ನನ್ನನ್ನ ಮೂರು ಬಾರಿ ಗೆಲ್ಲಿಸಿ ಮಂತ್ರಿ ಮಾಡಿದ ಬೀಳಗಿಯಿಂದಲೇ ನನ್ನ ಸ್ಪರ್ಧೆ: ಸಚಿವ ನಿರಾಣಿ
ಸಚಿವ ನಿರಾಣಿ ಜಮಖಂಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಹಿನ್ನೆಲೆ ಸ್ವತಃ ಪ್ರತಿಕ್ರಿಯೆ ನೀಡಿರುವ ಅವರು, ನಾನು ಬಹಳಷ್ಟು ಸಾರಿ ಇದನ್ನ ಹೇಳಿದ್ದಿನಿ. ಪ್ರತಿ ವಾರ ಮೂರು ದಿನ ಬೀಳಗಿಯಲ್ಲೇ ಇರ್ತೇನೆ. ಬೀಳಗಿ ಜನರೇ ಮೂರು ಬಾರಿ ಎಂಎಲ್‌ಎ ಮಾಡಿ, ಎರಡು ಬಾರಿ ಮಂತ್ರಿ ಮಾಡಿದ್ದಾರೆ ಎಂದಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಫೆ.5): ಸಚಿವ ನಿರಾಣಿ ಜಮಖಂಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆ ಹಿನ್ನೆಲೆ ಸ್ವತಃ ಪ್ರತಿಕ್ರಿಯೆ ನೀಡಿರುವ ಅವರು, ನಾನು ಬಹಳಷ್ಟು ಸಾರಿ ಇದನ್ನ ಹೇಳಿದ್ದಿನಿ. ಪ್ರತಿ ವಾರ ಮೂರು ದಿನ ಬೀಳಗಿಯಲ್ಲೇ ಇರ್ತೇನೆ. ಜಮಖಂಡಿ ಯಲ್ಲಿ ಒಂದೇ ಒಂದು ದಿನ ಇದ್ದ ಉದಾಹರಣೆ ಹೇಳಿ. ಕಂಟಿನ್ಯೂ ನಾನು ಬೀಳಗಿಯಲ್ಲೇ ಇರೋದು, ಬೀಳಗಿ ಜನರೇ ಮೂರು ಬಾರಿ ಎಂಎಲ್‌ಎ ಮಾಡಿ, ಎರಡು ಬಾರಿ ಮಂತ್ರಿ ಮಾಡಿದ್ದಾರೆ. ಅದರ ಸಲುವಾಗಿ ಬೀಳಗಿ ಜನರ ಋಣವನ್ನು ಜೀವನದುದ್ದಕ್ಕೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೂ ಮುಟ್ಟಿಸಲಿಕ್ಕೆ ಆಗಲ್ಲ. ಬರುವ ದಿನಗಳಲ್ಲಿ ನೂರಕ್ಕೂ ನೂರು ಬೀಳಗಿಯಲ್ಲೇ ಸ್ಪರ್ಧೆ ಮಾಡ್ತಿನಿ ಎಂದರು.
ಇನ್ನು ಜಮಖಂಡಿಯಲ್ಲಿ ಒತ್ತಡ ಸ್ವಾಭಾವಿಕ, ಅಲ್ಲಿ 33 ಹಳ್ಳಿ , ಅರ್ಧ ಜಮಖಂಡಿ ನನಗೆ ಬರತಿರೋದ್ರಿಂದ. ಮತ್ತು ವ್ಯವಹಾರದಲ್ಲಿ ಸಂಬಂಧ ಇರೋದ್ರಿಂದ, ಹತ್ತಿರದಲ್ಲಿರೋದ್ರಿಂದ ಅವರು ಇಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ, ಹಾಗಾಗಿ ಇಲ್ಲಿ ನಿಲ್ಲರಿ ಎಂಬ ಮನವಿ ಇದ್ದೇ ಇದೆ. ಬಹಳ ಸ್ಪಷ್ಟವಾಗಿ ಹೇಳಿದ್ದೀನಿ ಇವತ್ತೂ ಹೇಳ್ತಿನಿ. ಕ್ಷೇತ್ರದ ಜನತೆಗೆ ಅಂಶಯ ಬೇಡ ನಾನು ಬೀಳಗಿಯಿಂದಲೇ ಸ್ಪರ್ಧೆ ಮಾಡ್ತಿನಿ. ನಮ್ಮಲ್ಲಿ ಯಾವ ಅಭ್ಯರ್ಥಿಯನ್ನ ಜಮಖಂಡಿ ಗೆ ಕೊಡ್ತಾರೆ. ಪ್ರಾಮಾಣಿಕವಾಗಿ ಜಮಖಂಡಿ ಅಭ್ಯರ್ಥಿ ಗೆ ಸಪೋರ್ಟ್ ಮಾಡ್ತಿನಿ. ನಮ್ಮ ಮನೆಯಲ್ಲಿ ಮುರುಗೇಶ ನಿರಾಣಿ, ಹನುಮಂತ ನಿರಾಣಿ ಬಿಟ್ಟು ಸ್ಪರ್ಧೆ ಮಾಡೋದಿಲ್ಲ.
ಭಗವಂತನ ಆಶೀರ್ವಾದದಿಂದ ಸಾಕಷ್ಟು ಕೈಗಾರಿಕೆಗಳು ಅಭಿವೃದ್ಧಿ ಆಗಿವೆ. ಕೇವಲ ನಮ್ಮ ರಾಜ್ಯದಲ್ಲಿ ಅಲ್ಲಿ, ಇಡೀ ದೇಶದಲ್ಲೇ ನಂಬರ್ ಒನ್ ಅನ್ನುವ ಸ್ಥಾನಕ್ಕೆ ನಾನು ಬಂದಿದ್ದೇನೆ. ಅದನ್ನ ನಮ್ಮ ಸಹೋದರ, ಮಕ್ಕಳು ಮಾಡ್ತಿದ್ದಾರೆ. ನಮ್ಮನ್ನ ಹೊರತುಪಡಿಸಿ ಯಾರೂ ರಾಜಕಾರಣಕ್ಕೆ ಬರೋದಿಲ್ಲ,ಅದರ ಸಂಶಯ ಬೇಡ ಎಂದು ಸಚಿವ ನಿರಾಣಿ ಹೇಳಿದರು.
Assembly election: ನಿರಾಣಿ ಹೇಳಿಕೆ ಹಿನ್ನೆಲೆ; ಕಲಬುರಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!
ಕ್ಷೇತ್ರದಲ್ಲಿ ಅಲಾರಮ್ ಹಂಚಿಕೆಯಲ್ಲಿ ಕೈ ಮುಖಂಡರು ಮಾಡುವ ಆರೋಪ ಸತ್ಯಕ್ಕೆ ದೂರವಾದದ್ದು:
ಬೀಳಗಿ ಮತಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಅಲಾರಾಮ್ ಹಂಚಿಕೆ ಮಾಡಿರೋ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರು ಮಾಡುತ್ತಿರೋ ಆರೋಪ ಸತ್ಯಕ್ಕೆ ದೂರವಾದ ಸಂಗತಿ. ಇನ್ನು ಪಕ್ಷದ ಚಿಹ್ನೆ ಬಳಸಿದ್ದು ನಿಜ, ಕೊಟ್ಟದ್ದು ನಿಜ. ಆದ್ರೆ ಯಾವುದೇ ರೀತಿ ಟೀಚರ್ಸ ಆಗಲಿ, ಬಿಇಓ ಅವರನ್ನಾಗಲಿ ಬಳಸಿಕೊಂಡಿಲ್ಲ. ಇದು ಸತ್ಯಕ್ಕೆ ದೂರವಾದದ್ದು. ಇಡೀ ನಮ್ಮ ಕ್ಷೇತ್ರದ ಖಾಸಗಿ ಮತ್ತು ಸರ್ಕಾರಿ ಶಾಲೆ ಮಕ್ಕಳು ಫ್ಯಾಕ್ಟರಿಗೆ ಬಂದಿದ್ರು, ಅವರು ಪ್ಯಾಕ್ಟರಿ ನೋಡಿದ ಬಳಿಕ ಸಂವಾದ ಕಾರ್ಯಕ್ರಮ ಇರಿಸಲಾಗಿತ್ತು. ಬಂದ ಮಕ್ಕಳು ಹಾಗೆ ಹೋಗಬಾರದು ಎನ್ನುವ ಕಾರಣಕ್ಕೆ ಒಂದು ಅಲಾರಾಮ್ ಕೊಟ್ಟು ಕಳಿಸಿದ್ದೇವೆ. ಶುಗರ್ ಫ್ಯಾಕ್ಟರಿ ನೋಡೋಕೆ ಬಂದಿದ್ದಾರೆನ್ನುವ ಕಾರಣಕ್ಕೆ ೫ ಕೆಜಿ ಸಕ್ಕರೆ ಕೊಟ್ಟಿದ್ದು ನಿಜ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ.ಇದನ್ನು ಶಾಲೆಯಲ್ಲೂ ಕೊಟ್ಟಿಲ್ಲ. ನಮ್ಮ ಎಸ್.ಡಿ.ಎಂ.ಸಿ. ಅಧ್ಯಕ್ಷರ ಕಡೆಯಿಂದ ಡಿಸ್ಟ್ರಿಬ್ಯೂಷನ್ ಮಾಡಿಸಿದ್ದೀವಿ. ಮಕ್ಕಳಿಗೆ ಪರೀಕ್ಷೆ ಹಿನ್ನೆಲೆ ಬೇಗ ಏಳಲು ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಕೊಟ್ಟಿದ್ದೇವೆ. ಕಾಂಗ್ರೆಸ್ಸನವರು ಇದನ್ನು ತಮಗೆ ಯಾವ ರೀತಿ ಬೇಕೋ ಆ ರೀತಿ ವ್ಯಾಖ್ಯಾನ ಮಾಡ್ತಾರೆ ಎಂದು ಸಚಿವ ನಿರಾಣಿ ಹೇಳಿದರು.
ರಮೇಶ ಜಾರಕಿಹೊಳಿ ನಮ್ಮ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿದ್ದು ತಪ್ಪಲ್ಲ:ಸಚಿವ ಮುರುಗೇಶ ನಿರಾಣಿ
ಹಿರಿಯರಿಗೆ ಕೋಕ್ ನೀಡುವ ವಿಚಾರ ಕೇಂದ್ರ & ರಾಜ್ಯ ನಾಯಕರಿಗೆ ಬಿಟ್ಟದ್ದು:
ಈ ಬಾರಿ ಚುನಾವಣೆಯಲ್ಲಿ ಗುಜರಾತ್ ಮಾದರಿ ಹಿರಿಯರಿಗೆ ಕೊಕ್ ನೀಡುವ ಕುರಿತು ಮಾತನಾಡಿದ ಸಚಿವ ನಿರಾಣಿ, ಮಾಡಲ್ ಅಂತಲ್ಲ, ಬಿಜೆಪಿ ಪಕ್ಷ ಸ್ಟ್ರಾಂಗ್ ಆಗಿದೆ. ನಮ್ಮಲ್ಲಿ ಸಾಕಷ್ಟು ಜನ ಮೆಂಟೇನ್ ಮಾಡ್ತಿದ್ದಾರೆ.೭೫ ವರ್ಷದ ಮೇಲ್ಪಟ್ಟವರಿಗೆ. ಅವರು ಪಕ್ಷದ ಮಾರ್ಗದರ್ಶಕರಾಗಿರಬೇಕು ಮತ್ತು ಅವರ ಸಲಹೆ ಸೂಚನೆ ಪಕ್ಷಕ್ಕೆ ಬೇಕು. ಕೇಂದ್ರದಲ್ಲಿಯೂ ಸಹ ಅವರ ಸಲಹೆ ನೋಡಿಕೊಂಡು ಟಿಕೆಟ್ ಕೊಡದೇ ಇರೋದನ್ನೂ ಸಹ ನಾವು ನೋಡ್ತಿದ್ದೀವಿ , ಕೇಂದ್ರ ಮತ್ತು ರಾಜ್ಯ ನಾಯಕರು ಕರ್ನಾಟಕದ ಆಗು ಹೋಗು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಿರಾಣಿ ಹೇಳಿದರು.