ಜುಲೈ 12ರಂದು ಈಶ್ವರಪ್ಪ ದೆಹಲಿಗೆ: ಕಾರಣವೂ ಕೊಟ್ಟ ಸಚಿವ
* ಜುಲೈ 12 ಮತ್ತು 13 ರಂದು ದೆಹಲಿಗೆ ಈಶ್ವರಪ್ಪ
* ಸಿಎಂ ಯಡಿಯೂರಪ್ಪ ಜೊತೆ ಶೀತಲ ಸಮರ ಇಲ್ಲ ಎಂದ ಈಶ್ವರಪ್ಪ
* ಬುಧವಾರ ಕಲಬುರಗಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ
ಕಲಬುರಗಿ, (ಜುಲೈ.07): ಮುಖ್ಯಮಂತ್ರಿ ಯಡಿಯೂರಪ್ಪ ಜತೆ ತಮ್ಮದು ಯಾವುದೇ ರೀತಿಯಲ್ಲಿ ಶೀತಲ ಸಮರವಿಲ್ಲವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಜುಲೈ 12 ಮತ್ತು 13 ರಂದು ದೆಹಲಿಗೆ ಹೋಗುತ್ತಿದ್ದೇನೆ. ಇದು ರಾಜಕಾರಣಕ್ಕಾಗಿ ಮಾಡುತ್ತಿರುವ ನನ್ನ ಭೇಟಿಯಂತೂ ಅಲ್ಲ, ಮನೆ ಮನೆಗೆ ಗಂಗೆ ತರಬೇಕು ಅನ್ನೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಹೋಗಬೇಕಿದೆ. ನಾನು ಹಾಗೂ ಸಿಎಂ ಇಬ್ಬರು ಸೇರಿ ಹೋಗಬೇಕಾಗಿತ್ತು , ಆದ್ರೆ ಸಿಎಂ ಬರೋಕೆ ಆಗಲ್ಲ ನೀವೆ ಹೋಗಿ ಬನ್ನಿ ಅಂತಾ ಹೇಳಿದ್ದಾರೆಎಂದು ಸ್ಪಷ್ಟಪಡಿಸಿದರು.
ಈ ಬೆಳವಣಿಗೆ ಬಿಜೆಪಿಯಲ್ಲೂ ಬಂದಿದೆ: ಕಾರ್ಯಕಾರಿಣಿಯಲ್ಲಿ ಮನಬಿಚ್ಚಿ ಮಾತನಾಡಿದ ಈಶ್ವರಪ್ಪ
ಆರ್ಥಿಕ ಇಲಾಖೆಗೆ 'ಅಹಂ' ಬಂದಿದೆ
ಆರ್ಥಿಕ ಇಲಾಖೆಯಿಂದ ನೇರವಾಗಿ ಶಾಸಕರಿಗೆ ಹಣ ಹೋಗೊಕೆ ಅವಕಾಶ ಇದೇನಾ ಅಂತಾ ಕೇಳಿದ್ದೇನೆ ಅಷ್ಟೆ, ನಮ್ಮ ಮಧ್ಯೆ ಯಾವುದೆ ಶೀತಲ ಸಮರ ಇಲ್ಲ, ಆರ್ಥಿಕ ಇಲಾಖೆಗೆ ಪ್ರಪಂಚದಲ್ಲಿ ಎಲ್ಲವು ನಾನೆ ಅನ್ನೋದು ಬಂದಿದೆ ಹಾಗಾಗಿ ಈ ರೀತಿಯಾಗಿದೆ ಎಂದರು.
ರಾಜ್ಯದಲ್ಲಿ ಒಂದಿಬ್ಬರು ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತಾಡ್ತಿದ್ದಾರೆ ನಿಜ, ನಮ್ಮ ಪಕ್ಷಕ್ಕೆ ಕೇಂದ್ರದಲ್ಲಿ ಹೇಳುವವರು ಕೇಳುವವರು ಇದ್ದಾರೆ, ಯತ್ನಾಳ ಮತ್ತು ಯೋಗೇಶ್ವರ ಇನ್ನೂ ಮಾತಾಡಿದ್ದಾರೆ, ಕೇಂದ್ರದ ನಾಯಕರು ಅದನ್ನ ಗಮನಿಸ್ತಾರೆ. ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ನಾಲ್ಕು ಗೋಡೆಯಲ್ಲಿ ಚರ್ಚೆ ಮಾಡೋಕೆ ಅವಕಾಶವಿದೆ ಎಂದು ಹೇಳಿದರು.