ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಬಿಟ್ಟು ಇಂದು ವಿರೋಧಿಸೋದು ತಪ್ಪು: ಸಚಿವ ಮಧು ಬಂಗಾರಪ್ಪ
ಅಧಿಕಾರದಲ್ಲಿ ಇದ್ದಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿರೋಧ ಪಕ್ಷಗಳು ಇಂದು ವಿರೋಧ ವ್ಯಕ್ತಪಡಿಸುವ ಮೂಲಕ ರೈತರು ಮತ್ತು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸುವುದನ್ನು ಬಿಟ್ಟು ಪ್ರತಿಭಟನೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
ಸೊರಬ (ಸೆ.29): ಅಧಿಕಾರದಲ್ಲಿ ಇದ್ದಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿರೋಧ ಪಕ್ಷಗಳು ಇಂದು ವಿರೋಧ ವ್ಯಕ್ತಪಡಿಸುವ ಮೂಲಕ ರೈತರು ಮತ್ತು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸುವುದನ್ನು ಬಿಟ್ಟು ಪ್ರತಿಭಟನೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.
ವರದಾ ನದಿಗೆ ನಿರ್ಮಿಸಿರುವ ಸೇತುವೆ ಕಾಮಗಾರಿ ವೀಕ್ಷಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯ ಆದೇಶದ ಅನ್ವಯ ತಮಿಳುನಾಡಿಗೆ ಕಾವೇರಿ ನೀರು ಹರಿಸ ಲಾಗುತ್ತದೆ. ಈ ಬಗ್ಗೆ ಕಾವೇರಿ ಜಲ ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವುದರಿಂದ ಯಾವುದೇ ಸರ್ಕಾರ ನೀರು ಹರಿಸುವ ವಿಚಾರವಾಗಿ ತಾರತಮ್ಯ ಮಾಡಲು ಬರುವುದಿಲ್ಲ. ಬಾಯಿಗೆ ಬೀಗ ಜಡಿದು ಕೊಂಡು ಮೌನ ವಹಿಸಿರುವ ರಾಜ್ಯದ ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಏಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಲಿಂಗಾಯತ ಡಿಸಿಎಂ ಯಾರಿಗೆ ಬೇಕು, ಮಾಡೋದಿದ್ರೆ ಸಿಎಂ ಮಾಡಿ: ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ
ಶಿಕ್ಷಣ ಇಲಾಖೆಯಲ್ಲಿ ಶೀಘ್ರದಲ್ಲೇ ಅದ್ಬುತ ಬದಲಾವಣೆ: ಸರ್ಕಾರದಿಂದ ಶಿಕ್ಷಣ ಇಲಾಖೆಯಲ್ಲಿ ಶೀಘ್ರದಲ್ಲೇ ಅದ್ಬುತ ಬದಲಾವಣೆ ತರಲಾಗುವುದು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸಮೀಪದ ಬಾವಿಕೆರೆ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಅಡಳಿತ, ತಾಪಂ, ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಗ್ರಾಪಂ. ಬಾವಿಕೆರೆ, ಸ.ಹಿ.ಪ್ರಾ.ಶಾಲೆ ಬಾವಿಕೆರೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಗುಂಪು ಆಟಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು,
ಮಕ್ಕಳೇ ಆಸ್ತಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗಾಗಿ ಮೊದಲು ಮಕ್ಕಳಿಗೆ ಹೊರೆಯಾಗಿರುವ ಪಠ್ಯ ಪುಸ್ತಕಗಳ ಬ್ಯಾಗ್ ಹೊರೆ ಕಡಿಮೆ ಮಾಡಬೇಕು, ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಒಂದೆಡೆ ಸೇರಿಸಬೇಕು, ಇದಕ್ಕಾಗಿ ಡಿಡಿಪಿಐ ಮತ್ತು ಬಿಇಒ ಶಾಸಕರೊಡನೆ ಚರ್ಚೆ ಮಾಡುವರು ಎಂದರು. ಮಕ್ಕಳಿಗೆ ಹೆಚ್ಚು ಅವಕಾಶ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ವರ್ಷಕ್ಕೆ ಮೂರು ಬಾರಿ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದೆ, ಇದರಿಂದ 42 ಸಾವಿರ ಮಕ್ಕಳು ಕಾಲೇಜಿಗೆ ಸೇರುವಂತಾಗಿದೆ ಎಂದರು.
ನಟ Jaggesh ದಿಢೀರ್ ಆಸ್ಪತ್ರೆಗೆ ದಾಖಲು: ಆತಂಕ ಹುಟ್ಟಿಸಿದ ನವರಸ ನಾಯಕನ ಪೋಟೋಸ್!
ಕೆಪಿಎಸ್ ಶಾಲೆಗಳು: ಎಲ್ ಕೆಜಿ, ಯುಕೆಜಿಯಿಂದ ಹಿಡಿದು ಪಿಯುಸಿ.ತನಕ ಎಲ್ಲ ಮಕ್ಕಳು ಒಂದೇ ಆವರಣದಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 3 ರಿಂದ 4 ಕೆಪಿಎಸ್ ಶಾಲೆಗಳಂತೆ ರಾಜ್ಯದಾದ್ಯಂತ ಒಟ್ಟು 600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹಾಗೂ ರಾಜ್ಯದಲ್ಲಿ 6000 ಗ್ರಾಪಂ ಗಳಿದ್ದು 2000 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗುವುದು, ಈ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಮತ್ತು ದೈಹಿಕ ಶಿಕ್ಷಣ, ಸಂಗೀತ ಶಿಕ್ಷಣ ಇತ್ಯಾದಿ ಎಲ್ಲ ವಿಷಯಗಳಲ್ಲೂ ಗುಣಾತ್ಮಕ ಶಿಕ್ಷಣದ ವ್ಯವಸ್ಥೆ ನಿರ್ವಹಿಸಲಾಗುವುದು ಎಂದು ಹೇಳಿದರು.