ಸಿಎಂ ಆಗಿ ನಾನೇ 5 ವರ್ಷ ಮುಂದುವೆಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಮಗೆ ಯಾರಿಗೂ ಗೊತ್ತಿಲ್ಲ, ದೆಹಲಿಯಲ್ಲಿ ಸರ್ಕಾರ ರಚನೆಯಾದಾಗ ಏನು ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. 

ಬೆಂಗಳೂರು (ನ.03): ಸಿಎಂ ಆಗಿ ನಾನೇ 5 ವರ್ಷ ಮುಂದುವೆಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಮಗೆ ಯಾರಿಗೂ ಗೊತ್ತಿಲ್ಲ, ದೆಹಲಿಯಲ್ಲಿ ಸರ್ಕಾರ ರಚನೆಯಾದಾಗ ಏನು ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ, ಅವರಿಗೆ ಮಾತ್ರ ಎಲ್ಲಾ ಗೊತ್ತಿರೋದು ಎಂದು ತಿಳಿಸಿದರು. ಆ ವಿಚಾರದಲ್ಲಿ ನಾವು ಹೇಳಿಕೆ ಕೊಡೋದು ಸರಿ ಕಾಣುವುದಿಲ್ಲ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳು ಬಂದು ಹೋಗಿದ್ದಾರೆ ಬಹುಶಃ ಅವರಿಗೆ ಗೊತ್ತಿರುತ್ತೆ ಎಂದರು. 

ಯಾವುದು ಸತ್ಯ ಯಾವುದು ಅಸತ್ಯ ಅಂತಾ ನಾನು ಜಡ್ಜ್ ಮಾಡೋಕ್ಕೆ ಆಗುತ್ತಾ, ಅವರು ಹೇಳಿದ್ದಾರೆ ಏನೋ ಅರ್ಥ ಇರಬೇಕು. ನಾನು ವೈಯಕ್ತಿಕವಾಗಿ ಜಡ್ಜ್‌ಮೆಂಟ್ ಮಾಡೋಕೆ ಆಗಲ್ಲ. ಸಿಎಂ ಹೇಳಿಕೆ ರಾಜಕೀಯಕ್ಕೆ ಬಣಕ್ಕೆ ಕಾರಣವಾಗುತ್ತಾ ಎಂಬ ವಿಚಾರವಾಗಿ ಏನು ಆಗಲ್ಲ ಅದರ ಬಗ್ಗೆ ಹೆಚ್ಚು ಚರ್ಚೆ ಮಾಡೋದು ಬೇಡ ಅನ್ನೋದು ನನ್ನ ಅನಿಸಿಕೆ. ನಾನಂತೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡೋದಕ್ಕೆ ಹೋಗಲ್ಲ ಎಂದರು. ಡಿಕೆಶಿ ಒಂದೂವರೆ ವರ್ಷದ ಬಳಿಕ‌ ಸಿಎಂ ಆಗಬೇಕು ಎಂಬ ಶಾಸಕ ಇಕ್ಬಾಲ್‌ ಹುಸೇನ್ ಹೇಳಿಕೆ ವಿಚಾರವಾಗಿ ಅದೇ ನಾನು ಹೇಳ್ತಾ ಇರೋದು. ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನಾನು ಕೊಡೋದಕ್ಕೆ ಹೋಗಲ್ಲ ಎಂದು ಪರಮೇಶ್ವರ್ ತಿಳಿಸಿದರು. 

ನಾವಲ್ಲ, ಬಿಜೆಪಿಗರೇ ಕಿತ್ತಾಡ್ತಿದ್ದಾರೆ: ಯಡಿಯೂರಪ್ಪಗೆ ಡಿಕೆಶಿ ತಿರುಗೇಟು

ಕನಿಷ್ಠ ಶೇ.70ರಷ್ಟು ಪೊಲೀಸರಿಗೆ ಕ್ವಾರ್ಟ್ರಸ್‌ ಗುರಿ: ‘ಪೊಲೀಸ್ ಗೃಹ’ ಯೋಜನೆಯಡಿ ರಾಜ್ಯದ ಶೇ.40ರಷ್ಟು ಪೊಲೀಸರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಶೇ.70ರಷ್ಟು ಪೊಲೀಸರಿಗೆ ಕ್ವಾರ್ಟ್ರಸ್‌ಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಮಂಗಳೂರು ಹೊರವಲಯದ ಬಜ್ಪೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಎಆರ್‌ನ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

2015ರಲ್ಲಿ ನಾನು ಗೃಹ ಸಚಿವನಾಗಿದ್ದಾಗ ಪೊಲೀಸರಿಗೆ ಗೃಹ ಭಾಗ್ಯದ ಯೋಜನೆ ಆರಂಭಿಸಲಾಗಿತ್ತು. ಇದೀಗ ಶೇ. 40ರಷ್ಟು ಸಿಬ್ಬಂದಿಗೆ ಹೊಸ ಕ್ವಾರ್ಟ್ರಸ್‌ ಕಟ್ಟಿ ಕೊಟ್ಟಿದೇವೆ. 2 ಬೆಡ್‌ರೂಂಗಳ ಅಪಾರ್ಟ್‌ಮೆಂಟ್‌ ಮಾದರಿಯ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಸರ್ಕಾರದ ಅವಧಿ ಪೂರ್ಣಗೊಳ್ಳುವುದರೊಳಗೆ ಕನಿಷ್ಠ ಶೇ. 70 ಸಿಬ್ಬಂದಿಗೆ ವಸತಿ ಗೃಹಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಎಚ್ಚರ.. ಅನುಮತಿ ಇಲ್ಲದೆ ರಸ್ತೆ ಅಗೆದರೆ ದಂಡ: BBMP ಖಡಕ್ ಸೂಚನೆ

ಠಾಣೆ ಆಧುನೀಕರಣ: ರಾಜ್ಯದ ಅನೇಕ ಪೊಲೀಸ್ ಠಾಣೆಗಳನ್ನು 50 ವರ್ಷಗಳಿಗಿಂತಲೂ ಹಿಂದೆ ನಿರ್ಮಿಸಲಾಗಿದೆ. ಪೊಲೀಸರು ಇಂಥ ಮೂಲಸೌಕರ್ಯ ವಂಚಿತ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂಬ ಉದ್ದೇಶದಿಂದ ರಾಜ್ಯದ ಪೊಲೀಸ್‌ ಠಾಣೆಗಳಿಗೆ ಹೊಸ ಕಟ್ಟಡ ಕಟ್ಟಿಕೊಟ್ಟು ಆಧುನೀಕರಣಗೊಳಿಸಲಾಗುತ್ತಿದೆ ಎಂದು ಪರಮೇಶ್ವರ್‌ ತಿಳಿಸಿದರು. ಪ್ರಸ್ತುತ ರಾಜ್ಯ ತೀವ್ರ ಬರಗಾಲದಿಂದ ತತ್ತರಿಸುತ್ತಿದೆ. 200ಕ್ಕೂ ಅಧಿಕ ತಾಲೂಕುಗಳು ಬರಪೀಡಿತವಾಗಿ ಸುಮಾರು 37 ಸಾವಿರ ಕೋಟಿ ರುಪಾಯಿ ನಷ್ಟ ಅಂದಾಜಿಸಲಾಗಿದ್ದು, ಅದರಲ್ಲಿ 17 ಸಾವಿರ ರು.ಗಳನ್ನು ಕೇಂದ್ರ ಸರ್ಕಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಎಷ್ಟು ನಷ್ಟ ಪರಿಹಾರ ನೀಡುತ್ತಾರೋ ನೋಡಬೇಕು ಎಂದರು.