ಯೋಗೇಶ್ವರ್‌ಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು ಹತಾಶರಾಗಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

ಮಾಜಿ ಶಾಸಕರಿಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು, ಅದರಿಂದ ಅವರು ಹತಾಶರಾಗಿದ್ದಾರೆ. ಇತ್ತೀಚೆಗೆ ಅವರು ಮಾತನಾಡಿದ ಆಡಿಯೋ ವೈರಲ್‌ ಆಗಿದ್ದು, ಅದರಲ್ಲಿನ ಅವರ ಮಾತುಗಳನ್ನು ಕೇಳಿಸಿಕೊಂಡರೆ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಯೋಗೇಶ್ವರ್‌ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು. 

JDS Leader Nikhil Kumaraswamy Outraged Against BJP MLC CP Yogeshwar gvd

ಚನ್ನಪಟ್ಟಣ (ಮಾ.29): ಮಾಜಿ ಶಾಸಕರಿಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು, ಅದರಿಂದ ಅವರು ಹತಾಶರಾಗಿದ್ದಾರೆ. ಇತ್ತೀಚೆಗೆ ಅವರು ಮಾತನಾಡಿದ ಆಡಿಯೋ ವೈರಲ್‌ ಆಗಿದ್ದು, ಅದರಲ್ಲಿನ ಅವರ ಮಾತುಗಳನ್ನು ಕೇಳಿಸಿಕೊಂಡರೆ ಅವರು ಎಷ್ಟು ಹತಾಶರಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ವಿರುದ್ಧ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು. ತಾಲೂಕಿನ ಎಚ್‌.ಮೊಗೇನಹಳ್ಳಿಯಲ್ಲಿ ನಡೆದ ಬೇವೂರು ಜಿಪಂ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಮಾಜಿ ಶಾಸಕರಿಗೆ ಈಗ ಕ್ಷೇತ್ರದ ಬಗ್ಗೆ ಅಕ್ಕರೆ ಉಕ್ಕಿದೆ. 

ಸ್ವಾಭಿಮಾನದ ಹೆಸರಿನಲ್ಲಿ ಅವರು ನಡಿಗೆ ನಡೆಸುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಅವರಿಗೆ ಕ್ಷೇತ್ರದ ಜನರ ನೆನಪಾಗಲಿಲ್ಲವೇ. ಆಗ ಅವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ರೈತಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿಯವರ ಸರ್ಕಾರವನ್ನು ತೆಗೆಯುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಮಾಜಿ ಶಾಸಕರು ಶಪಥ ಮಾಡಿದ್ದರು. ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯವರ ಜತೆ ಸೇರಿಕೊಂಡು ರೈತ ಪರ ಆಡಳಿತ ನೀಡುತ್ತಿದ್ದ ಸರ್ಕಾರವನ್ನು ತೆಗೆದರು. ಸ್ವಾಭಿಮಾನಿ ಯಾತ್ರೆ ಸೇರಿದಂತೆ ಏನೇ ಮಾಡಿದರೂ ಈ ಬಾರಿ ಕುಮಾರಸ್ವಾಮಿಯವರನ್ನು ಸೋಲಿಸಲು ಆಗುವುದಿಲ್ಲ ಎಂದು ಸವಾಲು ಹಾಕಿದರು.

ತಮ್ಮ ಅವಧಿಯಲ್ಲಿ ಕೆಲಸ ಮಾಡಿದ್ದರೆ ಏಕೆ ಆತಂಕ ಪಡಬೇಕಿತ್ತು: ಯೋಗೇಶ್ವರ್‌ ವಿರುದ್ಧ ನಿಖಿಲ್‌ ವಾಗ್ದಾಳಿ

ಕ್ಷೇತ್ರ ಬಿಟ್ಟು ಹೋಗುವುದಿಲ್ಲ: ಕುಮಾರಸ್ವಾಮಿ ಮಂಡ್ಯದಿಂದ ಸ್ಪ​ರ್‍ಧಿಸುತ್ತಾರೆ. ಬೇರೆ ಕಡೆಯಿಂದ ಸ್ಪ​ರ್ಧಿಸುತ್ತಾರೆ ಎಂಬ ವದಂತಿಗಳು ಎಲ್ಲೆಡೆ ಹರಿಡಾಡುತ್ತಿವೆ. ರಾಮನಗರ ಜಿಲ್ಲೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದೆ. ಇಲ್ಲಿನ ಜನ ನಮ್ಮ ಕುಟುಂಬದ ಮೇಲೆ ವಿಶೇಷ ಪ್ರೀತಿ ತೋರಿದ್ದಾರೆ. ಏನೇ ಆದರೂ ಕುಮಾರಸ್ವಾಮಿ ಕೊನೆಯುಸಿರು ಇರುವವರೆಗೆ ಜಿಲ್ಲೆಯನ್ನು ತೊರೆಯುವುದಿಲ್ಲ. ಅಂತೆಯೇ ಯಾವುದೇ ಕಾರಣಕ್ಕೂ ಕ್ಷೇತ್ರ ತೊರೆದು ಈ ಬಾರಿ ಅವರು ಬೇರೆ ಕಡೆ ಸ್ಪ​ರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು ಮಾತನಾಡಿ, ಮಾಜಿ ಶಾಸಕರಿಗೆ ಕ್ಷೇತ್ರದ ಬಗ್ಗೆ ಕಾಳಜಿ ಇದ್ದಿದ್ದರೆ ಕಳೆದ ಬಾರಿ ಜನ ಅವರನ್ನು ಏಕೆ ಸೋಲಿಸುತ್ತಿದ್ದರು. ಇದೀಗ ಅವರಿಗೆ ಸ್ವಾಭಿಮಾನ ಮೂಡಿದೆ. ಮನೆಗಳಿಗೆ ತೆರಳಿ ಕಾಫಿ ಕುಡಿದು ಬಲವಂತವಾಗಿ ಬಿಜೆಪಿ ಶಾಲು ಹೊದಿಸಿ ಪಕ್ಷ ಸೇರ್ಪಡೆಯಾದರೂ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ತಮ್ಮ ಪಕ್ಷ ಅಧಿ​ಕಾರದಲ್ಲಿ ಇದೆ ಎಂದು ಅವರು ತಾಲೂಕಿಗೆ ಮಂಜೂರಾಗಿದ್ದ ಅನುದಾನಗಳನ್ನು ತಡೆದು ಆಟ ಆಡುತ್ತಿದ್ದಾರೆ ಅವರ ಆಟ ಎಷ್ಟುದಿನ ಎಂದು ನೋಡುತ್ತೇವೆ ಎಂದು ಟಾಂಗ್‌ ನೀಡಿದರು.

ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಗೊಂಡ ಪ್ರಸನ್ನ ಪಿ.ಗೌಡ ಮಾತನಾಡಿ, ಕಾಂಗ್ರೆಸ್‌ನಲ್ಲಿ ಒಳ ಜಗಳ ಬಿಟ್ಟರೆ ಬೇರೆ ಏನು ಇಲ್ಲ. ಪಕ್ಷವನ್ನು ಅ​ಧಿಕಾರಕ್ಕೆ ತಂದು ರೈತಪರ ಕಾಳಜಿ ತೊರಬೇಕೆಂಬ ನಿಲುವಿಲ್ಲ. ಕುಮಾರಸ್ವಾಮಿಯವರು ರೈತ ಪರ ಕಾಳಜಿ ಮೆಚ್ಚಿ ಅವರನ್ನು ಮತ್ತೆ ಸಿಎಂ ಮಾಡಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್‌ ಸೇರಿದ್ದೇನೆ. ಎಲ್ಲರೂ ಸೇರಿ ಅವರನ್ನು ಮತ್ತೊಮ್ಮೆ ಸಿಎಂ ಮಾಡೋಣ ಎಂದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ಉಪಯೋಗವಿಲ್ಲ: ನಿಖಿಲ್‌ ಕುಮಾರಸ್ವಾಮಿ

ಇದಕ್ಕೂ ಮೊದಲ ತಾಲೂಕಿನ ತಿಟ್ಟಮಾರನಹಳ್ಳಿಯಿಂದ ಬೈಕ್‌ ರಾರ‍ಯಲಿ ಮೂಲಕ ನಿಖಿಲ್‌ ಕುಮಾರಸ್ವಾಮಿ ಅವರನ್ನು ಎಚ್‌. ಮೊಗೇನಹಳ್ಳಿಗೆ ಕರೆತರಲಾಯಿತು. ಗ್ರಾಮಗಳ ಬಳಿ ನೆರೆದಿದ್ದ ಜೆಡಿಎಸ್‌ ಕಾರ್ಯಕರ್ತರು ಬೃಹತ್‌ ಅನಾನಸ್‌ ಮತ್ತಿತರ ಹಾರಗಳನ್ನು ಹಾಕಿ, ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ನಿಖಿಲ್‌ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಸಿ. ಅಶ್ವತ್ಥ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್‌ ದೇವರಾಜು, ಮುಖಂಡರಾದ ಎಂ.ಸಿ.ಕರಿಯಪ್ಪ, ಅಜಯ್‌ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios