Ramanagara: ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ
ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವಂತೆ ಮಾಗಡಿಯಲ್ಲಿ ಚುನಾವಣಾ ಕಾವು ರಂಗೇರಿದ್ದು, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ
ರಾಮನಗರ (ನ.02): ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವಂತೆ ಮಾಗಡಿಯಲ್ಲಿ ಚುನಾವಣಾ ಕಾವು ರಂಗೇರಿದ್ದು, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವಿಚಾರದಲ್ಲಿ ಜೆಡಿಎಸ್‌ಗೆ ಬಿಜೆಪಿ ಸಹ ಸಾಥ್ ನೀಡಿದೆ. ಗಲಾಟೆಯಲ್ಲಿ ಮಾಜಿ ಶಾಸಕನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಕಾರ್ಯಕರ್ತರು, ಒಬ್ಬರ ಮೇಲೆ ಒಬ್ಬರ ಕಲ್ಲು ತೂರಾಟ ಬೆಚ್ಚಿ ಬಿದ್ದು ಓಡಿ ಹೋಗುತ್ತಿರುವ ಪೋಲಿಸರು ಅಂದಹಾಗೆ ಇಂತಹ ದೃಶ್ಯ ಕಂಡು ಬಂದಿದ್ದು, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕಾಮಸಾಗರ ಗ್ರಾಮದಲ್ಲಿ.
ಹೌದು! ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನಾ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾಡಿ ನಡೆದಿದೆ. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆಕ್ರೋಶಗೊಂಡಿರೋ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಬಾಲಕೃಷ್ಣ ಮೇಲೆ ಮುಗಿಬಿದ್ದಿದ್ದರು. ಅಂದಹಾಗೆ ಇವತ್ತು ಕಾಮಸಾಗರ ಗ್ತಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವಿದ್ದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅಧ್ಯಕ್ಷತೆ ವಹಿಸಿರೋ ಶಾಸಕ ಎ.ಮಂಜುನಾಥ್ ಹೆಸರನ್ನು ಕೊನೆಯಲ್ಲಿ ಹಾಕಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
Dharwad: ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಬಿಲ್ಡರ್‌ಗೆ 4 ಲಕ್ಷ ದಂಡ
ಅಲ್ಲದೇ ಶಾಸಕ ಎ.ಮಂಜುನಾಥ್ ಬರುವುದಕ್ಕಿಂತ ಮುಂಚೆಯೇ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ನೇತೃತ್ವದಲ್ಲಿ ಬೆಳಿಗ್ಗೆ 11 ಘಂಟೆಗೆ ಸುಮಾರಿಗೆ ಉದ್ಘಾಟನೆ ಮಾಡಲು ಮುಂದಾಗಿದ್ದರು. ಇದಕ್ಕೆ ಜೆಡಿಎಸ್ ನ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಕಲ್ಲು ತೂರಾಟ ಸಹ ನಡೆಯಿತು. ಅಲ್ಲದೇ ಮಾಜಿ ಶಾಸಕ ಬಾಲಕೃಷ್ಣ ಕಾರಿನ ಮೇಲೂ ಸಹ ಕಲ್ಲು ತೂರಾಟ ನಡೆಸಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಶಿಷ್ಟಾಚಾರವನ್ನೆಲ್ಲಾ ಪಾಲಿಸಲಾಗಿತ್ತು ಶಾಸಕರೇ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ರು ಈಗಾಗಿ ಕಾರ್ಯಕ್ರಮ ಉದ್ಘಾಟಿಸಬೇಕಾಗಿತ್ತು.
ಸಚಿವ ಅಶ್ವಥ್ ನಾರಾಯಣ ಸಹೋದರ ಶ್ರೀಧರ್ ಈ ರೀತಿ ಮಾಡಿಸಿದ್ದಾರೆ. ಕೆಲವೊಮ್ಮೆ ಅಶ್ವಥ್ ನಾರಾಯಣ ಬಂದವೇಳೆ ಬಿಜೆಪಿಯಲ್ಲಿ ಇರ್ತಾರೆ ಬೇರೆ ವೇಳೆ ಜೆಡಿಎಸ್‌ನಲ್ಲಿ ಇರ್ತಾರೆ. ಅಂದಹಾಗೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಂತೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆ ಕಾವು ರಂಗೇರಿದೆ ಪ್ರತಿ ವಿಚಾರದಲ್ಲೂ ಕೂಡ ಹಾಲಿ ಶಾಸಕ ಎ.ಮಂಜುನಾಥ್ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ನಡುವೆ ಜಿದ್ದಾ ಜಿದ್ದಿ ನಡೆಯುತ್ತಿದೆ. ಅದೇ ರೀತಿ ಇವತ್ತಿನ ಕಾರ್ಯಕ್ರಮ ಪ್ರತಿಷ್ಠೆಗೆ ಕಾರಣವಾಗಿತ್ತು. ಇನ್ನೂ ಗಲಾಟೆಯಿಂದಾಗಿ ಕಾಮಸಾಗರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ನಟೋರಿಯಸ್ ಪಾತಕಿಗಳ ಮೇಲೆ ಬೆಂಗಳೂರು ಸಿಸಿಬಿ ಹದ್ದಿನಕಣ್ಣು
ಇದೇ ವಿಚಾರವಾಗಿ ಮಾತನಾಡಿರೋ ಶಾಸಕ ಎ.ಮಂಜುನಾಥ್ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅಧ್ಯಕ್ಷತೆಯ ಹೆಸರನ್ನು ಕೆಳಗೆ ಹಾಕಿಸಿದ್ದಾರೆ. ಈ ವಿಚಾರ ಗಮನಕ್ಕೆ ಬಂದಂತಹ ಸಂದರ್ಭದಲ್ಲಿ ಮಾಜಿ ಶಾಸಕರು ಬುದ್ದಿ ಹೇಳುವ ಕೆಲಸ ಮಾಡಬೇಕಿತ್ತು. ಆ ಕೆಲಸ ಮಾಡಿಲ್ಲ ನಾನು ತಪ್ಪು ಮಾಡಿದ್ರೆ ಮಾಗಡಿ ಜನ ಕ್ಷಮಿಸುತ್ತಿದ್ದರು. ಆದ್ರೆ ನಾಲ್ಕು ಬಾರಿ ಶಾಸಕರಾಗಿದ್ದ ಬಾಲಕೃಷ್ಣ ಅವರು ಈ ಕೆಲಸ ಮಾಡಿದ್ದಾರೆ ಜನ ಕ್ಷಮಿಸೊಲ್ಲ ಎಂದು ಟಾಂಗ್ ನೀಡಿದ್ರು. ಒಟ್ಟಾರೆ ಹಾಲಿನ ಡೇರಿ ಕಟ್ಟಡ ಉದ್ಘಾಟನಾ ವಿಚಾರದಲ್ಲಿ ಕಾಮಸಾಗರ ಅಕ್ಷರಶಃ ಇಂದು ರಣಾಂಗಣವಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು ಪೋಲಿಸ್ ಸರ್ಪಗಾವಲು ಮುಂದುವರಿದಿದ್ದು ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕಿದೆ.