Asianet Suvarna News Asianet Suvarna News

ಭ್ರಷ್ಟ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಎಂ.ಬಿ.ಪಾಟೀಲ

ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸ್ವಾತಂತ್ರ್ಯ ದೊರಕಿಸುವಲ್ಲಿ ಕಾಂಗ್ರೆಸ್‌ ಪಾತ್ರ ಪ್ರಮುಖ: ಪಾಟೀಲ್‌

MB Patil Slams to BJP Government grg
Author
Bengaluru, First Published Aug 21, 2022, 11:53 AM IST

ಚಿತ್ತಾಪುರ(ಆ.21):  ಇತಿಹಾಸದ ಪುಟಗಳನ್ನು ತಿರುಚಿವ ಮೂಲಕ ಮಹಾನ್‌ ಸಮಾಜ ಸುಧಾರಕರಿಗೆ, ನಾಯಕರಿಗೆ ಅವಮಾನ ಮಾಡಿದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಬುಡ ಸಮೇತ ಕಿತ್ತೋಗೆಯುವ ಮೂಲಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ಪಟ್ಟಣದ ಎಎ ಫಂಕ್ಷನ್‌ ಹಾಲ್‌ನಲ್ಲಿ ಚಿತ್ತಾಪುರ-ವಾಡಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸ್ವಾತಂತ್ರ್ಯ ದೊರಕಿಸುವಲ್ಲಿ ಕಾಂಗ್ರೆಸ್‌ ಪಾತ್ರ ಪ್ರಮುಖವಾಗಿದೆ ಎಂದರು.

ಸಿದ್ದು ಅವರನ್ನು ಯಾವ ಲಿಂಗಾಯಿತರೂ ನಂಬೋದಿಲ್ಲ: ಸಚಿವ ಅಶೋಕ್‌

ಬಿಜೆಪಿ ಸರ್ಕಾರದಿಂದ ಜನರು ಬೇಸತ್ತಿದ್ದು ಕಾಂಗ್ರೆಸ್‌ ಅ​ಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಬರುವ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ 50 ಸಾವಿರ ಮತಗಳಿಂದ ಪ್ರಿಯಾಂಕ್‌ ಖರ್ಗೆ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಕೊಡುವಲ್ಲಿ ಕಾಂಗ್ರೆಸ್‌ ಕೊಡುಗೆ ಅಪಾರವಾಗಿದೆ. ಹೀಗಾಗಿ ಕಾಂಗ್ರೆಸ್‌ನವರೇ ನಿಜವಾದ ದೇಶಭಕ್ತರು. ಬಿಜೆಪಿಯವರು ನಕಲಿ ದೇಶಭಕ್ತರು ಎಂದು ಕುಟುಕಿದ ಅವರು, ರಾಷ್ಟ್ರಧ್ವಜವನ್ನು ಒಪ್ಪಿಕೊಳ್ಳದವರು ಮತ್ತು ಕೋಮು ಭಾವನೆ ಮೂಡಿಸುವ ಆರ್‌ಎಸ್‌ಸ್‌ನವರು ದೇಶದ್ರೋಹಿಗಳು ಅಂತಹವರಿಂದ ನಾವು ಪಾಠ ಕಲಿಯುವ ಅವಶ್ಯಕತೆಯಿಲ್ಲ, ರಾಷ್ಟ್ರದ್ವಜವನ್ನು ಹಾರಿಸಲು ಆರ್‌ಎಸ್‌ಎಸ್‌ ಅವರಿಗೆ 53 ವರ್ಷ ಬೇಕಾಯಿತು ಎಂದರು.

ಅಮೃತ ಮಹೋತ್ಸವ ಮನೆ ಮನೆಗೆ ಅಲ್ಲ ಪ್ರತಿಯೊಬ್ಬರ ಮನಸ್ಸಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುವುದು ರಾಜ್ಯದಲ್ಲಿ ಅತಿವೃಷ್ಠಿ, ಬೆಲೆ ಏರಿಕೆ ಮತ್ತು ಭ್ರಷ್ಟಚಾರದಿಂದ ಜನ ಸಾಯುತ್ತಿದ್ದರೆ ಬಿಜೆಪಿಯವರು ಸಾರ್ವಕರ್‌ ಮತ್ತು ಗೂಡ್ಸೆ ಭಾವಚಿತ್ರಗಳ ಬ್ಯಾನರ್‌ ಹಾಕುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಜೇವರ್ಗಿ ಶಾಸಕ ಡಾ.ಅಜಯಸಿಂಗ್‌, ಮಾಜಿ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಅಲ್ಲಂಪ್ರಭು ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿದು. ಕಾಂಗ್ರೆಸ್‌ ಮುಖಂಡರಾದ ಮಹಿಮೂದ್‌ ಸಾಹೇಬ್‌, ಮಲ್ಲಿಕಾರ್ಜುನ ಕಾಳಗಿ, ಬಾಬುರಾವ ಚವ್ಹಾಣ, ನೀಲಕಂಠರಾವ್‌ ಮೂಲಿಗೆ, ಮುಖೇಶ, ಸುಭಾಷ ರಾಠೋಡ, ಮಲ್ಲಿಕಾರ್ಜುನ ಪೂಜಾರಿ, ಜಿ.ವಿಜಯಕುಮಾರ, ಜಗನ್ನಾಥ ಗೋದಿ, ಲತಾ ರಾಠೋಡ, ಶೃತಿ ಪೂಜಾರಿ, ಶೀಲಾ ಕಾಶಿ ಸೇರಿ ಹಲವರಿದ್ದರು.
 

Follow Us:
Download App:
  • android
  • ios