ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವ ತೀರ್ಮಾನವಿದೆ. ಕೇರಳದಲ್ಲಿ ಸರ್ಕಾರ ರಚನೆಯಾದ ನಂತರ ವರಿಷ್ಠರು ಕರ್ನಾಟಕದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಮಂಗಳೂರು (ಮೇ.9): ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬ ತೀರ್ಮಾನವಿದ್ದು, ಕೇರಳದಲ್ಲಿ ಸರ್ಕಾರ ರಚನೆ ಆದ ನಂತರ ನಮ್ಮ ವರಿಷ್ಠರು ಕರ್ನಾಟಕದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರ ಜತೆ ಮಾತನಾಡಿ, ‘ಪಕ್ಷದಲ್ಲಿ ಯಾರು ಏನೇನು ಪ್ರಯತ್ನ ಮಾಡ್ತಾ ಇದಾರೋ ನನಗೆ ಗೊತ್ತಿಲ್ಲ. ಯಾರು ಯಾವ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್, ಸೋನಿಯಾ ತೀರ್ಮಾನ ತಗೆದುಕೊಳ್ಳುತ್ತಾರೆ. ಸಮಯ, ಮುಹೂರ್ತ ಎಲ್ಲಾ ಅವರ ವಿವೇಚನೆಗೆ ಬಿಟ್ಟದ್ದು’ ಎಂದರು.

ತಮಿಳುನಾಡಿನಲ್ಲಿ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಭಿಕ್ಷೆ ಬೇಡುತ್ತಿದೆ ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೆಸರು ಓಡ್ತಾ ಇರ್ಬೇಕು ಅಂತಾ ಇಂತಹ ಹೇಳಿಕೆ ಕೊಡ್ತಾರೆ. ಅಂತಹ ಪ್ರಶ್ನೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಹುಲ್ ಗಾಂಧಿ ಮತ್ತು ಟಿವಿಕೆ ಪಕ್ಷದ ನಾಯಕ, ನಟ ವಿಜಯ್‌ಗೆ ಮೊದಲಿಂದನೂ ಸ್ನೇಹ-ಸಂಪರ್ಕವಿತ್ತು. ಅವರು ಎನ್‌ಎಸ್‌ಯುಐಗೆ ಬರಬೇಕು ಅಂತ 8 ವರ್ಷದ ಹಿಂದೆ ಮಾತುಕತೆ ನಡೆದಿತ್ತು ಎಂದು ತಿಳಿಸಿದರು.