Asianet Suvarna News Asianet Suvarna News

ಮಂಡ್ಯ ಪ್ರವೇಶಿಸಿದ ಜೆಡಿಎಸ್‌ ಪಂಚರತ್ನ ಯಾತ್ರೆ: ಕಾಪ್ಟರ್‌ನಿಂದ ಹೂಮಳೆ

ಜೆಡಿಎಸ್‌ನ ಪಂಚರತ್ನ ಯಾತ್ರೆ ಮಂಗಳವಾರ ರಾಮನಗರ ಜಿಲ್ಲೆಯಿಂದ ಮಂಡ್ಯ ಜಿಲ್ಲೆಗೆ ಆಗಮಿಸಿತು. ಯಾತ್ರೆಯಲ್ಲಿ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

Mandya entered Kumaraswmys JDS Pancharatna Rathayatra gvd
Author
First Published Dec 21, 2022, 11:24 AM IST

ಚನ್ನಪಟ್ಟಣ/ಮಂಡ್ಯ (ಡಿ.21): ಜೆಡಿಎಸ್‌ನ ಪಂಚರತ್ನ ಯಾತ್ರೆ ಮಂಗಳವಾರ ರಾಮನಗರ ಜಿಲ್ಲೆಯಿಂದ ಮಂಡ್ಯ ಜಿಲ್ಲೆಗೆ ಆಗಮಿಸಿತು. ಯಾತ್ರೆಯಲ್ಲಿ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಹಲಗೂರಿನಲ್ಲಿ ಅನಾನಸ್‌ ಹಾರ ಹಾಕಿ ಸ್ವಾಗತ ಕೋರಿದರೆ, ಮಳವಳ್ಳಿಯಲ್ಲಿ ಹೆಲಿಕಾಪ್ಟರ್‌ ಮೂಲಕ ಹೂಮಳೆ ಸುರಿಸಲಾಯಿತು. ನಂತರ, ಮಳವಳ್ಳಿಯಲ್ಲಿ ಕಂದೇಗಾಲ ಗ್ರಾಮದ ಶಿವಮಾದು ಎಂಬುವರು ದಾನವಾಗಿ ನೀಡಿದ ಕೃಷ್ಣ ಎಂಬ ಹೆಸರಿನ ಹಸು ಕರುವಿಗೆ ಪೂಜೆ ಸಲ್ಲಿಸಿದರು. ಮಳವಳ್ಳಿಯ ಗಣೇಶ್‌ ಕಾಂಪ್ಲೆಕ್ಸ್‌ನ ಶಿವಲಿಂಗೇಗೌಡ ಎಂಬುವರು 50 ಸಾವಿರ ರು.ಗಳನ್ನು ದೇಣಿಗೆ ನೀಡಿದರು. ನಂತರ, ಹಾಡ್ಲಿ ಗ್ರಾಮದಲ್ಲಿ 100 ಕೆಜಿ ತೂಕದ ಕೇಕ್‌ ಕತ್ತರಿಸಿ, ಸಂಭ್ರಮಿಸಲಾಯಿತು. ರಾತ್ರಿ ಮಳವಳ್ಳಿಯ ದುಗ್ಗನಹಳ್ಳಿಯಲ್ಲಿ ಅವರು ವಾಸ್ತವ್ಯ ಹೂಡಿದರು.

ಹೃದಯ ಚಿಕಿತ್ಸೆಗೆ ನೆರವಾದ ಕುಮಾರಸ್ವಾಮಿ: ಹಲಗೂರಿನಲ್ಲಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಜಮ್ಮ ಎಂಬುವರು ಚಿಕಿತ್ಸೆಗೆ ಹಣ ಇಲ್ಲದೆ ಕಷ್ಟದಲ್ಲಿರುವುದನ್ನು ತಿಳಿದ ಕುಮಾರಸ್ವಾಮಿ, ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಕರೆ ಮಾಡಿ, ಮಹಿಳೆಯ ಹೃದಯ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು. ಡಾ.ಸಿ.ಎನ್‌.ಮಂಜುನಾಥ್‌ ಅವರು, ಬುಧವಾರ ಬೆಳಗ್ಗೆ ಮಹಿಳೆಯನ್ನು ಆಸ್ಪತ್ರೆಗೆ ಕಳಿಸುವಂತೆ ತಿಳಿಸಿದರು. ನಂತರ, ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗುವಂತೆ ಮಹಿಳೆಗೆ ಕುಮಾರಸ್ವಾಮಿ ಸೂಚಿಸಿದರು.

Ramanagara: ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಕುಮಾ​ರ​ಸ್ವಾಮಿ ಪರೋ​ಕ್ಷ​ ವಾಗ್ದಾಳಿ

ಮಗುವಿಗೆ ನಾಮಕರಣ ಮಾಡಿದ ಎಚ್ಡಿಕೆ: ಮಳವಳ್ಳಿ ಕ್ಷೇತ್ರದ ಬಿ.ಜಿ.ಪುರ ಗ್ರಾಮದ ಮಹೇಶ್‌ ಎಂಬುವರು ತಮ್ಮ ತಂಗಿಯ ಮಗುವಿಗೆ ಕುಮಾರಸ್ವಾಮಿ ಅವರಿಂದ ನಾಮಕರಣ ಮಾಡಿಸಿದರು. ಮುದ್ದಾದ ಮಗುವನ್ನು ಕೈಗೆತ್ತಿಕೊಂಡ ಕುಮಾರಸ್ವಾಮಿ ಆ ಮಗುವಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡಿ, ತಾಯಿ, ಮಗುವಿಗೆ ಶುಭ ಕೋರಿದರು. ಮುಂದಿನ ಚುನಾವಣೆಗೆ 93 ಕ್ಷೇತ್ರಗಳಿಗೆ ಜೆಡಿಎಸ್‌ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಇದರಲ್ಲಿ ಯಾವುದೇ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 

ಈ ವೇಳೆ, ಮಾತನಾಡಿ, ಗುರ್ಮಿಟ್ಕಲ್‌ ಕ್ಷೇತ್ರದ ನಾಗನಗೌಡ ಕಂತ್ಕೂರ್‌ ಅವರು ನನಗೆ ಟಿಕೆಟ್‌ ಬೇಡ. ನನ್ನ ಮಗನಿಗೆ ಕೊಡಿ ಅಂತ ಹೇಳಿದ್ದಾರೆ. ಘೋಷಣೆಯಾದ ಅಭ್ಯರ್ಥಿಗಳು ಸ್ಪರ್ಧೆ ಮಾಡದೆ ಬೇರೆಯವರಿಗೆ ಕೊಡಿ ಎನ್ನುವ ಏಳೆಂಟು ಕ್ಷೇತ್ರಗಳಲ್ಲಿ ಬದಲಾವಣೆಯಾಗುವುದು ಬಿಟ್ಟರೆ ಉಳಿದಂತೆ ಎಲ್ಲ ಕ್ಷೇತ್ರಗಳಲ್ಲೂ ಈಗ ಘೋಷಣೆಯಾಗಿರುವ ಅಭ್ಯರ್ಥಿಗಳೇ ಅಧಿಕೃತ ಅಭ್ಯರ್ಥಿಗಳಾಗಿರುತ್ತಾರೆ ಎಂದರು. ಇದಕ್ಕೂ ಮೊದಲು ಚನ್ನಪಟ್ಟಣದಲ್ಲಿ ಮಾತನಾಡಿ, ಜಿಲ್ಲೆಯ ಜನರು ರಾಜಕೀಯವಾಗಿ ಇಬ್ಬರು ಮಕ್ಕಳನ್ನು ಬೆಳೆಸಿದ್ದಾರೆ. ಒಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಮತ್ತೊಬ್ಬ ನಾನು. ಶಿವಕುಮಾರ್‌ ಸಹ ಸಿಎಂ ಆಗಬೇಕು ಅನ್ನುತ್ತಿದ್ದಾರೆ. ನಾನು ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದೀನಿ. ನಾನು ಮತ್ತೆ ಸಿಎಂ ಆಗಬೇಕು ಅಂತ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಹೇಳುತ್ತಿದ್ದಾರೆ. ಇಬ್ಬರಲ್ಲಿ ಯಾರು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಜನರೇ ತೀರ್ಮಾನಿಸಲಿ ಎಂದರು.

ಫೋಟೋ ವಿಚಾರ ನನಗೆ ಬೇಕಿಲ್ಲ: ಸುವರ್ಣಸೌಧದಲ್ಲಿ ಸಾವರ್ಕರ್‌ ಭಾವಚಿತ್ರ ಅಳವಡಿಸಿರುವ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿ ಅವರು ಆ ವಿಚಾರವನ್ನು ಇಟ್ಟುಕೊಂಡು ಬರಬೇಕು ಅಷ್ಟೇ. ನಾನು ಸಾವರ್ಕರ್‌ ಫೋಟೋಗೆಲ್ಲಾ ಪ್ರಾಮುಖ್ಯತೆ ಕೊಡಲ್ಲ. ದೇಶದ ಪ್ರಜೆಗಳ ಬದುಕನ್ನು ಸರಿಪಡಿಸುವ ಚಿಂತನೆ ನನ್ನದು. ಫೋಟೋ ಹಾಕಬೇಕೋ, ಹಾಕಬಾರದೋ ಎನ್ನುವುದು ನನಗೆ ಬೇಡದ ವಿಚಾರ ಎಂದು ನುಡಿದರು. ಒಕ್ಕಲಿಗ ಸಮುದಾಯದ ಸಭೆಗೆ ಜೆಡಿಎಸ್‌ ಗೈರಾಗಿರುವ ವಿಚಾರವಾಗಿ, ನಾನು ಸ್ವಾಮೀಜಿಗಳಿಗೆ ದೂರವಾಣಿ ಮುಖಾಂತರ ಮಾತಾನಾಡಿದ್ದೇನೆ. 

Pancharatna Rathayatra: ನಿಮ್ಮ ಮಡಿಲಿಗೆ ನಿಖಿಲ್‌ ಹಾಕಿದ್ದೇನೆ, ಮನೆ ಮಗನಂತೆ ಬೆಳೆಸಿ: ಎಚ್‌.ಡಿ.ಕುಮಾ​ರ​ಸ್ವಾಮಿ

ಮೀಸಲಾತಿ ಬಗ್ಗೆಯೂ ಸಹ ಮಾತನಾಡಿದ್ದೇನೆ. ಕಾಂಗ್ರೆಸ್‌ವರಿಗೆ ಅಭಿವೃದ್ಧಿ ವಿಚಾರ ಮಾತನಾಡಲು ಆಗೋಲ್ಲ. ಅವರು ಈ ರೀತಿ ವಿಚಾರಗಳನ್ನಷ್ಟೇ ಮಾತನಾಡೋದು. ಮುಂದೆ ನಮ್ಮ ಕೈಗೆ ಸರ್ಕಾರ ಕೊಟ್ಟರೆ ಏನು ಮಾಡುತ್ತೇವೆ ಎಂದು ಅವರಿಗೆ ಗೊತ್ತಿಲ್ಲ ಎಂದು ಛೇಡಿಸಿದರು. ಮಂಡ್ಯ ಜಿಲ್ಲೆಯ ಜನತೆ ಮೊದಲಿನಿಂದಲೂ ಜೆಡಿಎಸ್‌ಗೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಮಂಡ್ಯ ಜಿಲ್ಲೆ ಜನ ಮಣ್ಣಿನ ಮಕ್ಕಳ ಸರ್ಕಾರ ತರಲು ನಿರ್ಧಾರ ಮಾಡಿದ್ದಾರೆ ಎಂದು ನುಡಿದರು.

Follow Us:
Download App:
  • android
  • ios