Asianet Suvarna News Asianet Suvarna News

ಸಿದ್ದ​ರಾ​ಮೋ​ತ್ಸ​ವ​ದಿಂದ ಬಿಜೆಪಿಗಲ್ಲ, ಕಾಂಗ್ರೆಸ್‌ಗೇ ನಡುಕ: ಸಚಿವ ಅಶ್ವತ್ಥ್‌

ಸಿದ್ದರಾಮೋತ್ಸವದಿಂದ ಬಿಜೆಪಿಯವರಿಗೇನು ಭಯ ಆಗಿಲ್ಲ. ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ನಡುಕ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವ​ರಿಗೆ ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ್‌ ನಾರಾ​ಯಣ ಟಾಂಗ್‌ ನೀಡಿ​ದರು. 

minister dr cn ashwath narayan slams on congress over siddaramotsava gvd
Author
Bangalore, First Published Aug 9, 2022, 5:05 AM IST

ರಾಮನಗರ (ಆ.09): ಸಿದ್ದರಾಮೋತ್ಸವದಿಂದ ಬಿಜೆಪಿಯವರಿಗೇನು ಭಯ ಆಗಿಲ್ಲ. ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ನಡುಕ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದ​ರಾ​ಮಯ್ಯ ಅವ​ರಿಗೆ ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ್‌ ನಾರಾ​ಯಣ ಟಾಂಗ್‌ ನೀಡಿ​ದರು. ಮಾಗಡಿ ತಾಲೂಕು ಸಂಕೀ​ಘ​ಟ್ಟ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನಡುಕ ಹುಟ್ಟಿರುವುದು ಯಾರಿಗೆ ಅಂದ​ರೆ ಅದು ಕಾಂಗ್ರೆಸ್‌ ನಾಯಕರಿಗೆ, ಅದ​ರಲ್ಲೂ ವಿಶೇಷವಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಎಂದು ಲೇವಡಿ ಮಾಡಿ​ದರು.

ಕಾಂಗ್ರೆಸ್‌ ನಲ್ಲಿರುವ ನಾಯಕರಿಗೆ ಸಿಎಂ ಕುರ್ಚಿ ಯಾರಿಗೆ ಅನ್ನುವ ನಡುಕ ಶುರುವಾಗಿದೆ. ಕಾಂಗ್ರೆಸ್‌ ಪಕ್ಷ ಅಂದ್ರೆ ಅದು ಸಿದ್ದರಾಮಯ್ಯ ಅನ್ನುವಂತೆ ಆಗಿದೆ. ಹಾಗಾಗಿ ಬೇರೆ ಜನಾಂಗದಲ್ಲಿರುವ ನಾಯಕರು ಆ ಪಕ್ಷದಲ್ಲಿ ಯಾಕೆ ಇರುತ್ತಾರೆ. ಕಾಂಗ್ರೆಸ್‌ ನಲ್ಲಿ ಭವಿಷ್ಯ ಇಲ್ಲ, ನಮಗೆ ಯಾಕಪ್ಪಾ ಈ ಪಕ್ಷ ಬರೀ ಸಿದ್ದರಾಮಯ್ಯ ಅನ್ನೋದಾದ್ರೆ ಅಂತ ಯೋಚಿಸುತ್ತಾರೆ ಎಂದ​ರು. ಸಿದ್ದರಾಮಯ್ಯಗೆ ಜೈಕಾರ ಹಾಕಿದ ಕ್ಷಣವೇ ಡಿ.ಕೆ. ಶಿವಕುಮಾರ್‌ ಜೈ ಆಗಿ ಹೋದರು. ಅವರೇ ಸಿದ್ದ​ರಾ​ಮಯ್ಯ ಅವ​ರಿಗೆ ಜೈ ಅಂದ ಮೇಲೆ ಇನ್ನೇ​ನು ಉಳಿ​ದಿದೆ. ಕಾಂಗ್ರೆಸ್‌ ಪಕ್ಷ​ವನ್ನು ಎಲ್ಲೊ ಒಂದು ಕಡೆ ಸಿದ್ದ​ರಾ​ಮಯ್ಯ ಅವ​ರಿಗೆ ಸೀಮಿತ ಮಾಡಿ​ಕೊಂಡಂತಾ​ಗಿದೆ.

ಅರ್ಹತೆ ಇದ್ದವರು ಸಿಎಂ ಆಗಲಿ: ಸಚಿವ ಅಶ್ವತ್ಥ್ ನಾರಾಯಣ್

ಪಾಪ ಸಿದ್ದರಾಮಯ್ಯ ಅವರಿಗೂ 75 ವರ್ಷ ವಯ​ಸ್ಸಾ​ಗಿದೆ. ಹಾಗಾಗಿ ಅವರೂ ಸಹ ಸಿಎಂ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯಾಗಿಲ್ಲ. ಆದರೂ ಸಹ ಕಾಂಗ್ರೆಸ್‌ ನವ​ರಿಗೆ ಸಿದ್ದ​ರಾ​ಮಯ್ಯ ಅವರೇ ಗತಿ​ಯಾ​ಗಿ​ದ್ದಾರೆ. ಕಾಂಗ್ರೆಸ್‌ ಪಕ್ಷದ ಸ್ಥಿತಿ ಏನೂ ಅನ್ನೋದನ್ನು ಸಿದ್ದರಾಮೋತ್ಸವದಲ್ಲಿ ತೋರಿಸಿಕೊಂಡಿದ್ದಾರೆ. ಆ ಪಕ್ಷಕ್ಕೆ ಯಾವುದೇ ರೀತಿಯ ನೆಲೆ ಇಲ್ಲ, ಜನರ ಬೆಂಬಲವೂ ಇಲ್ಲ. ಕೇವಲ ಹಗಲು ಕನಸು ಕಾಣುವುದು ಕಾಂಗ್ರೆಸ್‌ ಸ್ಥಿತಿ​ಯಾ​ಗಿದೆ ಎಂದು ಅಶ್ವತ್ಥ ನಾರಾ​ಯಣ ಟೀಕಿ​ಸಿ​ದರು.

180 ಮನೆಗಳಿಗೆ ಹಾನಿ, 1.14 ಕೋಟಿ ಪರಿಹಾರ ವಿತರಣೆ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ​ರುಪಾಯಿ ಪರಿಹಾರ ವಿತರಿಸಲಾಗಿದೆ. ಜೊತೆಗೆ ಜಿಲ್ಲೆಯ 70 ಸಂತ್ರಸ್ತರಿಗೆ 15 ಲಕ್ಷ ರು. ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿ​ದರು. ಜಿಲ್ಲೆಯ ಹಲವು ನೆರೆಪೀಡಿತ ಪ್ರದೇಶಗಳಿಗೆ ಸೋಮ​ವಾ​ರ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾತ​ನಾ​ಡಿ​ದ ಸಚಿ​ವರು, ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 16 ಕೋಟಿ ರು. ಮತ್ತು ತಹಸೀಲ್ದಾರರ ಖಾತೆಯಲ್ಲಿ 2.50 ಕೋಟಿ ರು. ಹಣ ಇದೆ ಎಂದು ಸ್ಪಷ್ಟಪಡಿಸಿದರು.

ನಾಳೆ​ಯಿಂದ ಪೋರ್ಟಲ್‌ ಪ್ರಾರಂಭ: ಸತತ ಮಳೆ​ಯಿಂದಾಗಿ ರಾಮ​ನ​ಗರ ಜಿಲ್ಲೆ​ಯಲ್ಲಿ ಮನೆ ಗೋಡೆ ಕುಸಿದು 2 ಮಕ್ಕಳು ಸಾವ​ನ್ನ​ಪ್ಪಿ​ದರೆ, 2 ಮನೆಗಳು ಸಂಪೂ​ರ್ಣ​ವಾಗಿ ಮುಳು​ಗಿವೆ. ಸುಮಾರು 180 ಮನೆ​ಗಳು ಶೇ.75ರಷ್ಟುಜಖಂಗೊಂಡು ಹಾನಿ​ಗೊಂಡಿವೆ. 110 ಶಾಲೆ​ಗಳು, 50 ಅಂಗ​ನ​ವಾಡಿ, 600 ವಿದ್ಯುತ್‌ ಕಂಬ​ಗಳು, 300 ಟ್ರಾನ್ಸ್‌ ಫಾರ್ಮರ್‌ ನೀರು ಪಾಲಾ​ಗಿ​ವೆ. 2 ಕೆರೆ​ಗಳ ಏರಿ ಒಡೆ​ದಿವೆ, 100 ಕಿ.ಮೀ ರಸ್ತೆ​ಗಳು , 14 ಸೇತು​ವೆ​ಗಳು ಡ್ಯಾಮೇಜ್‌ ಆಗಿವೆ. 200 ಹೆಕ್ಟೇರ್‌ ತೋಟ​ಗಾ​ರಿಕೆ , 150 ಹೆಕ್ಟೇರ್‌ ಕೃಷಿ ಬೆಳೆ , 2 ಎಕರೆ ರೇಷ್ಮೆ ಕೃಷಿ ಹಾನಿಯಾಗಿದೆ ಎಂದು ತಿಳಿ​ಸಿ​ದ​ರು.

ಮ​ಳೆ​ಯಿಂದ ಸಂಭ​ವಿ​ಸಿ​ರುವ ನಷ್ಟಕ್ಕೆ ಪರಿ​ಹಾರ ನೀಡುವ ಸಲು​ವಾಗಿ ನಾಳೆ​ಯಿಂದಲೇ ಪೋರ್ಟಲ್‌ ಪ್ರಾರಂಭ​ವಾ​ಗ​ಲಿದ್ದು, ಸಂತ್ರ​ಸ್ತರು ಅರ್ಜಿ​ಗ​ಳನ್ನು ಸಲ್ಲಿಸಬೇಕು. ಮನೆ ಕಳೆ​ದು​ಕೊಂಡ​ವರು, ಬೆಳೆ ನಷ್ಟಅನು​ಭ​ವಿ​ಸಿ​ದ​ವರು ಸೇರಿ​ದಂತೆ ಪ್ರತಿ​ಯೊ​ಬ್ಬ​ ಸಂತ್ರ​ಸ್ತ​ನಿಗೂ ಪರಿ​ಹಾರ ವಿತ​ರಿ​ಸುವ ಕೆಲಸ ನಡೆ​ಯ​ಲಿದೆ ಎಂದು ಹೇಳಿ​ದ​ರು. ನೆರೆ ಸಂಬಂಧದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವಕ್ಕೆಲ್ಲ ಕೇಂದ್ರ ಸರ್ಕಾರದ ಸಹಾಯವೂ ಸಿಗ​ಲಿದೆ. ಜಿಲ್ಲಾ​ಡ​ಳಿತ ವತಿ​ಯಿಂದ ಸಂತ್ರಸ್ತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ವಿತರಿಸಲಾಗುವುದು ಎಂದರು.

ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ನಿಂದ ನಮ್ಮ ವರದಿ ಆಧಾರದ ಮೇಲೆ ಹಣ ರಾಜ್ಯಕ್ಕೆ ಬಿಡುಗಡೆಯಾಗುತ್ತದೆ. ಈ ಬಾರಿ ರೈತರ ಜಮೀನುಗಳು ಹಾನಿಯಾಗಿರುವುದರಿಂದ ಮುಖ್ಯಮಂತ್ರಿಗಳು ದುಪಟ್ಟು ನೆರವು ಮಾಡಿಕೊಟ್ಟು ರೈತರ ನೆರವಿಗೆ ಧಾವಿಸಿದ್ದಾರೆ ಎಂದು ತಿಳಿದರು. ಹಾನಿಯಾಗಿರುವ ಬಗ್ಗೆ ದಾಖಲೆಗಳನ್ನು ನೀಡಿ ಹೆಚ್ಚು ನೆರವು ಕೇಳಲಾಗಿದೆ ಇದರಲ್ಲಿ ಯಾವುದೇ ಅನುಮಾನ ಬೇಡ. ಮುಂಗಡವಾಗಿ ಬೇಕಾದ ನೆರವು ಪಡೆಯಲು ಅವಕಾಶವಿದೆ.ನೆರೆಯಿಂದ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್‌ ನವರು ಹೇಳಲಿ, ಕೊಡಿಸುವಂತಹ ಕೆಲಸ ಮಾಡಿ ಕಷ್ಟದಲ್ಲಿರುವ​ವರ ನೆರವಿಗೆ ಬರಲಿ ಎಂದು ಹೇಳಿ​ದರು.

ಡಿಕೆ ಸಹೋ​ದ​ರರ ಜತೆ ಆಡಿದ ಆಟ ನನ್ನ ಬಳಿ ನಡೆ​ಯಲ್ಲ: ಎಚ್‌ಡಿಕೆ ಲೇವಡಿ

ಕೆರೆ - ನದಿ​ಗ​ಳ ಪಕ್ಕ​ದ​ಲ್ಲಿ​ರುವ ಮನೆ​ಗ​ಳನ್ನು ವೀಕ್ಷಣೆ ಮಾಡಿ ಅವ​ರನ್ನು ಸ್ಥಳಾಂತ​ರಿ​ಸುವ ಹಾಗೂ ಮನೆ​ಗಳು ದುರಸ್ತಿ ಪಡಿ​ಸ​ಲಾ​ಗು​ವುದು. ಸರ್ಕಾರಿ ಶಾಲೆ​ಗಳ ಕಟ್ಟಡಕ್ಕೆ ಧಕ್ಕೆ​ಯಾ​ಗಿ​ದ್ದರೆ ದುರಸ್ತಿ ಜತೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡ​ಲಾ​ಗು​ವುದು ಎಂದರು. ಚನ್ನ​ಪ​ಟ್ಟಣ ತಾಲೂ​ಕಿನ ಕೊಂಡಾ​ಪುರ - ಬಾಣ​ಗ​ಳ್ಳಿಯ ಸಂಪರ್ಕ ಸೇತು​ವೆ ಮಾತ್ರ​ವ​ಲ್ಲದೆ ಕೆಲ​ವೊಂದು ಸೇತುವೆಗಳು ಕಳಪೆ ಕಾಮ​ಗಾ​ರಿಯ ಕಾರಣ ಹಾನಿ​ಗೊಂಡಿವೆ. ಈ ಬಗ್ಗೆ ಪರಿ​ಶೀ​ಲನೆ ನಡೆಸಿ ಕಳಪೆ ಕಾಮ​ಗಾರಿ ಕಾರ​ಣ​ವಾ​ಗಿ​ದ್ದರೆ ಕ್ರಮ ವಹಿ​ಸು​ವಂತೆ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡ​ಲಾ​ಗಿದೆ.

ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಂಡರ್‌ ಪಾಸ್‌ ಗಳು ಜಲಾ​ವೃ​ತ​ವಾ​ಗಿ​ದ್ದು ಹಾಗೂ ಸರ್ವಿಸ್‌ ರಸ್ತೆಗಳು ಗುಣ​ಮ​ಟ್ಟ​ವಾ​ಗಿ​ಲ್ಲ​ದಿ​ರು​ವ ಕುರಿತು ಹೆದ್ದಾರಿ ಪ್ರಾಧಿ​ಕಾರದ ಅಧಿ​ಕಾ​ರಿ​ಗ​ಳೊಂದಿಗೆ ಚರ್ಚಿ​ಸ​ಲಾ​ಗಿದೆ. ಮುಂದಿನ 3 ತಿಂಗ​ಳೊ​ಳಗೆ ಸರಿ​ಪ​ಡಿ​ಸುವ ಭರ​ವಸೆ ನೀಡಿ​ದ್ದಾರೆ ಎಂದು ಅಶ್ವತ್ಥ ನಾರಾ​ಯಣ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

Follow Us:
Download App:
  • android
  • ios