ಸರ್ಕಾರ ಬೀಳಿಸುವ ಕನಸನ್ನು ಕುಮಾರಸ್ವಾಮಿ ಕಾಣಲಿ: ಚಲುವರಾಯಸ್ವಾಮಿ
2024ಕ್ಕೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಚುನಾವಣೆ ನಂತರ ಈ ಸರ್ಕಾರ ಬಿದ್ದುಹೋಗಲಿದೆ ಎಂಬ ಭ್ರಮೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ತೇಲಾಡುತ್ತಿದ್ದಾರೆ. ಅದರಿಂದಲೇ ಕುಮಾರಸ್ವಾಮಿ ಅವರಿಗೆ ನಿದ್ರೆ ಬರುತ್ತೆ ಎನ್ನುವುದಾದರೆ ಅ ರೀತಿಯ ಕನಸು ಕಾಣಲಿ: ಸಚಿವ ಎನ್.ಚಲುವರಾಯಸ್ವಾಮಿ
ನಾಗಮಂಗಲ(ಅ.11): ಹಾಲಿ ಇರುವ ಕಾಂಗ್ರೆಸ್ ಸರ್ಕಾರ ಬೀಳುತ್ತೆ, ಮತ್ತೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತೆ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಕುಮಾರಸ್ವಾಮಿ ಕನಸು ಕಾಣುವುದಾದರೆ ಕಾಣಲಿ. ಅವರ ಕನಸಿಗೆ ನಾವು ಅಡ್ಡಿ ಮಾಡುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಬೆಳ್ಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2024ಕ್ಕೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಚುನಾವಣೆ ನಂತರ ಈ ಸರ್ಕಾರ ಬಿದ್ದುಹೋಗಲಿದೆ ಎಂಬ ಭ್ರಮೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ತೇಲಾಡುತ್ತಿದ್ದಾರೆ. ಅದರಿಂದಲೇ ಕುಮಾರಸ್ವಾಮಿ ಅವರಿಗೆ ನಿದ್ರೆ ಬರುತ್ತೆ ಎನ್ನುವುದಾದರೆ ಅ ರೀತಿಯ ಕನಸು ಕಾಣಲಿ ಎಂದು ಕುಟುಕಿದರು.
ಕಾವೇರಿ, ಬರ ಸಮಸ್ಯೆ ಆಲಿಸುವುದಕ್ಕೆ ಕೇಂದ್ರ ನಿರಾಸಕ್ತಿ: ಚಲುವರಾಯಸ್ವಾಮಿ
2023ರ ವಿಧಾನಸಭೆ ಚುನಾವಣೆ ಸಮಯದಲ್ಲೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾನೇ ಸಿಎಂ ಆಗುತ್ತೇನೆ ಎಂಬ ಕನಸು ಕಂಡಿದ್ದರು. ಅದಕ್ಕಾಗಿ ಅವರು ಪಂಚರತ್ನ ಯಾತ್ರೆಯನ್ನೂ ಮಾಡಿದರು. ಜನರು ಪಂಚರತ್ನ ನಂಬಲಿಲ್ಲ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಂಬಿ ಕೈ ಹಿಡಿದರು ಎಂದು ತಿಳಿಸಿದರು.
ಏನಾದರೂ ಮಾಡಿ ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲ ಸೃಷ್ಬಿ ಮಾಡಬೇಕು ಎಂದುಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಬಗ್ಗೆ ಮಾತನಾಡಿದರೆ ಅವರಿಗೆ ನಿದ್ದೆ ಬರುತ್ತೆ ಎನ್ನುವುದಾದರೆ ಮಾತನಾಡಲಿ. ಅವರು ಚೆನ್ನಾಗಿ ನಿದ್ದೆ ಮಾಡಬೇಕು, ಆರೋಗ್ಯವಂತರಾಗಿ ಇರಬೇಕು ಎಂಬುದು ನಮ್ಮ ಆಸೆ ಎಂದು ಕುಹಕವಾಡಿದರು.