ಬೆಂಗಳೂರು(ಡಿ.26): ಭ್ರಷ್ಟಾಚಾರದ ಆರೋಪ ಹೊತ್ತು ಜಾಮೀನಿನ ಮೇಲೆ ಹೊರಗೆ ಇರುವವರು ನನಗೆ ಸರ್ಟಿಫಿಕೆಟ್‌ ನೀಡುವುದು ಬೇಡ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಕಾಂಗ್ರೆಸ್ಸಿನ ಡಿ.ಕೆ.ಸಹೋದರರಿಗೆ ತಿರುಗೇಟು ನೀಡಿದ್ದಾರೆ.

"

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋಜು, ಮಸ್ತಿ, ಭ್ರಷ್ಟಾಚಾರದ ಆರೋಪ ಹೊತ್ತುಕೊಂಡು ಜಾಮೀನಿನ ಮೇಲೆ ಹೊರಗೆ ಇರುವವರು ಯಾರು ಮತ್ತು ಅವರ ರಾಜಕೀಯ ಹಿನ್ನೆಲೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇಂತಹವರಿಂದ ನಾನು ನನ್ನ ಇಲಾಖೆಯ ಬಗ್ಗೆ ಹೇಳಿಸಿಕೊಳ್ಳಬೇಕಾದ ಅಗತ್ಯ ಇಲ್ಲ ಎಂದರು.

ನೈಟ್ ಕರ್ಫ್ಯೂ ನಿರ್ಧಾರ ಮಾಡಿದ್ದ ಆ ಸಚಿವಗೆ ಡಿಕೆಶಿ ಫುಲ್ ಕ್ಲಾಸ್..!

ಯಾರು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದಿದ್ದಾರೋ ಅಂತಹವರು ನನ್ನ ಬಗ್ಗೆ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದವರು ಮೊದಲು ತಮ್ಮ ಹಿನ್ನೆಲೆ ಏನೆಂಬುದನ್ನು ಅರಿತು ಮಾತನಾಡಬೇಕು. ಇವರ ಹಿನ್ನೆಲೆ ಏನೆಂಬುದು ಇಡೀ ದೇಶ ಮತ್ತು ರಾಜ್ಯಕ್ಕೆ ಗೊತ್ತಿದೆ ಎಂದು ಕಿಡಿಕಾರಿದರು.