Congress Padayatra: ಕೊರೋನಾ ಯಾರಿಗೂ ಹೇಳಿ, ಕೇಳಿ ಬರುವುದಿಲ್ಲ: ಆನಂದ್‌ ಸಿಂಗ್‌

*  ಕೊರೋನಾ ಏನಾದರೂ ಹೇಳಿ, ಕೇಳಿ ಬರುತ್ತಾ? 
*  ಕಾಂಗ್ರೆಸ್‌ ಪಾದಯಾತ್ರೆ ಇದೆ. ಆ ಮೇಲೆ ಬರ್ತಿನಿ ಅಂತ ಏನಾದರೂ ಹೇಳಿ ಬರುತ್ತಾ? 
*  ಕಾಂಗ್ರೆಸ್‌ ನಾಯಕರಿಗೆ ಕುಟುಕಿದ ಸಚಿವ ಆನಂದ್‌ ಸಿಂಗ್‌
 

Minister Anand Singh React on Congress Padayatra grg

ಹೊಸಪೇಟೆ(ಜ.10):  ಕೊರೋನಾಗೆ(Coronavirus) ಬಿಜೆಪಿ(BJP), ಕಾಂಗ್ರೆಸ್‌(Congress), ಹೆಣ್ಣು, ಗಂಡೆಂಬ ಭೇದ ಇರೊಲ್ಲ. ಯಾರಿಗೂ ನೋಡಿ ಕೊರೋನಾ ಬರೋಲ್ಲ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಏನಾದರೂ ಹೇಳಿ, ಕೇಳಿ ಬರುತ್ತಾ? ಕಾಂಗ್ರೆಸ್‌ ಪಾದಯಾತ್ರೆ(Congress Padayatra) ಇದೆ. ಆ ಮೇಲೆ ಬರ್ತಿನಿ ಅಂತ ಏನಾದರೂ ಹೇಳಿ ಬರುತ್ತಾ? ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡುತ್ತದೆ ಎಂದು ಕಾಂಗ್ರೆಸ್‌ ನಾಯಕರಿಗೆ ಕುಟುಕಿದರು.

ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ(BJP Government) ವೀಕೆಂಡ್‌ ಕರ್ಫ್ಯೂ(Weekend Curfew) ಹೇರಿದೆ ಅಂತ ಆರೋಪ ಮಾಡ್ತಿದ್ದಾರೆ ಕಾಂಗ್ರೆಸ್‌ ನಾಯಕರು. ಆದ್ರೆ ಅಕ್ಕಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಲಾಕ್‌ಡೌನ್‌(Lockdown) ಆಗಿದೆ. ಕೇಸಸ್‌ಗಳನ್ನು ನೋಡಿಕೊಂಡು ಸರ್ಕಾರ ಆದೇಶ ಮಾಡಿದೆ. ಮೊದಲೇ ಫಿಕ್ಸ್‌ ಮಾಡಿದ್ವಿ, ಆನಂತರ ಬಿಜೆಪಿ ವೀಕೆಂಡ್‌ ಕರ್ಫ್ಯೂ ಹಾಕಿದೆ ಅಂತ ಆರೋಪ ಮಾಡ್ತಿದ್ದಾರೆ ಎಂದರು.
ಕಾಂಗ್ರೆಸ್‌ನವರು ನಿಯಮ ಉಲ್ಲಂಘನೆ ಮಾಡಿದ್ರೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದರು.

Mekedatu Project: ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕೊರೋನಾ ಟೆಸ್ಟ್, ಡಿಕೆಶಿ ಗರಂ

ಬೂಸ್ಟರ್‌ ಡೋಸ್‌ಗೆ ಸಿದ್ಧತೆ:

ಬಳ್ಳಾರಿ(Ballari), ವಿಜಯನಗರ(Vijayanagara) ಅವಳಿ ಜಿಲ್ಲೆಗಳಲ್ಲಿ ಬೂಸ್ಟರ್‌ ಡೋಸ್‌(Booster Dose) ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಈಗಾಗಲೇ ಲಸಿಕೆ(Vaccine) ನೀಡಲಾಗುತ್ತಿದೆ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಮೊದಲನೇ ಡೋಸ್‌ ಪಡೆದವರು, ಈಗ ಎರಡನೇ ಡೋಸ್‌ ಪಡೆಯುತ್ತಿದ್ದಾರೆ. ಎರಡನೇ ಡೋಸ್‌ ಬಹಳಷ್ಟು ಜನರು ಪಡೆದಿರಲಿಲ್ಲ. ಎರಡನೇ ಡೋಸ್‌ ಪಡೆಯುವವರ ಸಂಖ್ಯೆ ಈಗ ಹೆಚ್ಚಾಗಿದೆ. ಉಭಯ ಜಿಲ್ಲೆಯ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳೋಕೆ ಸೂಚನೆ ನೀಡಿರುವೆ. ಬಳ್ಳಾರಿಯ ಟ್ರಾಮಾ ಕೇರ್‌ ಸೆಂಟರ್‌ನ ಕೆಲವು ವಿಭಾಗಗಳು ಚಿಕಿತ್ಸೆಗೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಮೂರನೇ ಅಲೆ ಬರಬಹುದು, ಬಾರದೇ ಇರಬಹುದು. ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು.

ಪ್ರವಾಸಿಗರಿಲ್ಲದೇ ಹಂಪಿ ಭಣ ಭಣ..!

ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಗೆ(Hampi) ಶನಿವಾರ ಹಾಗೂ ಭಾನುವಾರ ಪ್ರವಾಸಿಗರು(Tourists) ಬಾರದೆ ಶ್ರೀವಿರೂಪಾಕ್ಷೇಶ್ವರ ರಥಬೀದಿ ಬಿಕೋ ಎನ್ನುತ್ತಿತ್ತು. ಹಂಪಿಯ ಸ್ಮಾರಕಗಳು ಪ್ರವಾಸಿಗರಿಲ್ಲದೇ ಕಳೆಯುವಂತಾಯಿತು.

ವೀಕೆಂಡ್‌ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಹಂಪಿ ಸುತ್ತಮುತ್ತ 4 ಚೆಕ್‌ಪೋಸ್ಟ್‌ಗಳನ್ನು ಪೊಲೀಸರು(Police) ತೆರೆದಿದ್ದರು. ಇನ್ನು ಹಂಪಿ ಹಾಗೂ ಪಕ್ಕದ ಹಳ್ಳಿಗಳಿಗೆ ಹೊಲ ಗದ್ದೆಗಳಿಗೆ ತೆರಳುವವರಿಗೆ ಮಾತ್ರ ಪೊಲೀಸರು ಅವಕಾಶ ನೀಡಿದರು. ಸಕಾರಣವಿಲ್ಲದೇ ಬಂದವರನ್ನು ವಾಪಸ್‌ ಕಳುಹಿಸಿದರು.

Mekedatu Politics: ಕಾಂಗ್ರೆಸ್‌ ಪಾದಯಾತ್ರೆಯಿಂದ ಮೇಕೆದಾಟು ಇನ್ನಷ್ಟು ಕ್ಲಿಷ್ಟ: ಶೆಟ್ಟರ್‌

ಹಂಪಿಯ ನದಿತೀರ ಹಾಗೂ ಸ್ಮಾರಕಗಳ ಬಳಿ ಕಾಣಸಿಗುತ್ತಿದ್ದ ಅಂಗಡಿಗಳು ಕೂಡ ಬಂದ್‌ ಆಗಿದ್ದವು. ಪ್ರವಾಸಿಗರು ಇಲ್ಲದೇ ಇಡೀ ಹಂಪಿ ಭಣಗುಡುತ್ತಿತ್ತು. ಪ್ರತಿ ವೀಕೆಂಡ್‌ ದಿನ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದರು. ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರಿಂದ ಆಟೋ ಚಾಲಕರು ಹಾಗೂ ಪ್ರವಾಸಿ ಮಾರ್ಗದರ್ಶಿ (ಗೈಡ್‌)ಗಳಿಗೂ ಅನುಕೂಲವಾಗುತ್ತಿತ್ತು.

ಕಳೆದ ವೀಕೆಂಡ್‌ನಲ್ಲಿ ನಗರ ಸೇರಿದಂತೆ ಹಂಪಿ ಸುತ್ತಮುತ್ತಲ ಹೋಟೆಲ್‌, ರೆಸಾರ್ಟ್‌ಗಳು ಪ್ರವಾಸಿಗರಿಂದ ಫುಲ್‌ ಆಗಿದ್ದವು. ಆದರೆ, ಈಗ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿರುವುದರಿಂದ ಹೋಟೆಲ್‌ಗಳ ರೂಮ್‌ಗಳು ಕೂಡ ಖಾಲಿಯಾಗಿದ್ದವು. ಈ ಭಾಗದಲ್ಲಿ ಹೋಟೆಲ್‌ ಉದ್ಯಮವು ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿರುವುದರಿಂದ ಹೋಟೆಲ್‌ಗಳು ಖಾಲಿಯಾಗಿದ್ದವು. ಕಮಲಾಪುರದ ಜೂಲಾಜಿಕಲ್‌ ಪಾರ್ಕ್‌ಗೂ ಪ್ರವಾಸಿಗರು ಬಾರದ್ದರಿಂದ ಬಿಕೋ ಎನ್ನುತ್ತಿತ್ತು. ತುಂಗಭದ್ರಾ ಜಲಾಶಯ ಮತ್ತು ದರೋಜಿ ಕರಡಿಧಾಮಕ್ಕೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು.
 

Latest Videos
Follow Us:
Download App:
  • android
  • ios