PSI Scam: ದೊಡ್ಡ-ದೊಡ್ಡ ಮೀನುಗಳು ಬೆಂಗಳೂರಿನಲ್ಲಿವೆ, ಬಾಂಬ್ ಸಿಡಿಸಿದ ಪ್ರಿಯಾಂಕ್ ಖರ್ಗೆ

* ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ
* ಪ್ರೀಯಾಂಕ್ ಖರ್ಗೆಗೆ ಸಿಐಡಿ ಮತ್ತೊಂದು ನೋಟಿಸ್
* ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

Congress MLA Priyank Kharge Reacts On CID Second Notice In PSI recruitment Scam Case rbj

ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್

ಕಲಬುರಗಿ, (ಏ.28):
ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ (PSI recruitment Scam) ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿದೆ.

 ಇನ್ನು ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಇಂದು(ಗುರುವಾರ) ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಪ್ರೀಯಾಂಕ್ ಖರ್ಗೆ ಅವರಿಗೆ ಮತ್ತೊಂದು ನೋಟಿಸ್ ನೀಡಿದೆ. ಸಿಐಡಿ ಪ್ರೀಯಾಂಕ್ ಖರ್ಗೆ ಅವರಿಗೆ ನೀಡುತ್ತಿರುವ ಎರಡನೇ ನೋಟಿಸ್ ಇದಾಗಿದೆ.  ಸಿಐಡಿ ತಮಗೆ ಎರಡನೇ ನೋಟಿಸ್ ನೀಡಿದೆ ಎನ್ನುವುದನ್ನು ಸ್ವತಃ ಪ್ರೀಯಾಂಕ್ ಖರ್ಗೆ ಬಹಿರಂಗಪಡಿಸಿದ್ದಾರೆ. 

2ನೇ ನೋಟಿಸ್‌ ಬಗ್ಗೆ ಕಲಬುರಗಿಯಲ್ಲಿ ಇಂದು(ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀಯಾಂಕ್ ಖರ್ಗೆ, ಸಿಐಡಿ ಅಧಿಕಾರಿಗಳು ಇಂದು ನನಗೆ ಮತ್ತೆ ಎರಡನೇ ಬಾರಿ ನೋಟಿಸ್ ನೀಡಿದ್ದಾರೆ.‌ ಬೆಂಗಳೂರಿನಲ್ಲಿನ ನನ್ನ ಕಚೇರಿಗೆ ಸಿಐಡಿ ಅಧಿಕಾರಿಗಳು ಬಂದು ನೋಟಿಸ್ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.ನಾನು ಕಲಬುರಗಿಗೆ ಫ್ಲೈಟ್‌ನಲ್ಲಿ ಆಗಮಿಸುತ್ತಿರುವಾಗ ಸಿಐಡಿಯಿಂದ ಫೋನ್ ಬಂದಿದೆ.‌ ಆದರೆ ನಾ ಸಿಐಡಿ ಅಧಿಕಾರಿಗಳ ಫೋನ್ ರಿಸಿವ್ ಮಾಡಲಿಲ್ಲ. ನಂತರ ನಮ್ಮ ಸಿಬ್ಬಂದಿಗಳಿಂದ ಮಾಹಿತಿ ಬಂದಿದೆ. ಸಿಐಡಿ ಅಧಿಕಾರಿಗಳು ಬಂದು ನೋಟಿಸ್ ನೀಡಿರುವ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.

PSI Recruitment Scam: ಪಿಎಸ್‌ಐ ಹಗರಣ ಸತ್ಯ ತಿಳಿಯಲು ಮೊದಲು ದಿವ್ಯಾ ಬಂಧಿಸಿ: ಪ್ರಿಯಾಂಕ್‌ ಖರ್ಗೆ

ಹಾಜರಾಗುವ ಅಗತ್ಯವಿಲ್ಲ
ಸಿಐಡಿ ನೀಡಿರುವ ಮೊದಲ ನೋಟಿಸ್‌ಗೆ ಲಿಖಿತವಾಗಿ ಉತ್ತರಿಸಿದ್ದೇನೆ. ಆದ್ರೆ ನಾನು ಸಿಐಡಿ ಕಚೇರಿಗೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ. ಸೆಕ್ಷನ್ 91 ರ ಪ್ರಕಾರ ನಿರ್ದಿಷ್ಟ ಸಾಕ್ಷಿ ಒದಗಿಸುವ ಬಗ್ಗೆ ಹೇಳಬೇಕು. ಆದ್ರೆ ಸಿಐಡಿ ನಿರ್ದಿಷ್ಟವಾಗಿ ಯಾವ ಸಾಕ್ಷ್ಯ ನೀಡುವಂತೆ ನನಗೆ ಹೇಳದೇ ನಿಮ್ಮಲ್ಲಿರುವ ಎಲ್ಲಾ ಸಾಕ್ಷಿ ಕೊಡಿ ಅಂದ್ರೆ ಹೇಗೆ ? ಪ್ರಕರಣದಲ್ಲಿ ತಲೆಮರೆಸಿಕೊಂಡಿರೋ ದಿವ್ಯಾ ಬಂಧನಕ್ಕೆ ಯಾಕೆ ವಿಳಂಬವಾಗುತ್ತಿದೆ. ದಿವ್ಯಾರವರಲ್ಲಿ ಅಂತಹ ದಿವ್ಯ ಶಕ್ತಿ ಏನಿದೆ? ಅವರಿಗೆ ರಕ್ಷಣೆ ನೀಡುತ್ತಿರುವವರು ಯಾರು ? ಎಂದು ಪ್ರಶ್ನಿಸಿದ್ದಾರೆ. 

ಸಚಿವ ಪ್ರಭು ಚವ್ಹಾಣಗೆ ನೋಟಿಸ್ ಕೊಡಿ
ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಚಿವ ಪ್ರಭು ಚೌವ್ಹಾಣ್ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಹಾಗಾದ್ರೆ ಇದರಲ್ಲಿ ಅಕ್ರಮ ನಡೆದಿದೆ ಎಂದು ಹೇಳಿರುವ ಪ್ರಭು ಚವಾಣ್ ಗೆ ಯಾಕೆ ನೋಟಿಸ್ ನೀಡಿಲ್ಲ ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ. ನನಗೆ ನೋಟಿಸ್ ನೀಡುವುದಾದರೆ, ಸಚಿವ ಪ್ರಭು ಚವ್ಹಾಣ್ ಅವರಿಗೂ ನೋಟಿಸ್ ನೀಡಿ. ಈ ಪ್ರಕರಣದಲ್ಲಿ ನಮಗೊಂದು ನ್ಯಾಯ ಬಿಜೆಪಿಗೊಂದು ನ್ಯಾಯಾನಾ ಎಂದು ಅವರು ಖಾರವಾಗಿ ತಿರುಗೇಟು ನೀಡಿದರು.

ಬಿಜೆಪಿಯ ಎಲ್ಲರೂ ಭಾಗಿಯಾಗಿದ್ದಾರೆ
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಕಲಬುರಗಿ ಸುತ್ತ ಗಿರಕಿ ಹೊಡೆಯುತ್ತಿದೆ. ಆರ್. ಡಿ ಪಾಟೀಲ್ ದಿವ್ಯ ಹಾಗರಗಿ ಸುತ್ತವೇ ಪ್ರಕರಣ ಸುತ್ತುತ್ತಿದೆ. ಇದೆಲ್ಲಾ ಸಣ್ಣ ಮೀನುಗಳು. ದೊಡ್ಡ ದೊಡ್ಡ ಮೀನುಗಳು ಬೆಂಗಳೂರಿನಲ್ಲಿವೆ. ಬಿಜೆಪಿಯವರೆಲ್ಲರೂ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ದೊಡ್ಡ ದೊಡ್ಡವರಿಗೂ ಈ ಹಗರಣದ ಹಣ ಹೋಗಿದೆ. ತನಿಖೆ ಬೆಂಗಳೂರಿನವರೆಗೂ ವಿಸ್ತರಿಸಲಿ. ಎಲ್ಲವೂ ಬಯಲಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದರು.

ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ
ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ತನಿಖೆಗೆ ಹಾಜರಾಗಲು ನನಗೆ ಭಯ ಇಲ್ಲ. ನನ್ನ ಬಗ್ಗೆ ಅವರಿಗೆ ಭಯ ಹುಟ್ಟಿದ್ದರಿಂದಲೇ ನೋಟಿಸ್ ನೀಡಿದ್ದಾರೆ ಎಂದು ಪ್ರೀಯಾಂಕ್ ಖರ್ಗೆ ತಿರುಗೇಟು ನೀಡಿದರು. ಹಾಜರಾದ್ರೆ ಲಾಕ್ ಆಗ್ತನಿ ಅನ್ನೋದು ನಗೆಪಾಟಿಲು. ನಾನು ಲಾಕ್ ಆಗುವುದಿಲ್ಲ.. ನಾನು ಯಾವಾಗಲೂ ಅನ್‌ಲಾಕ್ ಆಗಿಯೇ ಇರ್ತಿನಿ. ಪಾರದರ್ಶಕವಾಗಿ ನಾನು ತನಿಖೆಗೆ ಆಗ್ರಹಿಸಿದ್ದೇನೆ ಎಂದರು. 

ಪ್ರತ್ಯೇಕ ಕೋರ್ಟ್ ಬೇಕು
PWD ಪರೀಕ್ಷೆ ಅಕ್ರಮದ ವಿಡಿಯೋ ವೈರಲ್ ಕುರಿತು ಕೇಳಲಾದ ಪ್ರಶ್ನೆಗೆ, ಇದೊಂದೆ ಅಲ್ಲ.. ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿವೆ. ಬಿಜೆಪಿ ಸರ್ಕಾರಗಳ ಹಗರಣಗಳ ತನಿಖೆ ನಡೆಸಲು ಪ್ರತ್ಯೇಕ ಕೋರ್ಟ್ ತೆರೆಯಬೇಕು ಎಂದು ವ್ಯಂಗ್ಯವಾಡಿದರು

Latest Videos
Follow Us:
Download App:
  • android
  • ios