ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿ: ಸಂಸದ ಪ್ರಜ್ವಲ್ ರೇವಣ್ಣ

ರಾಷ್ಟ್ರೀಯ ಹೆದ್ದಾರಿ ಎನ್ಎಚ್ 4 ಬಾಂಬೆ ರಸ್ತೆಗೆ ಸಂಪರ್ಕ ಕಲ್ಪಿಸಲು ಚನ್ನರಾಯಪಟ್ಟಣ ಹಾಗೂ ತಿಪಟೂರು ಹುಳಿಯಾರು ಮಾರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿಸಲು ಕೇಂದ್ರ ಸರ್ಕಾರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
 

MP Prajwal Revanna appeals to Minister Nitin Gadkari for highway construction gvd

ನುಗ್ಗೇಹಳ್ಳಿ (ಅ.22): ರಾಷ್ಟ್ರೀಯ ಹೆದ್ದಾರಿ ಎನ್ಎಚ್ 4 ಬಾಂಬೆ ರಸ್ತೆಗೆ ಸಂಪರ್ಕ ಕಲ್ಪಿಸಲು ಚನ್ನರಾಯಪಟ್ಟಣ ಹಾಗೂ ತಿಪಟೂರು ಹುಳಿಯಾರು ಮಾರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿಸಲು ಕೇಂದ್ರ ಸರ್ಕಾರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ಹೋಬಳಿ ಕೇಂದ್ರದ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದ ಕುಂದುಕೊರತೆಗಳ ಸಭೆ ಉದ್ಘಾಟಿಸಿ ಮಾತನಾಡಿದರು. 

ಚನ್ನರಾಯಪಟ್ಟಣ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಆದರೆ ಈ ಭಾಗದಲ್ಲಿ ಕಾರ್ಖಾನೆಗಳ ಸ್ಥಾಪನೆ ಮಾಡಲು ಉದ್ಯಮಿಗಳು ಬರುತ್ತಾರೆ ಇದರಿಂದ ರೈತರ ಮಕ್ಕಳಿಗೂ ಉದ್ಯೋಗಾವಕಾಶ ದೊರೆಯುತ್ತದೆ ಎಂದರು. ಕೊಬ್ಬರಿ ವ್ಯಾಪಾರದಲ್ಲಿ ಲಾಬಿ ನಡೆಯುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ 12 ಸಾವಿರ ರಾಜ್ಯ ಸರ್ಕಾರ 3 ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಲು ಶಾಸಕರು ಹಾಗೂ ರೈತರೊಂದಿಗೆ ಪ್ರಾಮಾಣಿಕ ಹೋರಾಟ ನಡೆಸುತ್ತೇನೆ ಎಂದರು.ರೈತರ ಪಂಪ್ಸೆಟ್‌ಗಳಿಗೆ ಬೇಸಿಗೆಯಲ್ಲಿ ಸಮಯ ನಿಗದಿಪಡಿಸಿ ವಿದ್ಯುತ್ ನೀಡಬೇಕು ಎಂದು ಸರ್ಕಾರಕ್ಕೆ ಅಗ್ರಹಿಸಿದರು. 

ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾಮಗಾರಿಗೆ ಒಂದು ಕೋಟಿ ಹಣ ವನ್ನು ಭಕ್ತರು ದಾನ ನೀಡಿದರು ಸಹ ಕಾಮಗಾರಿ 7 ತಿಂಗಳಿನಿಂದ ಕುಂಠಿತವಾಗಿರುವುದನ್ನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಸೊಲ್ಲಾಪುರ ಎಕ್ಸ್ಪ್ರೆಸ್ ರೈಲನ್ನು ಚನ್ನರಾಯಪಟ್ಟಣದಲ್ಲಿ ನಿಲುಗಡೆ ಮಾಡಿಸುವ ಭರವಸೆ ನೀಡಿದರು. ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ಸೋಮೇಶ್ವರ ದೇವಾಲಯಕ್ಕೆ ಜೀರ್ಣೋದ್ಧಾರಕ್ಕೆ 9 ಲಕ್ಷ, ಚಂದ್ರಮೌಳೇಶ್ವರ ದೇವಾಲಯ ಕಾಮಗಾರಿಗೆ 2 ಲಕ್ಷ ಹಣ ಬಿಡುಗಡೆಯಾಗಿದೆ. 

ನಮ್ಮದು ಪ್ರಪಂಚದಲ್ಲೇ ಮಾದರಿ ಸರ್ಕಾರ: ಸಚಿವ ಕೃಷ್ಣ ಬೈರೇಗೌಡ

ನುಗ್ಗೇಹಳ್ಳಿ ಅಮ್ಮನವರ ಕ್ಷೇತ್ರದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ಹಣ ಬಿಡುಗಡೆ ಮಾಡಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೋವಿಂದರಾಜ್, ಇ ಒ ಹರೀಶ್, ಎಂಜಿನಿಯರ್ ರುಕ್ಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಗದೀಶ್, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಯಲ್ಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ಸಹಾಯಕ ಕೃಷಿ ಅಧಿಕಾರಿ ಜನಾರ್ದನ್, ತೋಟಗಾರಿಕಾ ಸಹಾಯಕ ನಿರ್ದೇಶಕ ಪುಣೀಂದ್ರ, ಮುಖಂಡರುಗಳಾದ ದೊರೆಸ್ವಾಮಿ, ಎಚ್. ಬಿ. ರಂಗಸ್ವಾಮಿ, ತೋಟಿ ನಾಗರಾಜ್, ಪುಟ್ಟಸ್ವಾಮಿ, ಸಂಪತ್ ಕುಮಾರ್, ಶಿವಕುಮಾರ್, ನಟರಾಜ್, ಹೊನ್ನೇಗೌಡ, ಮಂಜುನಾಥ ಸ್ವಾಮಿ, ಪಿಡಿಒ ಶಿವರಾಂ, ಶಿಕ್ಷಕಿ ರೇಖಾ, ಇತರರು ಹಾಜರಿದ್ದರು.

Latest Videos
Follow Us:
Download App:
  • android
  • ios