Asianet Suvarna News Asianet Suvarna News

Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್‌: ಸಚಿವ ಅಶ್ವತ್ಥ್‌

ಹೊಡೆದಾಟ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ, ಅದೇನಿದ್ದರೂ ಮಾಜಿ ಶಾಸಕ ಬಾಲಕೃಷ್ಣರ ಸಂಸ್ಕೃತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವ​ತ್ಥ ನಾರಾ​ಯಣ ಏಕ ವಚ​ನ​ದಲ್ಲಿ ವಾಗ್ದಾ​ಳಿ ನಡೆ​ಸಿ​ದರು. 

Minister Dr CN Ashwath Narayan Slams To Balakrishna At Ramanagara District gvd
Author
First Published Nov 7, 2022, 8:15 PM IST

ಮಾಗಡಿ (ನ.07): ಹೊಡೆದಾಟ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ, ಅದೇನಿದ್ದರೂ ಮಾಜಿ ಶಾಸಕ ಬಾಲಕೃಷ್ಣರ ಸಂಸ್ಕೃತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವ​ತ್ಥ ನಾರಾ​ಯಣ ಏಕ ವಚ​ನ​ದಲ್ಲಿ ವಾಗ್ದಾ​ಳಿ ನಡೆ​ಸಿ​ದರು. ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೈಕ್‌ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಗಲಾಟೆ ಮಾಡಿಸುವುದರಲ್ಲಿ ಬಾಲಕೃಷ್ಣ ಸ್ಪೆಷಲಿಸ್ವ್‌ ಆಗಿದ್ದಾರೆ ಎಂದು ಹರಿ​ಹಾ​ಯ್ದ​ರು.

ಇತ್ತೀ​ಚೆ​ಗಷ್ಟೇ ತಾಲೂಕಿನ ಕಾಮಸಾಗರದಲ್ಲಿ ಹಾಲು ಉತ್ಪಾದಕರ ಡೈರಿ ವಿಚಾರವಾಗಿ ಡಾ. ಅಶ್ವತ್ಥ ನಾರಾಯಣರವರ ಸಂಬಂಧಿ ಶ್ರೀಧರ್‌ ರವರ ಮೇಲೆ ಮಾಜಿ ಶಾಸಕ ಆರೋಪಕ್ಕೆ ತೀಕ್ಷ್ಣವಾಗಿ ಉತ್ತರಿಸಿ ಕಾನೂನನ್ನು ಪಾಲನೆ ಮಾಡುವುದು. ಕಾನೂನನ್ನು ಗೌರವಿಸುವುದು ನಮ್ಮ ಕೆಲಸ ಹೊಡೆದಾಟ ಮಾಡುವುದು ಬಾಲಕೃಷ್ಣರವರಿಗೆ ಮಾತ್ರ ಎಂದು ಹೇಳಿದರು.

Ramanagara: ಬಿಜೆಪಿಯೇ ವಸೂಲಿ ಪಕ್ಷ: ಸಂಸದ ಸುರೇಶ್‌ ವಾಗ್ದಾಳಿ

ವಿಶ್ವದ ಅತಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿರವರು ಲೋಕಾ​ರ್ಪಣೆ ಮಾಡು​ತ್ತಿ​ರು​ವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಅಂತರಾಷ್ಟ್ರೀಯ ಮಟ್ಟದಲ್ಲಿ ಭರವಸೆ, ಅವಕಾಶ, ಸಮೃದ್ಧಿಯ, ನಾಡು ಎಂದರೆ ಅದು ಬೆಂಗಳೂರು ಎಂಬ ಸಂದೇಶದೊಂದಿಗೆ ಪ್ರತಿಮೆ ಲೋಕಾರ್ಪಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಡೆಯಿಂದಲೂ ಮೃತ್ತಿಕೆ ಸಂಗ್ರಹಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾ​ಗಿದೆ. ಅಭೂತ ಪೂರ್ವವಾಗಿ ಎಲ್ಲೆಡೆಯೂ ಸ್ವಾಗತ ಸಿಗುತ್ತಿದೆ. ನ.7 ವರೆಗೂ ಮೃತ್ತಿಕೆ ಸಂಗ್ರಹಣೆ ಮಾಡಿ ಅದನ್ನು ಒಂದು ಕಡೆ ಸಂಗ್ರಹಿಸಲಾ​ಗು​ವುದು ಎಂದು ತಿಳಿ​ಸಿ​ದರು.

ಮೃತ ಕಲಾವಿದನ ಕುಟುಂಬಕ್ಕೆ ನೆರವು: ಮೃತ್ತಿಕೆ ಸಂಗ್ರಹಣೆ ವೇಳೆ ರಥದ ವಾಹನದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಕಲಾವಿದ ಶ್ರೀನಿ​ವಾಸ್‌ ರವರ ಕುಟುಂಬಕ್ಕೆ ಸರ್ಕಾರ ನೆರವಾಗಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ನಾನು ಮತ್ತು ಬಿಜೆಪಿ ಮುಖಂಡ ಪ್ರಸಾದ್‌ ಗೌಡ​ರ​ವರು ವೈಯಕ್ತಿಕವಾಗಿ 10 ಲಕ್ಷ ರು. ನೀಡು​ತ್ತೇವೆ. ಜತೆಗೆ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಕೆಂಪೇಗೌಡ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಈಗಾಗಲೇ ಮಾತುಕತೆ ಮಾಡಲಾ​ಗಿದೆ. ಆ ಕುಟುಂಬಕ್ಕೆ ಜಿಟಿಡಿಸಿಯಲ್ಲಿ ಕೆಲಸ ಕೊಡಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಹೇಳಿ​ದರು.

ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ

ಕೆಂಪಾಪುರದ ಅಭಿವೃದ್ಧಿ: ಕೆಂಪೇಗೌಡರು ಐಕ್ಯವಾಗಿರುವ ಕೆಂಪಾಪುರ ಸ್ಥಳವನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿನ ಗ್ರಾಮಸ್ಥರಿಗೆ ಬದಲಿ ನಿವೇಶನ ಕೊಡಿಸಿ ಪಾರಂಪರಿಕ ಸ್ಥಳವನ್ನಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ಅಶ್ವತ್ಥ ನಾರಾ​ಯಣ ತಿಳಿ​ಸಿ​ದರು. ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವರಿ ಸಚಿವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಗಡಿ ಪಟ್ಟಣದ ಕಲ್ಯಾಗೇಟ್‌ ನಿಂದ ತಾಲೂಕಿನ ಕೆಂಪಾಪುರದ ಕೆಂಪೇಗೌಡರ ಐಕ್ಯವಾದ ಸ್ಥಳದವರೆಗೂ ಜಾಥಾ ನಡೆಸಲಾಯಿತು. ಇದೇ ವೇಳೆ ಬಿಜೆಪಿ ಯುವ ಮುಖಂಡ ಪ್ರಸಾದ್‌ ಗೌಡ, ಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕ ಎಚ್‌.ಎಂ. ಕೃಷ್ಣಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ, ದೊಡ್ಡಿರಾಜೇಶ್‌, ಭಾಸ್ಕರ್‌, ಶಂಕರ್‌ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.

Follow Us:
Download App:
  • android
  • ios