* ಮತ್ತೋರ್ವ ಜೆಡಿಎಸ್ ಮುಖಂಡರೊಬ್ಬರಿಂದ ವಿವದಾತ್ಮಕ ಹೇಳಿಕೆ* ಸುಮಲತಾ ಅಂಬರೀಶ್ ವಿರುದ್ಧ ನಾಲಿಗೆ ಹರಿಬಿಟ್ಟ ಜೆಡಿಎಸ್ ನಾಯಕ* ಸುಮಲತಾ ಅಂಬರೀಶ್ ಅವರನ್ನ ಕೆಆರ್​ಸ್ ಡ್ಯಾಂಗೆ ಅಡ್ಡಡ್ಡ ಮಲಸಬೇಕೆಂದಿದ್ದ ಕುಮಾರಸ್ವಾಮಿ

ಮಂಡ್ಯ, (ಜು.13): ಸುಮಲತಾ ಅಂಬರೀಶ್ ಅವರನ್ನ ಕೆಆರ್​ಸ್ ಡ್ಯಾಂಗೆ ಅಡ್ಡಡ್ಡ ಮಲಸಬೇಕೆಂದು​ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಜೆಡಿಎಸ್ ಮುಖಂಡರೊಬ್ಬರು ಅಂತಹದೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು...ಸಂಸದೆ ಸುಮಲತಾ ಅಂಬರೀಶ್ ಅವರು ಇಷ್ಟು ದಿನ ಎಲ್ಲಿ ಮಲ್ಕೊಂಡಿದ್ದರು ಎಂದು ಮಂಡ್ಯ ನಗರಸಭೆ ಅಧ್ಯಕ್ಷ ಹೆಚ್‌ ಎಸ್ ಮಂಜು ನಾಲಿಗೆ ಹರಿಬಿಟ್ಟಿದ್ದಾರೆ.

KRS ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಏನಿದು ಎಚ್‌ಡಿಕೆ ಮಾತಿನ ಅರ್ಥ?

ಸುಮಲತಾ ವಿರುದ್ಧ ನಡೆದ ಪ್ರತಿಭಟನೆ ಹೆಚ್‌ ಎಸ್ ಮಂಜು ಈ ಮಾತುಗಳನ್ನಾಡಿದ್ದು, ವಿವಾದ ಸೃಷ್ಟಿಸಿದ್ದಾರೆ. ಅಲ್ಲದೇ ಸುಮಲತಾರ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈಗಾಗಲೇ ಕುಮಾರಸ್ವಾಮಿ ಅವರು ಅಡ್ಡಡ್ಡ ಮಲಗಿಸಬೇಕೆಂಬ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಪರ-ವಿರೋಧ ಆರೋಪಗಳು ಆಗಿ ಸೈಲೆಂಟ್ ಆಗಿತ್ತು. ಇದೀಗ ಜೆಡಿಎಸ್‌ ನಾಯಕ, ಸುಮಲತಾ ಇಷ್ಟು ದಿನ ಎಲ್ಲಿ ಮಲ್ಕೊಂಡಿದ್ದರು ಎಂದು ಹೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿಸಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತಿದೋ ಎನ್ನುವುದನ್ನು ಕಾದುನೋಡಬೇಕಿದೆ.