20 ವರ್ಷ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲಾಗಲ್ಲ: ಸಚಿವ ಸುಧಾಕರ್
ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ನಾವು ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೇವಲ ಒಂದೇ ತಿಂಗಳಲ್ಲಿ ಈಡೇರಿಸುತ್ತಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಕ್ತಿ ಯೋಜನೆಗೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ. ಇವೆಲ್ಲಾ ಆಗದ ಭರವಸೆಗಳು ಎಂದು ವಿರೋಧ ಪಕ್ಷಗಳು ಲೇವಡಿ ಮಾಡುತ್ತಿದ್ದವು. ಆದರೆ ಶೋಷಿತರು, ಬಡವರು, ಹಿಂದುಳಿದವರ ಮೇಲೆ ಕಾಂಗ್ರೆಸ್ ನಾಯಕರಿಗೆ ಇರುವ ಕಾಳಜಿಯಿಂದಾಗಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದ್ದೇವೆ: ಡಿ.ಸುಧಾಕರ್
ಹಿರಿಯೂರು(ಜೂ.12): ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಶ್ರೀಸಾಮಾನ್ಯ ಮನದಲ್ಲಿ ವಿಶ್ವಾಸದ ಮುದ್ರೆ ಒತ್ತಿದ್ದು, ಇನ್ನೂ ಇಪ್ಪತ್ತು ವರ್ಷ ಸರ್ಕಾರವ ಶೇಕ್ ಮಾಡೋಕೆ ಅಗುವುದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ನೂತನ ಶಕ್ತಿ ಯೋಜನೆಗೆ ಚಾಲನೆ ನೀಡಿ, ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ನಾವು ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ ಕೇವಲ ಒಂದೇ ತಿಂಗಳಲ್ಲಿ ಈಡೇರಿಸುತ್ತಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಕ್ತಿ ಯೋಜನೆಗೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ. ಇವೆಲ್ಲಾ ಆಗದ ಭರವಸೆಗಳು ಎಂದು ವಿರೋಧ ಪಕ್ಷಗಳು ಲೇವಡಿ ಮಾಡುತ್ತಿದ್ದವು.
ಮನೆ ಚಿಂತೆ ಬಿಟ್ಟು ಖುಷಿಯಾಗಿ ಅಭ್ಯಾಸ ಮಾಡಿ: ವಸತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸಲಹೆ
ಆದರೆ ಶೋಷಿತರು, ಬಡವರು, ಹಿಂದುಳಿದವರ ಮೇಲೆ ಕಾಂಗ್ರೆಸ್ ನಾಯಕರಿಗೆ ಇರುವ ಕಾಳಜಿಯಿಂದಾಗಿ ಕೊಟ್ಟಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಸರ್ಕಾರ ಬಂದು ಒಂದೇ ತಿಂಗಳಲ್ಲಿ ಇಷ್ಟುದೊಡ್ಡ ಗಾತ್ರದ ಭರವಸೆಯನ್ನು ಈಡೇರಿಸಿದ್ದು ಸಾಧನೆಯಾಗಿದೆ. ಸುಮಾರು 5 ಸಾವಿರ ಕೋಟಿಯಷ್ಟುಹಣ ಈ ಶಕ್ತಿ ಯೋಜನೆಗೆ ವಿನಿಯೋಗ ಆಗಲಿದೆ. ಉಚಿತ ವಿದ್ಯುತ್, ಹತ್ತು ಕೆಜಿ ಅಕ್ಕಿ, ಪದವೀಧರರಿಗೆ ಹಾಗೂ ಮಹಿಳೆಯರಿಗೆ ಮಾಸಿಕ ನೀಡುವ ಹಣದ ಯೋಜನೆಗಳಿಗೂ ದಿನಾಂಕ ನಿಗದಿಯಾಗಿದ್ದು, ಒಂದೊಂದೇ ಭರವಸೆ ಈಡೇರುತ್ತವೆ. ನುಡಿದಂತೆ ನಡೆಯುತ್ತಿದ್ದೇವೆ ಎಂಬ ಆತ್ಮತೃಪ್ತಿ ನಮಗಿದೆ ಎಂದರು.
ಸುಮಾರು 70 ಸಾವಿರ ಕೋಟಿಯ ಬೃಹತ… ಯೋಜನೆಗಳನ್ನು ಜಾರಿಗೆ ತರುವ ಗುರುತರ ಹೊಣೆ ನಮ್ಮ ಮೇಲಿದೆ. ವಿರೋಧಿಗಳ ಟೀಕೆಗಳಿಗೆ ಒಂದೊಂದಾಗಿ ಉತ್ತರ ನೀಡುತ್ತಿದ್ದೇವೆ. 2018 ರಿಂದ 2023 ರವರೆಗೆ ಬೇಸತ್ತು ಹೋಗಿದ್ದ ರಾಜ್ಯದ ಜನರು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಅಧಿಕಾರಕ್ಕೆ ತಂದಿದ್ದಾರೆ. ಕೊಟ್ಟಎಲ್ಲಾ ಭರವಸೆಗಳನ್ನು ಈಡೇರಿಸಿ ಅವರ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದರು.
ಡಿವೈಎಸ…ಪಿ ಚೈತ್ರಾ ಮಾತನಾಡಿ ಸರ್ಕಾರದ ನೂತನ ಶಕ್ತಿ ಯೋಜನೆಯನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕದ ಬಡ ಮಂದಿ ಬಸ… ಚಾರ್ಜ ಹೊಂದಿಸಲಾಗದೆ ಟಾಂ ಟಾಂ ವಾಹನಗಳಲ್ಲಿ ಬೆಂಗಳೂರು ಹೋಗುತ್ತಿದ್ದ ದೃಶ್ಯ ನಾವೆಲ್ಲಾ ನೋಡಿದ್ದೇವೆ.ಇದೀಗ ಈ ಯೋಜನೆ ಬಡವರಿಗೆ ಉಪಯೋಗವಾಗಲು, ಯಶಸ್ವಿಯಾಗಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ನೋಡ್ತಾ ಇರಿ, ಹತ್ತು ತಿಂಗಳಿಗೆ ಬಯಲಾಗುತ್ತೆ ಗ್ಯಾರಂಟಿ ಬಣ್ಣ: ಶಾಸಕ ಚಂದ್ರಪ್ಪ ಭವಿಷ್ಯ
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಹೆಬ್ಬಾಳ್ ಮಾತನಾಡಿ, ಶಕ್ತಿ ಸರ್ಕಾರದ ಬಹು ಮುಖ್ಯ ಯೋಜನೆಯಾಗಿದ್ದು, ನಿರ್ವಾಹಕರು ಮಹಿಳೆಯರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಫ್ರಿಯಾಗಿ ಪ್ರಯಾಣ ಮಾಡುವರೆಂಬ ತಾತ್ಸಾರ ಬೇಡ. ಅವರ ಪ್ರಯಾಣಕ್ಕೆ ಸರ್ಕಾರ ದುಡ್ದು ತುಂಬುತ್ತದೆ. ಯೋಜನೆ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ್, ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ನಿರಂಜನ್ ಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ…, ಸಹಾಯಕ ಲೆಕ್ಕಾಧಿಕಾರಿ ಚೇತನಾ, ಮಮತಾ, ನೇತ್ರಾವತಿ, ಶಶಿಕಲಾ, ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ಮುಖಂಡರಾದ ಅಜ್ಜಪ್ಪ, ಸುರೇಶ್ ಬಾಬು, ಬಿ.ಎಚ್ ಮಂಜುನಾಥ್, ಸಾದತ್ ಉಲ್ಲಾ ಇದ್ದರು.