Asianet Suvarna News Asianet Suvarna News

ನಾವು ಹೇಳಿದ್ದು ವಿಧಾನಸಭೆಯೊಳಗೆ ಬಿಜೆಪಿಗೆ ನಾಯಕನಿಲ್ಲ ಅಂತ, ಆಯ್ಕೆಯಾಗಿದ್ದು ರಾಜ್ಯಾಧ್ಯಕ್ಷ: ಸಚಿವ ಮಧು

ನಾವು ಹೇಳಿದ್ದು ವಿಧಾನಸಭೆಯೊಳಗೆ ಬಿಜೆಪಿಗೆ ನಾಯಕನಿಲ್ಲ ಎಂದು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ. ವಿಧಾನಸಭೆ ಒಳಗೆ ಆ‌ ಪಕ್ಷಕ್ಕೆ ಈಗಲೂ ವಿಪಕ್ಷ ನಾಯಕ‌ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Minister Madhu Bangarappa Slams On BJP At Shivamogga gvd
Author
First Published Nov 13, 2023, 12:30 AM IST

ಶಿವಮೊಗ್ಗ (ನ.13): ನಾವು ಹೇಳಿದ್ದು ವಿಧಾನಸಭೆಯೊಳಗೆ ಬಿಜೆಪಿಗೆ ನಾಯಕನಿಲ್ಲ ಎಂದು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ. ವಿಧಾನಸಭೆ ಒಳಗೆ ಆ‌ ಪಕ್ಷಕ್ಕೆ ಈಗಲೂ ವಿಪಕ್ಷ ನಾಯಕ‌ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಈಗ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇಷ್ಟು ದಿನ ಯಾಕೆ ಮಾಡಲಿಲ್ಲ, ವಿಧಾನಸಭೆಯೊಳಗೆ ಪ್ರಶ್ನೆ ಮಾಡೋರು ಯಾರು? ಪ್ರಶ್ನಿಸಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುತ್ತಿದ್ದಂತೆ ಲೋಕಸಭಾ ಚುಣಾವಣೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ. ಯಾರು ಎಷ್ಟು ಸ್ಥಾನ ಎಂದು ತೀರ್ಮಾನ ಮಾಡೋದು ಜನರು. ಅವರು ನಮ್ಮ ಹಣೆಬರಹ ಬರೆಯುತ್ತಾರೆ. ಈ ಹಿಂದೆ ಸಹ ಬಿಜೆಪಿಯಿಂದ ಬಹಳ ಅಧ್ಯಕ್ಷರು ಬಂದಿದ್ದರು. ಬಹಳ ಭಾಷಣ ಮಾಡಿದ್ದರು, ಆದರೂ ಏನು ಆಗಿಲ್ಲ ಎಂದರು.

ಜನ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಅಧ್ಯಕ್ಷರು ಬಂದ ತಕ್ಷಣ ಏನು ಆಗಲ್ಲ, ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು. ಬಿಜೆಪಿಯವರು ವಿಧಾನಸಭಾ ಚುನಾವಣೆಯಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದರು. ಈಗಲೂ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು. ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ‌ವನ್ನು ತನಿಖೆ ಮಾಡಲು ನಾನೊಬ್ಬನೇ ತೀರ್ಮಾನ ಮಾಡಲು ಆಗಲ್ಲ. ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿದೆ. ಜನರು ಈ ಎಲ್ಲ ಯೋಜನೆ ಬಗ್ಗೆ ಯೋಚನೆ ಮಾಡುತ್ತಾರೆ ಎಂದರು.

ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಸಂಸದ ರಾಘವೇಂದ್ರ ಮಾತನಾಡಿದ್ದಾರೆ. ನಮ್ಮ ತಂದೆ ಬಂಗಾರಪ್ಪ ಅವರು ಇದ್ದಾಗಲೇ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಚಾಲನೆ ನೀಡಿದ ಬಳಿಕ ನಮ್ಮ ತಂದೆಯವರು ಅಧಿಕಾರದಲ್ಲಿ ಇರಲಿಲ್ಲ. ಆದರೆ, ರಾಘವೆಂದ್ರ ಅವರಿಗೆ ಆಗ ಬಂಗಾರಪ್ಪ ಅವರು ಅಧಿಕಾರದಲ್ಲಿ ಇದ್ದರು ಎಂದು ಯಾರು ಹೇಳಿದ್ದಾರೋ ನಮಗೆ ಗೊತ್ತಿಲ್ಲ. ನೀರಾವರಿ ಯೋಜನೆ ನಾನು ಮಾಡಿದ್ದು ಅಂತಾ ಎಲ್ಲಿಯೂ ಹೇಳಿಲ್ಲ. ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಬಂಗಾರಪ್ಪ ಕಾಲದಲ್ಲಿ ಹಾಗೂ ಯಡಿಯೂರಪ್ಪ ಕಾಲದಲ್ಲಿ ಆಗಿದೆ. ಸಂಸದರು ಮೊದಲು ಕೇಂದ್ರ ಸರ್ಕಾರದ ಜೊತೆ ಮಾತನಾಡಿ, ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲಿ ಎಂದು ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios