Asianet Suvarna News Asianet Suvarna News

ರಮೇಶ ಜಾರಕಿಹೊಳಿ ನಮ್ಮ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿದ್ದು ತಪ್ಪಲ್ಲ:ಸಚಿವ ಮುರುಗೇಶ ನಿರಾಣಿ

ರಮೇಶ್ ಜಾರಕಿಹೊಳಿ ರಾಜಕೀಯ ನೇತಾರರು, ಅವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ (ಅಮಿತ್ ಶಾ) ರನ್ನ ಭೇಟಿ ಆಗೋದ್ರಲ್ಲಿ ತಪ್ಪಿಲ್ಲ. ಚುನಾವಣೆ ಹತ್ತಿರ ಬರುತ್ತಿರೋದ್ರಿಂದ ಚರ್ಚೆ, ಸಲಹೆ ಸೂಚನೆ ಪಡೆಯಲು ಹೋಗಿರಬಹುದು ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

It is not wrong that Ramesh Jarkiholi met our national leaders says Minister Murugesh Nirani gow
Author
First Published Feb 5, 2023, 4:38 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಫೆ.5): ರಮೇಶ್ ಜಾರಕಿಹೊಳಿ ರಾಜಕೀಯ ನೇತಾರರು, ಅವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ (ಅಮಿತ್ ಶಾ) ರನ್ನ ಭೇಟಿ ಆಗೋದ್ರಲ್ಲಿ ತಪ್ಪಿಲ್ಲ. ಚುನಾವಣೆ ಹತ್ತಿರ ಬರುತ್ತಿರೋದ್ರಿಂದ ಚರ್ಚೆ, ಸಲಹೆ ಸೂಚನೆ ಪಡೆಯಲು ಹೋಗಿರಬಹುದು ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಪತ್ರಕರ್ತರು ಕೇಳಿದ ಸಿಡಿ ವಿಷಯಕ್ಕೆ ರಮೇಶ್ ಜಾರಕಿಹೊಳಿ ಅಮಿತ್ ಶಾ ಭೇಟಿಯಾಗಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ,  ಅವರೆನಾದ್ರೂ ರಾಹುಲ್, ಸೋನಿಯಾ ಗಾಂಧಿನಾ ಭೇಟಿಯಾಗಿದ್ರೆ ವಿಚಾರ ಮಾಡಬಹುದಿತ್ತು. ಆದರೆ ಅವರು ನಮ್ಮ ಪಕ್ಷದ ನಾಯಕರನ್ನ ಭೇಟಿ ಆಗಿದ್ದಾರೆ. ಇಲ್ಲಿ ಆಗು ಹೋಗು ಜೊತೆ ತಮ್ಮ ಕ್ಷೇತ್ರದ ಹೆಚ್ಚಿನ ಕೆಲಸ ಕೇಳುವುದು, ಚುನಾವಣೆ ಹತ್ತಿರ ಬರ್ತಿದೆ, ಅವರ ಸಲಹೆ ಕೇಳೋದ ಇರಬಹುದು. ರಾಷ್ಟ್ರೀಯ ನಾಯಕರ ಸಲಹೆ ಪಡೆಯೋದ್ರ ಬಗ್ಗೆ ಚರ್ಚೆ ಅಷ್ಟೇ ವಿಶೇಷ ಏನಿಲ್ಲ ಎಂದರು.

ಅವರಿಬ್ಬರಿಗೂ ಬುದ್ದಿ ಹೇಳುವಷ್ಟು ದೊಡ್ಡವ ನಾನಲ್ಲ: ನಿರಾಣಿ 
ಇನ್ನು ಇದೇ ವೇಳೆ ಈ ಬಾರಿ ಸಿಡಿ ಪಾಲಿಟಿಕ್ಸ್ ಚುನಾವಣೆಯ ಭಾಗ ಆಯ್ತಾ ಎಂಬ ಪ್ರಶ್ನೆ ವಿಚಾರಕ್ಕೆ ಉತ್ತರಿಸಿ, ಏನೋ ಮಾತಾಡ್ತಿದ್ದಾರೆ, ಅವರಿಬ್ಬರೂ ದೊಡ್ಡವರಿದ್ದಾರೆ, ಅನುಭವದಲ್ಲೂ, ರಾಜಕಾರಣದಲ್ಲೂ, ನಾವು ಮಾಡುವಂತದ್ದು ಬಹಳಷ್ಟು ಕೆಲಸ ಇದೆ. ನಾವು ಸಾಧ್ಯವಾದಷ್ಟು ಕ್ಷೇತ್ರದ ಕಡೆ, ನಮ್ಮನ್ನ ವೋಟ್ ಹಾಕಿ ಆಯ್ಕೆ ಮಾಡಿದ ಜನರ ಕಡೆಗೆ ಗಮನ ಹರಿಸೋದ ಸೂಕ್ತ ಇದೆ. ಅವರಿಬ್ಬರಿಗೂ ಬುದ್ದಿ ಹೇಳುವಷ್ಟು ದೊಡ್ಡವ ನಾನಲ್ಲ, ಶಾಲಾ ಮಕ್ಕಳ, ಮತ್ತು ಜನರ ಮೇಲೆ ಇದರ ಪರಿಣಾಮ ಆಗದೇ ಇರುವಂತ ರೀತಿಯಲ್ಲಿ, 
ನಾವು ರಾಜಕಾರಣಿಗಳು ಮುಂದೆ ಹೋಗುವ ಅವಶ್ಯಕತೆ ಇದೆ. 

ಗಾಂಧಿಯನ್ನು ಕೊಂದ ಬ್ರಾಹ್ಮಣರು, ಆರ್‌ಎಸ್‌ಎಸ್‌ನವರು ದೇಶವನ್ನು ಹಾಳು ಮಾಡ್ತಾರೆ: ಕುಮಾರಸ್ವಾಮಿ

ಈಗಿನ ಒಟ್ಟಾರೆ ರಾಜಕಾರಣದ ಬಗ್ಗೆ ಪಬ್ಲಿಕ್ ನೋಡುವ ರೀತಿ, ಹಿಂದಿನ ಮತ್ತು ಇಂದಿನ ರಾಜಕಾರಣ ಹೋಲಿಸಿದಾಗ ಬಹಳ ಕೀಳು ಮಟ್ಟದಲ್ಲಿ ನೋಡುವಂತದ್ದಿದೆ. ಬರುವಂತಹ ದಿನಗಳಲ್ಲಿ ನಮ್ಮಿಂದ ಸುಧಾರಣೆ ಆಗಬೇಕಿದೆ. ಎಲ್ಲರೂ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಮಾಡುವ ಅವಶ್ಯಕತೆ ಇದೆ. ಮೊದಲು ರಾಜಕಾರಣಿಗಳಿಗೆ ಗೌರವ ಇರ್ತಿತ್ತು. ಆ ಗೌರವದೊಂದಿಗೆ ಜನರ ಸಮಸ್ಯೆ ಜೊತೆಗೆ ಅಭಿವೃದ್ಧಿ ಕೆಲಸಗಳನ್ನ ದೇಶದ ಜಿಡಿಪಿ ಹೆಚ್ಚು ಮಾಡುವ ಮೂಲಕ, ನಮ್ಮ ನೆಚ್ಚಿನ ಪ್ರಧಾನಿಯವ್ರು ಈ  ಜಗತ್ತಿನಲ್ಲಿ ಭಾರತ ಮಾತೆ ಮೊದಲ ಸ್ಥಾನದಲ್ಲಿರಬೇಕು ಅಂತ 24/7 ಕೆಲಸ ಮಾಡ್ತಾರೆ. ಅದಕ್ಕೆ ನಾವು ಅಳಿಲು ಸೇವೆಯಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವಂತದ್ದು, ಇವತ್ತಿನ ದಿನಗಳಲ್ಲಿ ಬಹಳ ಮುಖ್ಯ ಇದೆ.‌ ಅದನ್ನ ನಾವೆಲ್ಲಾ ಸೇರಿ ಮಾಡೋಣ ಎಂಬ ಮಾತು ಹೇಳುತ್ತೇನೆ‌ ಎಂದರು.

 ಬ್ರಾಹ್ಮಣ ಪ್ರಹ್ಲಾದ್‌ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ

ರಾಜ್ಯದಲ್ಲಿ 4 ತಂಡಗಳಲ್ಲಿ ಬಿಜೆಪಿ ನಾಯಕರ ಪ್ರವಾಸ:
ಇತ್ತ ಕಾಂಗ್ರೆಸ್ ಪ್ರಜಾಧ್ವನಿ, ಜೆಡಿಎಸ್ ಪಂಚರತ್ನ ಯಾತ್ರೆ ಬಿಜೆಪಿಯಿಂದ ಯಾವ ರೀತಿ ಪ್ರಚಾರ ಇರುತ್ತೆ ಎಂಬ ಪ್ರಶ್ನೆಗೆ ಉತ್ತರ ನೀಡಿ, ಈ ಬಜೆಟ್ ಸೇಷನ್ ಮುಗಿದ ನಂತರ ನಾಲ್ಕು ತಂಡಗಳಲ್ಲಿ ನಾವು ಪ್ರವಾಸ ಮಾಡ್ತಿವಿ. ನಾಲ್ಕು ತಂಡಗಳ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮುಟ್ಟುವಂತದ್ದಿದೆ. ಅದ್ರಲ್ಲಿ ಈಗಾಗ್ಲೆ ಒನ್, ಟು, ಥ್ರಿ, ನಮ್ಮ ನೆಚ್ಚಿನ ಪ್ರಧಾನಿ, ಗೃಹ ಮಂತ್ರಿಗಳು, ಮತ್ತು ರಾಷ್ಟ್ರೀಯ ಅಧ್ಯಕ್ಷರು. ಈಗಾಗ್ಲೆ ಅವರ ಪ್ರವಾಸವನ್ನ ಪ್ರಾರಂಭ ಮಾಡಿದ್ದಾರೆ. ಕಳೆದ ತಿಂಗಳು ಮೂರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ನಾಳೆ 9 ರಂದು ಕರ್ನಾಟಕ ಭೇಟಿ ಇದೆ. ಹೆಚ್‌ಎಎಲ್ ಲೋಕಾರ್ಪಣೆ, ತುಮಕೂರ ಇಂಡ್‌ಸ್ಟ್ರಿಯಲ್ ಏರಿಯಾಗೆ ಬರ್ತಿದ್ದಾರೆ. ಅದಕ್ಕೆ ನನಗೂ ಜವಾಬ್ದಾರಿ ಕೊಟ್ಟಿದ್ದಾರೆ. ನಾನೂ ಅದರಲ್ಲಿ ಭಾಗವಹಿಸ್ತಿದ್ದೇನೆ. ಈ ರೀತಿ ಮೇಲಿಂದ ಮೇಲೆ ಕೇಂದ್ರದ ಸಚಿವ್ರು, ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು, ಹೆಚ್ವಿನ ಸಂಖ್ಯೆಯಲ್ಲಿ ಬಂದು, 140 ಕ್ಕೂ ಹೆಚ್ಚು ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಿಸಲಿಕ್ಕೆ, ಅವರ ಮಾರ್ಗದರ್ಶನದಿಂದ ನಾವು ನಿಶ್ಚಿತವಾಗಿ ಸರ್ಕಾರ ಮಾಡ್ತೇವೆ ಎಂದರು.

Follow Us:
Download App:
  • android
  • ios