Asianet Suvarna News Asianet Suvarna News

ಅರ್ಹತೆ ಇದ್ದವರು ಸಿಎಂ ಆಗಲಿ: ಸಚಿವ ಅಶ್ವತ್ಥ್ ನಾರಾಯಣ್

ರಾಜಕೀಯ ಎಂಬುದು ಬಹಳ ಪವಿತ್ರವಾದುದ್ದು, ಅಧಿಕಾರ ಬಯಸುವುದು ತಪ್ಪಲ್ಲ, ಅದಕ್ಕೆ ಆದಂತಹ ಅರ್ಹತೆ, ಯೋಗ್ಯತೆ ಇರಬೇಕು ಯೋಗ್ಯತೆ, ಅರ್ಹತೆ ಬೆಳೆಸಿಕೊಂಡು ಯಾರು ಬೇಕಾದರೂ ಸಿಎಂ ಆಗಲಿ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಟಾಂಗ್‌ ನೀಡಿದರು. 

Minister Dr CN Ashwath Narayan Slams On HC Balakrishna gvd
Author
Bangalore, First Published Aug 1, 2022, 5:24 AM IST

ಚನ್ನಪಟ್ಟಣ (ಆ.01): ರಾಜಕೀಯ ಎಂಬುದು ಬಹಳ ಪವಿತ್ರವಾದುದ್ದು, ಅಧಿಕಾರ ಬಯಸುವುದು ತಪ್ಪಲ್ಲ, ಅದಕ್ಕೆ ಆದಂತಹ ಅರ್ಹತೆ, ಯೋಗ್ಯತೆ ಇರಬೇಕು ಯೋಗ್ಯತೆ, ಅರ್ಹತೆ ಬೆಳೆಸಿಕೊಂಡು ಯಾರು ಬೇಕಾದರೂ ಸಿಎಂ ಆಗಲಿ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಟಾಂಗ್‌ ನೀಡಿದರು. ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದ ಚಾಮುಂಡೇಶ್ವರಿ ದೇವಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಒಕ್ಕಲಿಗ ಸಮುದಾಯದವರು ಡಿ.ಕೆ.ಶಿವಕುಮಾರ್‌ಗೆ ಒಂದು ಅವಕಾಶ ನೀಡಿ ಎಂದು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಅಧಿಕಾರ ಪಡೆದುಕೊಳ್ಳೋದು ನಮಗೋಸ್ಕರ ಅಲ್ಲ. ತಮ್ಮ ವ್ಯಕ್ತಿಗತ ಆಸೆ ಪೂರೈಸಿಕೊಳ್ಳೋದಕ್ಕೆ ಅಲ್ಲ ಎಂದು ತಿರುಗೇಟು ನೀಡಿದರು. ಅಧಿಕಾರ ಪಡೆದುಕೊಳ್ಳೋದು ನಾಡಿನ ಶ್ರೇಯಸ್ಸಿಗಾಗಿ. ನನಗೊಂದಿಷ್ಟುಕೊಡಿ ಅನ್ನೋದು ಅಂಗಡಿಯಲ್ಲಿ ವ್ಯಾಪಾರ ಮಾಡಿದಂತಲ್ಲ. ಅಧಿಕಾರ ಪಡೆಯಲು ಬದ್ದತೆ, ಕಾಳಜಿ ಮೊದಲು ಇರಬೇಕು ಎಂದರು.

ಉ.ಪ್ರ. ಮಾದರಿ ಅಲ್ಲ, ಹಂತಕರ ಎನ್‌ಕೌಂಟರ್‌ಗೂ ರೆಡಿ: ಸಚಿವ ಅಶ್ವತ್ಥ್‌

ಸಿದ್ದು, ಡಿಕೆಗೆ ಟಾಂಗ್‌: ನಿವೃತ್ತಿ ಹಂಚಿನಲ್ಲಿರುವ ಸಿದ್ದರಾಮಯ್ಯ ಒಂದು ಭಾಗ. ಯೋಗ್ಯತೆ, ಅರ್ಹತೆ ಇಲ್ಲದಂತಹ ಡಿ.ಕೆ.ಶಿವಕುಮಾರ್‌ ಇನ್ನೊಂದು ಕಡೆ. ಇವರನ್ನು ಸಿಎಂ ಮಾಡಿ ನಾಡಿನ ಜನರು ಏನು ನೋಡಬೇಕು. ನಾಡಿನ ಜನರ ಕಷ್ಟಕ್ಕೆ ಸ್ಪಂದಿಸುವ ಒಳ್ಳೆಯ ನಾಯಕ ಬರಬೇಕು ಎಂದು ಬಯಸುತ್ತಾರೆ ಎಂದರು. ಅವರ ಆಸೆ ಪೂರೈಸಿಕೊಳ್ಳಲು ನಾಡಿನ ಜನರನ್ನು ಬಲಿ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಈಗಾಗಲೇ ನಾಡಿನ ಜನರನ್ನು ಬಲಿ ಕೊಟ್ಟಿರುವುದು ಸಾಕು. ಬೇರೆ ಯಾರು ಬಲಿಯಾಗುವುದು ಬೇಡ. ಅವರ ಭಾರವನ್ನು ಹೊರಲು ನಮ್ಮ ಜನ ಏನು ಕರ್ಮ ಮಾಡಿದ್ದಾರೆ. 

ಸತ್ಯವಂತರೂ ಸಿಎಂ ಆಗಲಿ, ಪಾಪಿಗಳು ಸಂಪೂರ್ಣವಾಗಿ ನಿಲ್ಲಬೇಕು ಚಾಮುಂಡೇಶ್ವರಿ ತಾಯಿಯಲ್ಲಿ ಬೇಡಿಕೊಳ್ಳುತ್ತೇನೆ ಎಂದರು. ನಾನು ಮೊದಲ ಬಾರಿ ಬಿಜೆಪಿಯಲ್ಲಿ ಶಾಸಕನಾದಾಗ ಆರ್‌.ಅಶೋಕ್‌. ಅಶ್ವಥ್‌ ನಾರಾಯಣ್‌ ಬಿಜೆಪಿಯಲ್ಲಿ ಇರಲಿಲ್ಲ ಎಂಬ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅದಕ್ಕೆ ಏನು ಆಗಬೇಕಂತೆ...? ಬಾಲಕೃಷ್ಣ ಕನ್‌ಪ್ಯೂಸ್‌ ಆಗಿದ್ದಾರೆ. ಕನ್‌ಪ್ಯೂಸ್‌ ಆಗಬೇಡ ಸ್ಪಷ್ಟತೆ ತಿಳಿದಿಕೋ ತಿರುಗೇಟು ನೀಡಿದರು.

‘ಎನ್‌ಕೌಂಟರ್‌’ ಹೇಳಿಕೆಗೆ ಎಎಪಿ ತೀವ್ರ ಆಕ್ಷೇಪ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರವೀಣ್‌ ನೆಟ್ಟಾರು ಹತ್ಯೆಗೆ ಕಾರಣರಾದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಹೇಳಿಕೆ ನೀಡಿ ರಾಜ್ಯದ ಜನತೆಯನ್ನು ಹಾದಿ ತಪ್ಪಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅಮ್‌ ಅಮ್ಮ ಪಾರ್ಟಿ(ಎಎಪಿ) ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರ ಹೇಳಿಕೆಗಳು ಜಂಗಲ್‌ ರಾಜ್‌ ತರಲು ಪ್ರಯತ್ನಿಸುತ್ತಿರುವಂತಿದೆ. 

ಹತ್ಯೆಯಾದ ಪ್ರವೀಣ್ ಕುಟುಂಬಕ್ಕೆ ವೈಯಕ್ತಿಕ 10 ಲಕ್ಷ ರೂ. ನೆರವು ಘೋಷಿಸಿದ ಅಶ್ವತ್ಥ ನಾರಾಯಣ

ಯಾವ ಸಂದರ್ಭಗಳಲ್ಲಿ ಎನ್‌ಕೌಂಟರ್‌ ಮಾಡಲಾಗುತ್ತದೆ ಎಂಬ ಅರಿವಿಲ್ಲದೇ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದು, ಅವರು ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವೇ ಸರ್ಕಾರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಿದ್ದರೂ ರಾಜ್ಯದಲ್ಲಿಯೂ ಯೋಗಿ ಮಾದರಿ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೇವಲ ಕೋಮು ಧ್ರುವೀಕರಣ ರಾಜಕಾರಣವನ್ನೇ ಹೊಂದಿರುವ ಬಿಜೆಪಿ ಕರ್ನಾಟಕವನ್ನು ತನ್ನ ಪ್ರಯೋಗ ಶಾಲೆಯನ್ನಾಗಿ ರೂಪಿಸಲು ಮುಂದಾಗಿದೆ ಎಂದು ಆರೋಪಿಸಿದರು.

Follow Us:
Download App:
  • android
  • ios