ಬಿಜೆಪಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ನೆನಪಾಗಿದೆ: ಮಹದೇವಪ್ಪ
ಹಳೆಯ ಸಂಸತ್ ಭವನಕ್ಕೆ ಸಂವಿಧಾನ ಭವನ ಎಂದು ಹೆಸರಿಟ್ಟ ವಿಚಾರವಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯ ಮಾಡಿದ್ದಾರೆ. ಇದೀಗ ಸಂವಿಧಾನದ ಹೆಸರನ್ನು ನೆನಪು ಮಾಡಿಕೊಳ್ಳುತ್ತಿರುವ ಬಿಜೆಪಿಗರು.
ಬೆಂಗಳೂರು (ಸೆ.21): ಹಳೆಯ ಸಂಸತ್ ಭವನಕ್ಕೆ ಸಂವಿಧಾನ ಭವನ ಎಂದು ಹೆಸರಿಟ್ಟ ವಿಚಾರವಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯ ಮಾಡಿದ್ದಾರೆ. ಇದೀಗ ಸಂವಿಧಾನದ ಹೆಸರನ್ನು ನೆನಪು ಮಾಡಿಕೊಳ್ಳುತ್ತಿರುವ ಬಿಜೆಪಿಗರು. ಅಸಂವಿಧಾನಿಕ ಚಟುವಟಿಕೆಗಳಿಗಾಗಿಯೇ ಸದಾ ಕುಖ್ಯಾತಿ ಹೊಂದಿರುವಂತವರು. ಇಂತವರ ಈ ಚುನಾವಣೆಯ ಸಂದರ್ಭದ ನಾಟಕಗಳಿಗೆ ಏನು ಹೇಳಬೇಕೋ ತಿಳಿಯದಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಂಡು ಆಮಿಷಗಳನ್ನ ಒಡ್ಡಿ, ಸಂವಿಧಾನ ವಿರೋಧಿ ನೀತಿಗಳಿಗೆ ವಿರುದ್ಧವಾಗಿ ಸರ್ಕಾರಗಳನ್ನ ಕೆಡವುವ ಬಿಜೆಪಿಗರು.
ಹಳೆಯ ಸಂಸತ್ ಭವನಕ್ಕೆ ಸಂವಿಧಾನ ಭವನ ಎಂದು ಹೆಸರು ಇಟ್ಟಿರುವುದು, ಇವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ. ಕಟ್ಟಡ ಮೇಲಷ್ಟೇ ಅಲ್ಲ ನಿಮ್ಮೆದೆಯಲ್ಲೂ ನಮ್ಮ ಸಂವಿಧಾನ ಕಾಪಾಡಿಕೊಳ್ಳಿ.ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ಘೋಷಣೆ. ನಾಲ್ಕುವರೆ ವರ್ಷಗಳ ಕಾಲ ಮಲಗಿದ್ದ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ರಾಜಕೀಯ ಮೀಸಲಾತಿ ನೆನಪಾಗಿದೆ. ಆದರೆ ನುಡಿದಂತೆ ನಡೆಯುವ ಪಕ್ಷ ಯಾವುದು ಎಂಬುದರ ಕುರಿತಂತೆ ನಮ್ಮ ಗೃಹಲಕ್ಷ್ಮಿಯರಿಗೆ ಚೆನ್ನಾಗಿ ತಿಳಿದಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಟ್ವೀಟ್ ಮೂಲಕ ಸಚಿವ ಎಚ್.ಸಿ.ಮಹದೇವಪ್ಪ ವ್ಯಂಗ್ಯ ಮಾಡಿದ್ದಾರೆ.
ಹೊಣೆಗಾರಿಕೆ ಅರಿವನ್ನು ಮೂಡಿಸಬೇಕು: ಪ್ರತಿಯೊಬ್ಬ ಶಿಕ್ಷಕರಿಗೂ ಸಚ್ಚಾರಿತ್ರ್ಯ ಹಿನ್ನೆಲೆ ನೈತಿಕತೆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಶಿಕ್ಷಣದ ಮೂಲಕ ಯುವ ಜನರಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿವನ್ನು ಮೂಡಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಪಟ್ಟಣದ ಹಳೇ ತಿರುಮಕೂಡಲಿನ ಮೈಸೂರು ರಸ್ತೆಯಲ್ಲಿರುವ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದಿನ ಯುವ ಜನತೆಗೆ ನೈತಿಕತೆ ಪಾಠದ ಅಗತ್ಯವಿದೆ. ಶಿಕ್ಷಕರ ವೃತ್ತಿ ಧರ್ಮ ಸಮಾಜಕ್ಕೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂದರು.
ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ 100 ದಿನ: 62 ಕೋಟಿ ಪ್ರಯಾಣಿಕರು, ಟಿಕೆಟ್ ಮಾರಾಟವೆಷ್ಟು?
ದೇಶದ ಶೇ. 95 ಕ್ಕೂ ಬಹುಸಂಖ್ಯಾತ ಜನರಿಗೆ ಶಿಕ್ಷಣವನ್ನು ನಿರಾಕರಿಸಿದ ಮನುವಾದದಿಂದ ಸ್ವಾತಂತ್ರ್ಯದ ನಂತರದ ದೇಶದಲ್ಲಿ ಶೇ. 10 ರಷ್ಟು ಶಿಕ್ಷಣದ ಪ್ರಮಾಣ ಇರಲಿಲ್ಲ. ಮಿಲ್ಲರ್ ಆಯೋಗವನ್ನು ವಾಪಸ್ಸು ಹೋಗು ಎನ್ನುವ ಪರಿಸ್ಥಿತಿಯಿತ್ತು. ದೇಶವನ್ನು ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದ ಬ್ರಿಟಿಷರ ಕಾಲದಲ್ಲಿ ಲಾರ್ಡ್ ಮೆಕಾಲೆ ಅವರು ಸಾರ್ವತ್ರಿಕರಣಗೊಳಿಸಿ ಶಿಕ್ಷಣವನ್ನು ಎಲ್ಲರೂ ಕಲಿಯಲು ಮುನ್ನುಡಿ ಬರೆದರು ಎಂದರು.