Ramanagara: ಬಿಜೆಪಿಯೇ ವಸೂಲಿ ಪಕ್ಷ: ಸಂಸದ ಸುರೇಶ್ ವಾಗ್ದಾಳಿ
ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದು ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಆ ಪಕ್ಷದ ನಾಯಕರಿಂದ ಕಾಂಗ್ರೆಸ್ಸಿಗರು ಪಾಠ ಕಲಿಯಬೇಕಾಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ರಾಮನಗರ (ನ.05): ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆದು ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಆ ಪಕ್ಷದ ನಾಯಕರಿಂದ ಕಾಂಗ್ರೆಸ್ಸಿಗರು ಪಾಠ ಕಲಿಯಬೇಕಾಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ತಾಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ(ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆತ್ತಂಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೇ ವಸೂಲಿ ಪಕ್ಷ. ಆ ಪಕ್ಷದ ನಾಯಕರು ಕಾಂಗ್ರೆಸ್ ದಿವಾಳಿತನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಯಾರಾರಯರು ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬದ್ಧರಾಗುವ ಹಾಗೂ ಪಕ್ಷಕ್ಕೆ ಶಕ್ತಿ ತುಂಬಬಲ್ಲ ಯಾರೇ ನಾಯಕರು, ಕಾರ್ಯಕರ್ತರು ಆಗಿರಲಿ ಬರಲೆಂದು ಆಹ್ವಾನ ನೀಡಿದ್ದೇವೆ.
ಆ ನಿಟ್ಟಿನಲ್ಲಿ ಯಾರ್ಯಾರು ಇದ್ದಾರೆ ಅವರನ್ನು ಪಕ್ಷ ಸ್ವಾಗತಿಸುತ್ತದೆ. ಪಕ್ಷಕ್ಕೆ ಅರ್ಜಿ ಹಾಕಿ ಎಂದಷ್ಟೇ ಹೇಳಿದ್ದೇವೆ. ಆನಂತರ ರೆಹಮಾನ್ ಖಾನ್ ಅಧ್ಯಕ್ಷತೆಯಲ್ಲಿರುವ ಸಮಿತಿ ಯಾರಾರಯರು ಸೂಕ್ತ ಎಂಬುದನ್ನು ಆಯ್ಕೆ ಮಾಡಲಿದೆ. ಆ ಸಮಿತಿಯಲ್ಲಿ ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಅನೇಕರ ನಾಯಕರು ಇರುತ್ತಾರೆ. ಪಕ್ಷ ಸಂಘಟನೆ ಉದ್ದೇಶವೇ ಹೊರತು ನಾಯಕರ ಪ್ರತಿಷ್ಠೆ ಪ್ರಶ್ನೆ ಇಲ್ಲ. ಪಕ್ಷ ಬೆಳೆಯಬೇಕು, ಬಿಜೆಪಿಯ ದುರಾಡಳಿತ ತೊಲಗಿಸಲು ಎಲ್ಲರು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕನಕಪುರ: ಜೀ ನೆಟ್ ವರ್ಕ್‌ಗೆ ಕನ್ನಹಾಕಿದ ನಾಲ್ವರ ವಿರುದ್ಧ ಕೇಸ್..!
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಕ್ಷ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಖರ್ಗೆರವರ ನಿರಂತರ ಹೋರಾಟದ ಪರಿಶ್ರಮ ಅವರಿಗೆ ಶಕ್ತಿ ನೀಡಿದೆ. ಖರ್ಗೆರವರು ಅಧ್ಯಕ್ಷರಾಗಿರುವುದು ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಅಧಿಕಾರಕ್ಕೆ ಬರಲು ಅನುಕೂಲವಾಗಲಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಎದುರಿಸಲು ಪಕ್ಷ ಸದೃಢವಾಗಿದೆ. ಎಲ್ಲ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇವೆ ಎಂದು ಸುರೇಶ್ ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಗ್ರಾಪಂ ಅಧ್ಯಕ್ಷೆ ಸುಮತಿ ನಾಗರಾಜು, ಉಪಾದ್ಯಕ್ಷ ರೇವಣ ಸಿದ್ದಯ್ಯ, ಸದಸ್ಯರಾದ ಹೊಂಬೇಗೌಡ, ಲಕ್ಷ್ಮಣ್, ಉದಯ್ ಕುಮಾರ್, ಕೃಷ್ಣ, ನಾಗರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ, ಎಸ್ಸಿ ಎಸ್ಟಿ ವಿಭಾಗ ಅಧ್ಯಕ್ಷ ನರಸಿಂಹಯ್ಯ ಮತ್ತಿತರರು ಹಾಜರಿದ್ದರು.
ನಮಗೂ ಪ್ರತ್ಯುತ್ತರ ಕೊಡಲು ಬರುತ್ತದೆ: ಮಾಜಿ ಶಾಸಕ ಬಾಲಕೃಷ್ಣರವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸುವುದನ್ನು ಬಿಟ್ಟು ಶಾಸಕರು ಶಿಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೂ ಪ್ರತ್ಯುತ್ತರ ಕೊಡಲು ಬರುತ್ತದೆ ಎಂಬುದನ್ನು ಮರೆಯಬಾರದು ಎಂದು ಶಾಸಕ ಎ.ಮಂಜುನಾಥ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಮೊದಲು ಶಿಷ್ಟಾಚಾರ ಅಂದರೇನು ಎಂಬುದನ್ನು ತಿಳಿದುಕೊಂಡು ಹೇಳಲಿ, ಆನಂತರ ನಾನು ಮಾತನಾಡುತ್ತೇವೆ.
ಕಲ್ಲು ತೂರಾಟ ಮಾಡಿದ್ದು ಎಷ್ಟು ಸರಿ ತಪ್ಪು ಎನ್ನುವುದನ್ನು ರಾಜಕಾರಣದಲ್ಲಿರುವ ಆ ಪಕ್ಷದ ನಾಯಕರು ಯೋಚನೆ ಮಾಡಬೇಕು. ನಮಗೂ ಪ್ರತ್ಯುತ್ತರ ಕೊಡಲು ಬರುತ್ತದೆ. ಅದರ ಅವಶ್ಯಕತೆ ಇದೆ ಅನ್ನಿಸುತ್ತಿಲ್ಲ ಎಂದರು. ಮಾಜಿ ಶಾಸಕ ಬಾಲಕೃಷ್ಣರವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದು ರಾಜಕೀಯವಾದ ಕುಚ್ಯೇದ್ಯತನ. ಕೆಲವರು ಬಾಲಕೃಷ್ಣರವರ ಏಳಿಗೆ ಸಹಿಸದ ಕಿಡಿಗೇಡಿಗಳು ಇಂತಗ ಕುಚೇದ್ಯದ ಕೆಲಸ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಸರಿಯಲ್ಲ ಎಂದು ಹೇಳಿದರು.
Ramanagara: ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅನುಷ್ಠಾನ ಮಾಡಲು ರಾಮನಗರ ಜಿಲ್ಲೆಯಲ್ಲಿ ಅನೇಕ ಗ್ರಾಮಗಳನ್ನು ನೀತಿ ಆಯೋಗ ಆಯ್ಕೆ ಮಾಡಿದೆ. ಅದರಂತೆ ಬೆತ್ತಂಗೆರೆ ಗ್ರಾಮವೂ ಸೇರಿದೆ. ಕೇಂದ್ರ ಸರ್ಕಾರ 40 ಲಕ್ಷ ರುಪಾಯಿ ಅನುದಾನ ನೀಡಲಿದ್ದು, ಹೆಚ್ಚುವರಿಯಾಗಿ ನರೇಗಾ ಬಳಸಿಕೊಂಡು ಒಟ್ಟಾರೆ 80 ಲಕ್ಷ ರುಪಾಯಿ ವೆಚ್ಚದ ಕಾಮಗಾರಿ ಅನುಷ್ಠಾನ ಮಾಡುತ್ತೇವೆ.
-ಡಿ.ಕೆ.ಸುರೇಶ್, ಸಂಸದರು