ಸಿದ್ದು ಅವರನ್ನು ಯಾವ ಲಿಂಗಾಯಿತರೂ ನಂಬೋದಿಲ್ಲ: ಸಚಿವ ಅಶೋಕ್
ಸಿದ್ದು ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಕಡ್ಡಿ ಗೀರಿ ಬೆಂಕಿ ಹಚ್ಚಿದ್ದಾಯ್ತು, ಏನೆಲ್ಲಾ ಹಾನಿಯಾಗಬೇಕೋ ಅದೆಲ್ಲವೂ ಆಯ್ತು: ಅಶೋಕ್
ಕಲಬುರಗಿ(ಆ.21): ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅದೇನೆಲ್ಲಾ ಮಾಡಬೇಕು ಮಾಡಿ ಬಿಟ್ಟಿದ್ದಾರೆ. ಕಡ್ಡಿ ಗೀರಿ ಅವರು ಹಚ್ಚಿರೋ ಬಂಕಿ ಹೊತ್ತಿ ಉರಿದು ಬೂದಿಯಾಗಿದೆ. ಬೂದಿಯಿಂದ ಮತ್ತೆ ಕಟ್ಟಿಗೆ ತಯ್ಯಾರು ಮಾಡಲಾಗುತ್ತಾ? ಹೀಗಾಗಿ ಈಗ ಪಶ್ಚಾತ್ತಾಪದ ಮಾತು ಹೇಳಿದೆರ ಪ್ರಯೋಜನವಿಲ್ಲವೆಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಆಡಕಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಪಶ್ಚಾತ್ತಾಪದ ಮಾತುಗಳನ್ನಾಡಿದರೂ ಯಾವುದೇ ಲಿಂಗಾಯಿತರು ಇವರ ಮಾತನ್ನು ನಂಬೋದಿಲ್ಲವೆಂದರು. ನೂರಾರು ವರುಷಗಳಿಂದ ಧರ್ಮದ ವಿಚಾರದಲ್ಲಿ ತುಂಬ ಸಾಮರಸ್ಯ ಕಾಪಾಡಿಕೊಂಡು ಬಂದಂತಹ ನಾಡು ನಮ್ಮದು. ಸಿದ್ದರಾಮಯ್ಯ ಹಾಲಲ್ಲಿ ಹುಳಿ ಹಿಂಡಿದ್ದಾಗಿದೆ. ಹಾಲು ಒಡೆದು ಹೋಗಿದೆ. ಹೀಗಾಗಿ ಈಗ ಮತ್ತೆ ಒಡೆದ ಹಾಲಿನಿಂದ ಉತ್ತಮ ಹಾಲು ಮಾಡಲದೀತೆ? ಹಾಗಿದೆ ಸಿದ್ದರಾಮಯಯ್ಯ ಪಶ್ಚಾತ್ತಾಪದ ಮಾತುಗಳು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ, ರಾಜ್ಯದಲ್ಲಿ ಹೇಳಿಕೊಳ್ಳುವಂತಹ ನಾಯಕತ್ವ ಇಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಪಕ್ಷ ಕಣಕ್ಕಿಳಿಯುವ ಅಭ್ಯರ್ಥಿಗಳು ದೊರಕದೆ ಕಂಗಾಲಾಗಲಿದೆ. ದೆಹಲಿಯಲ್ಲೂ ಬ್ಯಾಟರಿ ಹಚ್ಚಿ ಹುಡುಕಿದರೂ ಜನ ಸೆಳೆಯುವ ಮುಖಂಡರು ಆ ಪಕ್ಷದಲ್ಲಿಲ. ಇಂದಿಗೂ ವಿದೇಶಿಗರೇ ಆ ಪಕ್ಷದ ಅಧ್ಯಕ್ಷರಾಗಿದ್ದಾರೆಂದು ಟೀಕಿಸಿದರು.
ಮೊಟ್ಟೆ ಪ್ರತಿಭಟನೆ ಬಿಸಿ: ಸಿದ್ದರಾಮಯ್ಯ ತವರೂರಿಗೆ ಆಗಮಿಸಲು ಸಿಎಂ ಬೊಮ್ಮಾಯಿ ಹಿಂದೇಟು!
ವೀರ ಸಾವರ್ಕರ್ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಗಣೇಶ ಪೆಂಡಾಲ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಫೋಟೋ ಹಾಕಿದರೆ ತಪ್ಪೇನು?. ಖಾಸಗಿ ಸಮಾರಂಭ ಗಣೇಶ ಪೂಜೆ. ಇಲ್ಲಿ ಸಂಘಟನೆಗಳವರು ತಮ್ಮ ಆದರ್ಶ ದೇಶಭಕ್ತನ ಫೋಟೋ ಹಾಕಿದರೆ ತಪ್ಪೇನು? ಎಂದರು.
ಇದೇ ವೇಳೆ ಅಶೋಕ ಗೋಡ್ಸೆ ಫೋಟೋಗೆ ಕ್ಷಮೆ ಇಲ್ಲ. ಇದು ಅಪರಾಧ, ಇದರಿಂದ ಗಾಂಧೀಜಿಗೆ, ದೇಶಕ್ಕೆ ಅಪಮಾನವಾಗುತ್ತದೆ. ಹೀಗಾಗಿ ಯುವಕರು ಸಾವರ್ಕರ್ ಫೋಟೋ ಹಾಕಲು ಅಡ್ಡಿಯಿಲ್ಲ. ಆದರೆ ಈ ವಿಚಾರದಲ್ಲಿ ತಾವು ರಾಮ ಸೇನೆಯ ಹೇಳಿಕೆಗೆ ಉತ್ತರ ನೀಡೋದಿಸಿದ್ದರಾಮಯ್ಯ ಹಿಂದುಗಳ ಬಗ್ಗೆ, ಅಲ್ಲಿನ ಮುಖಂಡರ ಬಗ್ಗೆ, ಆ ಧರ್ಮದವರ ಬಗ್ಗೆ ಸದಾಕಾಲ ಅವಹೇಳನಕಾರಿ ಮಾತನ್ನಾಡುತ್ತಿರೋದರಿಂದ ಕೆಲವರು ಕೋಪದಲ್ಲಿ ಮೊಟ್ಟೆಎಸೆದು ಉತ್ತರಿಸಿದ್ದಾರೆ. ಹಾಗಂತ ತಾವು ಮೊಟ್ಟೆಸಂಸ್ಕೃತಿ ಪ್ರೋತ್ಸಾಹಿಸೋದಿಲ್ಲ, ಆದರೆ ಕೇವಲ 1 ಧರ್ಮದ ಬಗ್ಗೆ ಹೇಳಿಕೆ ಕೊಡುವುದು, ಎಗುವುದು ಸಹ ಸರಿಯಲ್ಲ ಎಂದರು
ಸಂಘ ಪರಿವಾರದದಲ್ಲಿ ಆರ್‌ಎಸ್‌ಎಸ್ ದೇಶದ್ರೋಹಿ ಅಂತ ಹೇಳುತ್ತಾರೆ. ನಾನು ಸಹ ಅದೇ ಸಂಘಟನೆಯಿಂದ ಬಂದವ. ನಾನು ದೇಶದ್ರೋಹಿಯೆ? ಸುಮ್ಮನೆ ಹೇಳಿಕೆ ನೀಡಿ ಗೊಂದಲ ಹುಟ್ಟು ಹಾಕಬಾರದು, ಇದನ್ನು ಕಾಂಗ್ರೆಸ್ಸಿಗರು ತಿಳಿಯಲಿ ಎಂದರು. ಬಿಜೆಪಿ ಪರ ಜನರ ಒಲವು ಹೀಗೆಯೇ ಮುಂದುವರಿಯಲಿದ್ದು ವರ್ಷದೊಳಗೆ ಕಾಂಗ್ರೆಸ್ ಕಚೇರಿ ಕಸ ಗುಡಿಸೋರು ಸಿಗೋದಿಲ್ಲವೆಂದು ಟೀಕಿಸಿದರು.
ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಎಂಬಿಪಿ
ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂಬಿಪಾ ಯಡಿಯೂರಪ್ಪನವರಿಗೆ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ನೋಡೋಣ ಎಂಬ ಸವಾಲಿಗೆ ಉತ್ತರಿಸಿದ ಅಶೋಕ ಬೇರೆ ಪಕ್ಷದವ ಸವಾಲಿನಂತೆ ನಡೆಯಬೇಕಾ? ಅವರು ಮೊದಲು ಬಿಜೆಪಿ ಬರಲಿ ನಂತರ ಅವರ ಸಲಹೆ ಕೇಳುತ್ತೇವೆ ಎಂದರು. ಅವರೇ ಮುಳುಗುವ ಹಡಗಲ್ಲಿದ್ದಾರೆ. ನಮಗೆ ಹೇಳುತ್ತಾರೆ? ಮೊದ್ಲು ಅವರು ಡಾ. ಪರಮ್ವೇಶ್ವರ, ಡಾ. ಖರ್ಗೆ ಅವರನ್ನ ಸಿಎಂ ಅಂತ ಹೇಳಲಿ ನೋಡೋಣ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಸುಳ್ಳು ಎಂದ ಅಶೋಕ ರಾಜ್ಯ ಕಾಂಗ್ರೆಸ್‌ನಲ್ಲೂ ಡಿಕೆಶಿ ಹಾಗೂ ಸಿದ್ದು ಮಧ್ಯೆ ಇನ್ನೊಬ್ಬ ಅನ್ಯ ನಾಯಕನ ಉದಯವಾಗಲಿರೋ ಸೂಚನೆ ತಮಗೂ ಇದೆ ಎಂದು ಹೇಳುತ್ತ ಕಾಂಗ್ರೆಸ್ಸಿಗರ ಹೇಳಿಕೆಗೆ ಟಾಂಗ್ ನೀಡಿದರು. ಚುನಾವಣೆ ಬರಲಿ, ಅನೇಕ ಕಾಂಗ್ರೆಸ್ಸಿಗರು ಬಿಜೆಪಿ ಸೇರಲಿದ್ದಾರೆ. ಈಗಲೇ ಎಲ್ಲರ ಹೆಸರು ಹೇಳಲಾಗದು. ನೀವೇ ಕಾದು ನೋಡಿರೆಂದರು.