ್ ಹಾಲ್ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇದು ಸಿಎಂ, ಡಿಸಿಎಂ ಅವರ ವಿವೇಚನಾ ಅಧಿಕಾರ. ಒಂದು ಕೊಠಡಿ ತಗೊಂಡರೆ ತಪ್ಪೇನು? ಸಚಿವರು, ಅಧಿಕಾರಿಗಳ ಸಭೆ ಮಾಡಬೇಕಾಗುತ್ತದೆ. ಅದರಲ್ಲಿ ಏನಿದೆ, ಇದರಿಂದ ಎರಡು ಶಕ್ತಿ ಕೇಂದ್ರ ಆಗಲ್ಲ ಎಂದ ಚಲುವರಾಯಸ್ವಾಮಿ ಹೇಳಿದರು.

ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿ: ಸಂಸದ ಪ್ರಜ್ವಲ್ ರೇವಣ್ಣ

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಪದವಿಧರ ಕ್ಷೇತ್ರದ ಶಾಸಕ ಮಾದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ ಉಪಸ್ಥಿತರಿದ್ದರು.

ಬರ ಪರಿಸ್ಥಿತಿ ಉತ್ತಮವಾಗಿ ನಿಭಾಯಿಸಿದ್ದೇವೆ

ಬೆಳಗಾವಿಯಲ್ಲಿ ಏನೂ ಸಮಸ್ಯೆ ಇಲ್ಲ. ಬಿಜೆಪಿಯಲ್ಲಿ ಹಿಂದೆ ಸರ್ಕಾರ ಇದ್ದಾಗ ಇದೆಲ್ಲ ಇರಲಿಲ್ಲವೇ! ನಮ್ಮ ಪಕ್ಷದಲ್ಲಿ ಏನೂ ಗೊಂದಲವು ಇಲ್ಲ. ಸಮಸ್ಯೆಯು ಇಲ್ಲ. ಚುನಾವಣೆಗೂ ಮುನ್ನ ಎಲ್ಲ ಹೇಳಿದರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಂದಾಗಲ್ಲ ಎಂದು. ಸೀಟು ಹಂಚಿಕೆಯಲ್ಲಿ ಗೊಂದಲ ಆಗುತ್ತೆ ಎಂದು, ಅದರೆ ಸೀಟು ಹಂಚಿಕೆಯು ಆಯ್ತು. ಈಗ ನಮ್ಮ ಸರ್ಕಾರವು ಬಂತು. ಸರ್ಕಾರ ಬಂದ ಬಳಿಕ ಸಿಎಂ ಆಯ್ಕೆ ಗೊಂದಲ ಅಂದ್ರು. ಸಿಎಂ ಆಯ್ಕೆ ಚನ್ನಾಗಿಯೇ ಅಯ್ತು. ನಾಲ್ಕು ಗ್ಯಾರಂಟಿ ಯೋಜನೆಯು ಜಾರಿಯಾಗಿ ಚೆನ್ನಾಗಿ ನಡೆಯುತ್ತಿದೆ. ಈಗ ಬರ ಬಂದಿದೆ. ಇದನ್ನು ಸರಿಯಾಗಿ ಎದುರಿಸುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios