ಬ್ರಾಹ್ಮಣರು ಸಿಎಂ ಆಗಬಾರದೇ?: ಎಚ್‌ಡಿಕೆ ವಿರುದ್ಧ ಮುನಿರತ್ನ ಕಿಡಿ
ಬ್ರಾಹ್ಮಣ ಸಮುದಾಯ ಅಂದು ವಿದ್ಯಾಭ್ಯಾಸ ಮಾಡಿ, ನಮಗೆ ವಿದ್ಯೆ ಕಲಿಸಿಲ್ಲ ಎಂದಾದಲ್ಲಿ ನಾವೆಲ್ಲಾ ಇಂದು ಹೆಬ್ಬೆಟ್ಟುಗಳಾಗಿರುತ್ತಿದ್ದೇವು. ವಿದ್ಯೆ ಕಲಿಸಿದ್ದಕ್ಕೆ ಅವರ ವಿರುದ್ದ ಮಾತನಾಡುವಂತಾಗಿದೆ ಎಂದು ಬ್ರಾಹ್ಮಣ ಸಿಎಂ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ (ಫೆ.10): ಬ್ರಾಹ್ಮಣ ಸಮುದಾಯ ಅಂದು ವಿದ್ಯಾಭ್ಯಾಸ ಮಾಡಿ, ನಮಗೆ ವಿದ್ಯೆ ಕಲಿಸಿಲ್ಲ ಎಂದಾದಲ್ಲಿ ನಾವೆಲ್ಲಾ ಇಂದು ಹೆಬ್ಬೆಟ್ಟುಗಳಾಗಿರುತ್ತಿದ್ದೇವು. ವಿದ್ಯೆ ಕಲಿಸಿದ್ದಕ್ಕೆ ಅವರ ವಿರುದ್ದ ಮಾತನಾಡುವಂತಾಗಿದೆ ಎಂದು ಬ್ರಾಹ್ಮಣ ಸಿಎಂ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಎಸ್‌ಸಿ ಮೋರ್ಚಾ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲಾ ಭೂಮಿ ಮೇಲೆ ಒಟ್ಟಿಗೆ ವಾಸ ಮಾಡ್ತಿದ್ದೇವೆ, ಬ್ರಾಹ್ಮಣ ಸಮುದಾಯ ಯಾರ ಮನಸ್ಸು ನೋಯಿಸಿಲ್ಲ, ಬ್ರಾಹ್ಮಣರು ಸಿಎಂ ಆಗಬಾರದು ಎಂದೇನಿಲ್ಲ, ಎಚ್.ಡಿ.ಕೆ ಒಂದು ಸಮುದಾಯದ ಬಗ್ಗೆ ಮಾತನಾಡಬಾರದಿತ್ತು ಎಂದರಲ್ಲದೆ, ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿದ್ದು ಇದೇ ಮೊದಲಲ್ಲ. 1994ರಲ್ಲಿ ರಾಮಕೃಷ್ಣ ಹೆಗಡೆ ಇದ್ದಾಗಲೂ ಪ್ರಸ್ತಾಪವಾಗಿತ್ತು. ಇವತ್ತು ಅದೇ ಮುಂದುವರೆಯುತ್ತಿದೆ ಎಂದರು.
ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!
ಪ್ರಹ್ಲಾದ್ ಜೋಶಿಯವರಿಗೆ ಸಿಎಂ ಆಗುವ ಯೋಗ ಇದ್ದರೆ ಸಿಎಂ ಆಗ್ತಾರೆ. ಅವರು ಸಿಎಂ ಆಗಬಾರದು ಎಂದೇನಿಲ್ಲ, ಹೈಕಮಾಂಡ್ ಕೋಲಾರದಲ್ಲಿ ಸ್ಪರ್ಧೆ ಮಾಡು ಎಂದು ತಮಗೆ ಸೂಚನೆ ನೀಡಿದರೆ ಮಾಡುತ್ತೇನೆ. ಅಲ್ಲದೆ ಸಿದ್ದರಾಮಯ್ಯ ಅವರನ್ನು ಹಾಳು ಮಾಡಲು ಕೋಲಾರಕ್ಕೆ ಕರೆ ತರಲಾಗುತ್ತಿದೆ, ಇಲ್ಲಿರುವ ಕೆಲವರು ಸೋಲುವ ಭೀತಿ ಇದೆ, ಅದಕ್ಕಾಗಿ ಸೋಲುವ ನಾಯಕರ ಊರು ಗೋಲಾಗಿ ಅವರನ್ನ ಕರೆ ತರಲಾಗುತ್ತಿದೆ. ಸಿದ್ದರಾಮಯ್ಯ ಕೊನೆ ಚುನಾವಣೆ ಚಾಮುಂಡೇಶ್ವರಿಯಲ್ಲಿ ಗೆದ್ದು ತೋರಿಸಿದರೆ ಅವರಿಗೆ ಗೌರವ ಸಿಗುತ್ತೆ. ಆದ್ರೆ ಇಲ್ಲಿರುವ ಕೆಲವರು ಅವರನ್ನ ಗೊಂದಲಕ್ಕೆ ದೂಡಿದ್ದಾರೆ ಎಂದರು.
ಬೆಂ.ವಿವಿ ಕ್ಯಾಂಪಸ್ಸಲ್ಲಿ ವಾಹನ ಸಂಚಾರ ನಿರ್ಬಂಧ: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಿಸುವುದು, ಹೊರ ವರ್ತುಲ ರಸ್ತೆ ನಿರ್ಮಾಣದ ವೇಳೆ ತೆರವುಗೊಳಿಸಿರುವ ವಸತಿ ಸಮುಚ್ಚಯಗಳನ್ನು ಬೇರೆಡೆ ನಿರ್ಮಾಣ ಮತ್ತು ಕ್ಯಾಂಪಸ್‌ಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡಲು ರಾಜರಾಜೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ತೋಟಗಾರಿಕಾ ಸಚಿವ ಮುನಿರತ್ನ ಭರವಸೆ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಹೊರ ವರ್ತುಲ ರಸ್ತೆಯಲ್ಲಿ ಕೈಗೆತ್ತುಕೊಳ್ಳಲಿರುವ ಗ್ರೇಡ್ ಸೆಪರೇಟರ್ ಕಾಮಗಾರಿ ಹಾಗೂ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಕ್ರಮ ಕುರಿತ ಸಭೆಯಲ್ಲಿ ಅವರು ಈ ಭರವನೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಬಿಎಸ್‌ವೈ ಹೆಸರು ಮರೆತ್ರಾ ಸಿಎಂ ಬೊಮ್ಮಾಯಿ
ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಿಂದ ಮರಿಯಪ್ಪನಪಾಳ್ಯ ಕಡೆ ಸಾಗುವ ದಾರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ಹೊರ ವರ್ತುಲ ರಸ್ತೆಗಾಗಿ ಬೆಂಗಳೂರು ವಿಶ್ವವಿದ್ಯಾಲಯದ 40 ವಸತಿ ಸಮುಚ್ಚಯಗಳನ್ನು (ಗಣೇಶ ದೇವಸ್ಥಾನದ ಸಮೀಪ) ತೆರವುಗೊಳಿಸಲಾಗಿತ್ತು. ಹೀಗಾಗಿ 40ರ ಜತೆಗೆ 10 ವಸತಿ ಸಮುಚ್ಚಯಗಳನ್ನು ಹೆಚ್ಚುವರಿಯಾಗಿ ನಿರ್ಮಿಸಿಕೊಡಲು ಸಚಿವರು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ. ಕ್ಯಾಂಪಸ್‌ಗೆ ಭದ್ರತೆ ಕಲ್ಪಿಸುವುದಕ್ಕಾಗಿ ಕಾಂಪೌಂಡ್ ಅತ್ಯಗತ್ಯವಾಗಿ ನಿರ್ಮಿಸಬೇಕಿದೆ. ಈ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.