ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್ ತರ, ಸಚಿವ ಹಾಲಪ್ಪ ಆಚಾರ್ ಟಾಂಗ್
* ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್ ತರ
* ಸಾಕ್ಷಿ ಕೊಡದೇ ಪ್ರಿಯಾಂಕ್ ಖರ್ಗೆ ಪಲಾಯನ ಮಾಡಿದ್ದಾರೆ
* ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಸಚಿವ ಹಾಲಪ್ಪ ಆಚಾರ್ ಟಾಂಗ್
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ, (ಏ.28): ರಾಜ್ಯದಲ್ಲಿ ಪಿಎಸ್ಐ ಅಕ್ರಮ ನೇಮಕಾತಿ ಭಾರಿ ಸೌಂಡ್ ಮಾಡ್ತಿದೆ. 545 ಪಿಎಸ್ಐ ಹುದ್ದೆಗಳಿಗೆ ನಡೆದ ನೇಮಕಾತಿ ಅಕ್ರಮ ನಡೆದಿದೆ ಅಂತ ಅನುಮಾನ ಬಂದ ಹಿನ್ನೆಲೆ ಸರ್ಕಾರ ಸಿಐಡಿ ತನಿಖೆಗೆ ಕೊಟ್ಟಿದೆ. ಈಗ ಸಿಐಡಿ ತಂಡ ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್ ಪೀನ್ ಗಳಿಗಾಗಿ ಜಾಲ ಬೀಸಿದೆ, ಕೆಲವರನ್ನು ಸೆರೆಹಿಡದಿದೆ. ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅಭ್ಯರ್ಥಿ ಮತ್ತು ಮಧ್ಯವರ್ತಿಗಳ ನಡುವೆ ನಡೆದ ಆಡಿಯೋವನ್ನು ರಿಲೀಸ್ ಮಾಡಿದ್ದರು. ಈ ಆಡಿಯೋ ರಿಲೀಸ್ ಮಾಡಿದ್ದರಿಂದಾಗಿ ಸಿಐಡಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಆದ್ರೆ ಪ್ರಿಯಾಂಕ ಖರ್ಗೆ ವಿಚಾರಣೆಗೆ ಹಾಹರಾಗಿರಲಿಲ್ಲ, ಇದು ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ ಸಚಿವ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್ ತರ
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಯಾದಗಿರಿಯಲ್ಲಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು. ಪ್ರಿಯಾಂಕ್ ಖರ್ಗೆ ಏನ್ ಮಾತಾಡ್ತಾಯಿದ್ದಾರೆ ಎನ್ನುವುದು ಅವರಿಗೆ ಗೊತ್ತದೆಯೋ ಇಲ್ಲ ಗೊತ್ತಿಲ್ಲ ಎಂದರು. ಮಾಧ್ಯಮಗಳ ಮುಂದೆ ನನ್ನ ಬಳಿ ಇನ್ನು ಸಾಕ್ಷಿಗಳಿವೆ, ಬಿಡುಗಡೆ ಮಾಡ್ತೀನಿ ಅಂತ ಹೇಳಿದ್ರು ಆದ್ರೆ ಸಾಕ್ಷಿ ಕೊಡದೇ ತಪ್ಪಿಸಿಕೊಂಡಿದ್ದಾರೆ ಎಂದರು.
PSI Scam: ದೊಡ್ಡ-ದೊಡ್ಡ ಮೀನುಗಳು ಬೆಂಗಳೂರಿನಲ್ಲಿವೆ, ಬಾಂಬ್ ಸಿಡಿಸಿದ ಪ್ರಿಯಾಂಕ್ ಖರ್ಗೆ
ಸಿಐಡಿ ಸಾಕ್ಷಿ ಕೊಡಿ ಅಂದ್ರು ಕೊಟ್ಟಿಲ್ಲ
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಿಯಾಂಕ್ ಖರ್ಗೆ ಸಿಐಡಿ ನೋಟಿಸ್ ನೀಡಿ ವಿಚಾರಣೆಗ ಹಾಜರಾಗಿ, ನಿಮ್ಮ ಬಳಿ ಇರುವ ಸಾಕ್ಷಿಗಳಿದ್ದರೆ ಕೊಡಿ ಇ ಅಂತ ಕೇಳಿತ್ತು, ಆದ್ರೆ ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಯಾಕೆ ಹಾಹರಾಗಿಲ್ಲ ಎಂದು ಪ್ರಶ್ನಿಸಿದರು. ಅಕ್ರಮ ನಡೆದಿದೆ ಅಂದ ತಕ್ಷಣ ನಮಗೆ ಮಾಹಿತಿ ಇದ್ರೆ ಪೋಲಿಸರಿಗೆ ಕೊಟ್ಟು ಸಹಕಾರ ಕೊಡಬೇಕು.
ಪ್ರಿಯಾಂಕ್ ಖರ್ಗೆ ಪಲಾಯನ ಮಾಡೋದು ಎಷ್ಟು ಸರಿ..?
ಅಕ್ರಮದ ಬಗ್ಗೆ ತನ್ನ ಬಳಿ ಪುರಾವೆಯಿವೆ ಎಂದು ಹೇಳಿದ್ದ ಪ್ರಿಯಾಂಕ್ ಖರ್ಗೆ ಸಿಐಡಿ ನೋಟಸ್ ವಿಚಾರಣೆಗೆ ಹಾಜರಾಗದೇ ಪಲಾಯನ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸದರು. ಈ ಪ್ರಕರಣದಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಸ್ಪಷ್ಟನೆ ನೀಡಿದರು.
ಸಿಎಂ ಕೇವಲ ಪೋಲಿಸರಿಂದ್ದಲ್ಲದೇ ಸಿಐಡಿಯಿಂದ ತನಿಖೆ
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣವನ್ನು ಸರ್ಕಾರ ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದು, ನಮ್ಮ ಸಿಎಂ ಅವರ ಗಮನಕ್ಕೆ ಬಂದ ಕೂಡಲೇ ಇದು ಕೇವಲ ಪೋಲಿಸರಿಂದ ಅಲ್ಲ, ಸಿಐಡಿ ಯಿಂದ ತನಿಖೆ ಮಾಡಿಸುತ್ತಿದ್ದಾರೆ. ಈ ಪ್ರಕರಣ ಪೂರ್ತಿ ತನಿಖೆ ನಡೆಸಿ ಯಾರು ಯಾರು ತಪ್ಪಿತಸ್ಥರಿದ್ದಾರೋ ಎಲ್ಲರನ್ನು ಹಡೆಮುರಿ ಕಟ್ಟಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.