Asianet Suvarna News Asianet Suvarna News

ನೀರಾವರಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ ಡೊಂಬರಾಟ ಆಡ್ತಿದೆ: ಸಚಿವ ಆಚಾರ್

2014ರ ಚುನಾವಣೆಗೆ ಮುನ್ನ ‘ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ’ ಎಂದು ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದರು. ಆಡಳಿತ ಮಾಡುವಾಗ ಉತ್ತರ ಕರ್ನಾಟಕದ ನೀರಾವರಿ ಯೋಜನೆ ಕುರಿತು ಕಾಳಜಿ ವಹಿಸಲಿಲ್ಲ. ಇದೀಗ ಚುನಾವಣೆ ಸಮೀಪಿಸಿದ್ದರಿಂದ ನೀರಾವರಿ ಯೋಜನೆ ಹೆಸರಿನಲ್ಲಿ ಡೊಂಬರಾಟ ಶುರು ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಟೀಕಿಸಿದರು.

minister halappa achar outraged on congress party at hubballi rav
Author
First Published Jan 3, 2023, 12:53 PM IST

ಹುಬ್ಬಳ್ಳಿ (ಜ.3) : 2014ರ ಚುನಾವಣೆಗೆ ಮುನ್ನ ‘ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ’ ಎಂದು ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದರು. ಆಡಳಿತ ಮಾಡುವಾಗ ಉತ್ತರ ಕರ್ನಾಟಕದ ನೀರಾವರಿ ಯೋಜನೆ ಕುರಿತು ಕಾಳಜಿ ವಹಿಸಲಿಲ್ಲ. ಇದೀಗ ಚುನಾವಣೆ ಸಮೀಪಿಸಿದ್ದರಿಂದ ನೀರಾವರಿ ಯೋಜನೆ ಹೆಸರಿನಲ್ಲಿ ಡೊಂಬರಾಟ ಶುರು ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಟೀಕಿಸಿದರು.

ಇಲ್ಲಿನ ದಿವಟೆ ಓಣಿಯ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ವಾರ್ಡ್‌ ನಂ. 66 ಬೂತ್‌ ನಂ. 51ರ ಬೂತ್‌ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಂಗ್ರೆಸ್ಸಿ(Congress)ನವರಿಗೆ ದೇಶದ ಎಲ್ಲಿಯೂ ಜನ ಬೆಂಬಲವಿಲ್ಲ. ಕರ್ನಾಟಕದಲ್ಲಿ ಅಲ್ಪಸ್ವಲ್ಪ ಇದೆ. ಅದಕ್ಕೆ ಚುನಾವಣೆಗಾಗಿ ಮತ್ತು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಯಲಬುರ್ಗಾ: ಮುಂದಿನ ಚುನಾವಣೆಗೆ ನಾನೇ ಬಿಜೆಪಿ ಅಭ್ಯರ್ಥಿ, ಸಚಿವ ಆಚಾರ್‌

ಹುಬ್ಬಳ್ಳಿ ಬಿಜೆಪಿ ಶಕ್ತಿ ಕೇಂದ್ರ:

ಹುಬ್ಬಳ್ಳಿ (Hubballi)(ಬಿಜೆಪಿ(karnataka bjp)ಯ ಶಕ್ತಿ ಕೇಂದ್ರವಾಗಿದ್ದು ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ ಎಂದ ಸಚಿವರು, ದೇಶದಲ್ಲಿ 15 ಕೋಟಿ ಸದಸ್ಯರನ್ನು ಬಿಜೆಪಿ ಹೊಂದಿದೆ. ದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ತನ್ನದೇ ಆದ ಕಾರ್ಯ ಚಟುವಟಿಕೆ ಕೈಗೊಳ್ಳುವ ಮೂಲಕ ಅಧಿಕಾರಕ್ಕೆ ಬಂದಿದೆ. ಸಿದ್ಧಾಂತ, ತತ್ವಗಳಿಗೆ ಬದ್ಧವಾಗಿ ಬೆಳೆದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ದೇಶದ ಚುಕ್ಕಾಣಿ ಹಿಡಿದ ಬಳಿಕ ರಾಷ್ಟ್ರದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ಕೋವಿಡ್‌ನಿಂದ ಅನೇಕ ದೇಶಗಳು ಆರ್ಥಿಕವಾಗಿ ಸಂಕಷ್ಟಎದುರಿಸಿವೆ. ಆದರೆ, ದೇಶದ ಆರ್ಥಿಕತೆ ಮಾತ್ರ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಗಟ್ಟಿಯಾದ ನಾಯಕತ್ವವೇ ಕಾರಣ ಎಂದ ಅವರು, ವಾಸ್ತವಿಕ ಸತ್ಯದೊಂದಿಗೆ ಚುನಾವಣೆ ಎದುರಿಸಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಬೂತ್‌ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲ ಬೂತ್‌ ಸಮಿತಿ ಸದಸ್ಯರು, ತಾಲೂಕು, ಜಿಲ್ಲಾಮಟ್ಟದ ಮುಖಂಡರು, ಕಾರ್ಯಕರ್ತರನ್ನು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ 20 ಲಕ್ಷ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.

Gadag: ನಟ ಚೇತನ್‌ ಕ್ರಿಕೆಟ್‌ ಮೀಸಲಾತಿ ಚರ್ಚೆ ಪ್ರಚಾರಕ್ಕೆ ಸೀಮಿತ : ಸಚಿವ ಹಾಲಪ್ಪ ಆಚಾರ್ ಕಿಡಿ

ಈ ಅಭಿಯಾನದಲ್ಲಿ ಪೇಜ್‌ ಸಮಿತಿ ರಚನೆ ಪರಿಶೀಲಿಸಿ ಮತದಾರರ ನಿಯುಕ್ತಿ, ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸುವ ಮಾಹಿತಿ, 50 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಗುರಿ ಇದೆ ಎಂದರು. ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಹಾನಗರ ಮಾಜಿ ಮೇಯರ್‌ ಡಿ.ಕೆ. ಚವ್ಹಾಣ, ಪಾಲಿಕೆ ಸದಸ್ಯೆ ಪ್ರೀತಿ ಲದ್ವಾ, ರಂಗಾ ಬದ್ದಿ, ನೀಲಪ್ರಕಾಶ ಚವ್ಹಾಣ, ರವಿ ನಾಯಕ, ವಿನಯ ಸಜ್ಜನರ, ಮಂಜು ಬಿಜವಾಡ ಇದ್ದರು.

Follow Us:
Download App:
  • android
  • ios