ಬಡವರು ತಿನ್ನುವ ಅಕ್ಕಿಯಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ: ಸಚಿವ ಎಂ.ಬಿ.ಪಾಟೀಲ

ನಾವು ಅಕ್ಕಿಗೆ ಬೇಡಿಕೆ ಇಟ್ಟು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಅದಕ್ಕೆ ಕೇಂದ್ರ ಉತ್ತರ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದ ಸಂದರ್ಭದಲ್ಲಿ 7 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಇದೆ ಎಂದು ಹೇಳಿದ್ದರು. ಆದರೆ ಈಗ ಅಕ್ಕಿ ಇಲ್ಲ ಎಂದು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಎಂ.ಬಿ.ಪಾಟೀಲ 

Minister MB Patil Slams Central Government grg

ವಿಜಯಪುರ(ಜೂ.23):   ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬೃಹತ್‌ ಹಾಗೂ ಮಧ್ಯಮ, ಮೂಲಭೂತ ಸೌಕರ್ಯಗಳ ಖಾತೆ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಡವರು ತಿನ್ನುವ ಅಕ್ಕಿಯಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನಾವು ಅಕ್ಕಿಗೆ ಬೇಡಿಕೆ ಇಟ್ಟು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಅದಕ್ಕೆ ಕೇಂದ್ರ ಉತ್ತರ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದ ಸಂದರ್ಭದಲ್ಲಿ 7 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಇದೆ ಎಂದು ಹೇಳಿದ್ದರು. ಆದರೆ ಈಗ ಅಕ್ಕಿ ಇಲ್ಲ ಎಂದು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಕುಡಿವ ನೀರಿನ ಸಮಸ್ಯೆ ಹೊಸ್ತಿಲಲ್ಲಿ ವಿಜಯಪುರ ಜಿಲ್ಲೆ..!

ನಾವು ಪುಕ್ಕಟೆ ಅಕ್ಕಿ ಕೇಳುತ್ತಿಲ್ಲ. ದುಡ್ಡು ಕೊಟ್ಟು ಕೇಳುತ್ತಿದ್ದೇವೆ. ನಾಲ್ಕು ದಿನ ವಿಳಂಬವಾದರೂ ಅಕ್ಕಿ ಕೊಡುತ್ತೇವೆ. ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಅಕ್ಕಿ ಕೊಡುತ್ತೇವೆ. 10 ಕೆಜಿ ಆಹಾರ ಧಾನ್ಯ ನೀಡಿಯೇ ತೀರುತ್ತೇವೆ. ಬೇಡಿಕೆಗೆ ಅನುಗುಣವಾಗಿ ಜೋಳ, ರಾಗಿ ಲಭ್ಯವಾಗುತ್ತಿಲ್ಲ. ಹಾಗಾಗಿ ಸಾಧ್ಯಾಸಾಧ್ಯತೆ ಪರಿಶೀಲಿಸಿ ಜೋಳ, ರಾಗಿ ನೀಡುವ ಬಗ್ಗೆಯೂ ವಿಚಾರ ಮಾಡುತ್ತೇವೆ ಎಂದು ಹೇಳಿದರು.

ವಿದ್ಯುತ್‌ ದರ ಹೆಚ್ಚಳ, ಸಿಎಂ ಜತೆ ಚರ್ಚಿಸುವೆ:

ವಿದ್ಯುತ್‌ ದರವನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿಲ್ಲ. ಸ್ವಾಯತ್ತ ಹೊಂದಿರುವ ಕೆಇಆರ್‌ಸಿ ಹೆಚ್ಚಳ ಮಾಡಿದೆ. ಅಷ್ಟಕ್ಕೂ ನಮ್ಮ ಸರ್ಕಾರ ಬರುವ ಮೊದಲೇ ಹೆಚ್ಚಳ ಮಾಡಿದೆ. ಹೀಗಾಗಿ ಬೆಲೆ ಏರಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅದನ್ನು ಹಿಂಪಡೆಯಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಕೈಗಾರಿಕೆಗಳ ಹಿತದೃಷ್ಟಿಯಿಂದ ತಾವು ಈ ವಿಷಯವಾಗಿ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ ಎಂದರು.

ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಜೊತೆಗೆ ಚರ್ಚಿಸಿ ಏನು ಪರಿಹಾರ ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲ ಸಚಿವರು ದೆಹಲಿಗೆ ಹೋಗಿಲ್ಲ. ಮುಖ್ಯಮಂತ್ರಿಗಳು ಹೋಗಿದ್ದಾರೆ. ಕೆಲ ಸಚಿವರು ಹೋಗಿದ್ದಾರೆ. ಅವರು ತಮ್ಮ ತಮ್ಮ ಇಲಾಖೆಗಳ ಬಗ್ಗೆ ಕೇಂದ್ರ ಸಚಿವರ ಜೊತೆಗೆ ಮಾತನಾಡಲು ತೆರಳಿದ್ದಾರೆ ಎಂದು ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios