ಯಲಬುರ್ಗಾ: ಮುಂದಿನ ಚುನಾವಣೆಗೆ ನಾನೇ ಬಿಜೆಪಿ ಅಭ್ಯರ್ಥಿ, ಸಚಿವ ಆಚಾರ್‌

ನಾನು ಈ ಕ್ಷೇತ್ರದ ವಿಧಾನಪರಿಷತ್‌ ಸದಸ್ಯನಾಗಿ, ಶಾಸಕನಾಗಿ, ಸಚಿವನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಅಪಸ್ವರಗಳಿಗೆ ಕಿವಿಗೊಡದೆ ಆತ್ಮಸ್ಥೆ ಧೈರ್ಯದಿಂದ ಚುನಾವಣೆಗೆ ಸನ್ನದ್ಧರಾಗಬೇಕು ಎಂದ ಸಚಿವ ಹಾಲಪ್ಪ ಆಚಾರ್‌ 

I am the BJP Candidate for the Next Election Says Minister Halappa Achar grg

ಯಲಬುರ್ಗಾ(ಡಿ.26): ಮುಂಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತ. ಕಾರ್ಯಕರ್ತರು ಅಪಸ್ವರಗಳಿಗೆ ಕಿವಿಗೊಡಬೇಡಿ ಎಂದು ಸಚಿವ ಹಾಲಪ್ಪ ಆಚಾರ್‌ ಮನವಿ ಮಾಡಿದರು. ತಾಲೂಕಿನ ಕುದ್ರಿಕೋಟಗಿ, ಹುಲೆಗುಡ್ಡ, ಚಿಕ್ಕಬನ್ನಿಗೋಳ, ಮಕ್ಕಳ್ಳಿ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ನಾನು ಈ ಕ್ಷೇತ್ರದ ವಿಧಾನಪರಿಷತ್‌ ಸದಸ್ಯನಾಗಿ, ಶಾಸಕನಾಗಿ, ಸಚಿವನಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಅಪಸ್ವರಗಳಿಗೆ ಕಿವಿಗೊಡದೆ ಆತ್ಮಸ್ಥೆ ಧೈರ್ಯದಿಂದ ಚುನಾವಣೆಗೆ ಸನ್ನದ್ಧರಾಗಬೇಕು ಎಂದರು.

ಮಾಜಿ ಬಸವರಾಜ ರಾಯರಡ್ಡಿ ಅವರು ಸಂಸದರಾಗಿ, ಶಾಸಕರಾಗಿ, ಸಚಿವರಾಗಿ 30 ವರ್ಷ ಅಧಿಕಾರ ನಡೆಸಿದರೂ ರೈತರಿಗಾಗಿ ಯಾವ ನೀರಾವರಿ ಯೋಜನೆಯನ್ನೂ ಜಾರಿಗೆ ತರಲಿಲ್ಲ. ಕೆರೆ ತುಂಬಿಸುವ ಯೋಜನೆಗೆ ಕೊಟ್ಟಮಾತಿನಂತೆ ನಡೆಯುತ್ತೇನೆ. ಶೀಘ್ರದಲ್ಲೇ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡುತ್ತೇನೆ. ಬಿಜೆಪಿ ಸರ್ಕಾರ ಜನಪರವಾದ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮೀಣ ಭಾಗದ ರೈತರ ಹಿತವನ್ನು ಕಾಪಾಡಲಿದೆ ಎಂದರು.

ಬಿಜೆಪಿಯಿಂದ ಸಂವಿಧಾನದ ಆಶಯ ಮರೆಮಾಚುವ ಷಡ್ಯಂತ್ರ

ಪಕ್ಷದ ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ರತನ್‌ ದೇಸಾಯಿ, ಕಳಕಪ್ಪ ಕಂಬಳಿ, ಬಸನಗೌಡ ತೊಂಡಿಹಾಳ, ಶಿವಕುಮಾರ ನಾಗಲಾಪುರಮಠ, ಶಿವಣ್ಣ ವಾದಿ, ಶರಣಪ್ಪ ಇಳಗೇರ, ಶಂಕರಗೌಡ ಬನ್ನಿಗೋಳ, ಶರಣಪ್ಪ ಹಟ್ಟಿ, ಗ್ರಾಪಂ ಸದಸ್ಯರಾದ ಮಂಜುಳಾ ಚನ್ನಪ್ಪನಹಳ್ಳಿ, ಗಾಳೆವ್ವ ಹರಿಜನ, ಶರಣಯ್ಯ ಬಂಡಿಹಾಳ, ಶರಣಪ್ಪ ಹೊಸೂರ, ಹನುಮಂತ ಗೋನಾಳ, ದುರಗಪ್ಪ ದೊಡ್ಮನಿ, ಬಸವರಾಜ ರೇವಡಿ, ಗ್ರೇಡ್‌-2 ತಹಸೀಲ್ದಾರ್‌ ನಾಗಪ್ಪ ಸಜ್ಜನ, ಲೋಕೋಪಯೋಗಿ ಇಲಾಖೆ ಅಧಿಕಾರಿ ಐ.ಕೆ. ಹೊಸೂರ, ಮಹಾಂತೇಶ, ಗೌತಮ್‌ ಜಾಧವ, ಶಂಕರ ಭಾವಿಮನಿ, ಯಮನೂರಪ್ಪ ನಡುವಲಮನಿ, ಸುರೇಶ ಹೊಸಳ್ಳಿ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios