ಸಿದ್ದರಾಮಯ್ಯ ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ಸ್ಪರ್ಧಿಸಲಿ: ಸಚಿವ ಸುಧಾಕರ್ ವ್ಯಂಗ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಝ್ಯದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಕ್ಷೇತ್ರಗಳಿಂದ ಸ್ಪರ್ಸಿದ್ದರೆ, ಎಲ್ಲಿಯೋ ಒಂದು ಕಡೆ ಗೆಲ್ಲಬಹುದಾಗಿತ್ತು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರ (ಮಾ.29): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಝ್ಯದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಕ್ಷೇತ್ರಗಳಿಂದ ಸ್ಪರ್ಸಿದ್ದರೆ, ಎಲ್ಲಿಯೋ ಒಂದು ಕಡೆ ಗೆಲ್ಲಬಹುದಾಗಿತ್ತು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವ್ಯಂಗ್ಯವಾಡಿದರು. ಜಿಲ್ಲೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅವರು ವರುಣಾ ಮತ್ತು ಕೋಲಾರ ಕ್ಷೇತ್ರಗಳ ಬದಲಿಗೆ ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಕ್ಷೇತ್ರಗಳಿಂದ ಸ್ಪರ್ಧಿದ್ದರೆ ಒಂದು ಕಡೆಯಾದರೂ ಗೆಲುವು ಸಾಧಿಸಬಹುದಿತ್ತು ಎಂದು ಛೇಡಿಸಿದರು.
ಚೇಳೂರು ತಾಲೂಕಿಗೆ ನ್ಯಾಯ: ತಾಲೂಕು ಕೇಂದ್ರಕ್ಕೆ ಬರಲು 50ಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸಬೇಕಾದ ಅನಿವಾರ್ಯತೆ ಇದ್ದ ಚೇಳೂರಿನಲ್ಲಿ ಮಂಗಳವಾರ ತಾಲೂಕು ಕಚೇರಿ ಉದ್ಘಾಟಿಸುವ ಮೂಲಕ ಆ ಭಾಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಜೊತೆಗೆ ಈ ತಾಲೂಕು ಕೇಂದ್ರಕ್ಕೆ ತಹಸೀಲ್ದಾರ್, ಶಿರಸ್ತೇದಾರ್ ಸೇರಿದಂತೆ ಎಲ್ಲ ಹುದ್ದೆಗಳನ್ನು ಸೃಷ್ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತುಂಬುವ ಕೆಲಸ ಮಾಡಲಾಗಿದೆ. ಈ ಹಿಂದೆ ಎಲ್ಲ ಸರ್ಕಾರಗಳೂ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದವು ಹೊರತು ಈವರೆಗೂ ಯಾವುದೇ ರೀತಿಯ ಅನುಷ್ಠಾನವಾಗಿರಲಿಲ್ಲ. ಈಗ ಆ ತಾಲೂಕುಗೆ ನ್ಯಾಯ ಒದಗಿಸಲಾಗಿದೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ಇಲ್ಲ: ಸಿ.ಪಿ.ಯೋಗೇಶ್ವರ್
ಚೇಳೂರು ಕಾರ್ಯಕ್ರಮದ ಬಳಿಕ ಚಿಕ್ಕಬಳ್ಳಾಪುರ ಹೊರವಲಯದಲ್ಲಿ ನಿರ್ಮಾಣವಾಗಿರುವ ಸಂಚಾರಿ ಪೊಲೀಸ್ ಠಾಣೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಕಳೆದ ವರ್ಷವಷ್ಟೇ ಶಂಕುಸ್ಥಾಪನೆಯಾಗಿದ್ದ ಸಂಚಾರಿ ಪೊಲೀಸ್ ಠಾಣೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಗುತ್ತಿಗೆದಾರರನ್ನು ವಿಶ್ವಾಸಕ್ಕೆ ಪಡೆದು ಒಂದೇ ವರ್ಷದಲ್ಲಿ ಕಟ್ಟಡ ಸಿದ್ಧವಾಗಲು ಕಾರಣರಾಗಿದ್ದಾರೆ. ಈವರೆಗೂ ಸಂಚಾರಿ ಠಾಣೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಇರಲಿಲ್ಲ. ಈಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಎಂದರು.
ಯೋಗೇಶ್ವರ್‌ಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು ಹತಾಶರಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ
ಪೆರೇಸಂದ್ರ ಠಾಣೆ ಶೀಘ್ರದಲ್ಲೇ ಉದ್ಘಾಟನೆ: ಅದೇ ರೀತಿಯಲ್ಲಿ ಪೆರೇಸಂದ್ರ ಗ್ರಾಮದಲ್ಲಿಯೂ ಪೊಲೀಸ್ ಠಾಣೆ ಸಿದ್ಧವಾಗಿದೆ ಅದನ್ನೂ ಇಷ್ಟರಲ್ಲಿಯೇ ಉದ್ಘಾಟಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಾಮದೇವರ ಗುಡಿ ಬಳಿ ಹೈಟೆಕ್ ಹಳ್ಳಿ ಸಂತೆ ಉದ್ಘಾಟನೆ ಮಾಡಲಾಗುವುದು. ಜೊತೆಗೆ 4 ಸಾವಿರ ಫಲಾನುಭವಿಗಳಿಗೆ ಉಚಿತ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಮತ್ತು ಕಣಜೇನಹಳ್ಳಿಯಲ್ಲಿ ನೂತನವಾಗಿ 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆಯೂ ನೆರವೇರಲಿದೆ ಎಂದು ಹೇಳಿದರು.