ಕಾಂಗ್ರೆಸ್‌ ತೆಕ್ಕೆಗೆ ಒಲಿದ ಮನ್‌ಮುಲ್‌ ಅಧ್ಯಕ್ಷ ಗಾದಿ: ಯುದ್ಧಕ್ಕೂ ಮುನ್ನ ಜೆಡಿಎಸ್‌ ಶಸ್ತ್ರತ್ಯಾಗ

ರಾಜ್ಯದ ಪ್ರಮುಖ ಸಹಕಾರಿ ಸಂಘವಾದ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ (ಮನ್‌ಮುಲ್‌) ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಬೋರೇಗೌಡ ಗೆಲುವು ಸಾಧಿಸಿದ್ದಾರೆ.

Mandya Congress win MANMUL President seat JDS arming before war sat

ಮಂಡ್ಯ (ಜು.24): ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳದ ವಿಭಾಗವಾದ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಒಕ್ಕೂಟ ನಿಯಮಿತ (MANMUL) ಅಧ್ಯಕ್ಷ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ಅಭ್ಯರ್ಥಿ ಜಯಗಳಿಸಿದ್ದಾರೆ. ಮಂಡ್ಯ ಜಿಲ್ಲಾ ರಾಜಕಾರಣಿಗಳ ಪ್ರತಿಷ್ಠಿತ ಕಣವಾದ ಮನ್‌ಮುಲ್‌ ಅನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂದಿದೆ. 

ಮಂಡ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ ಮನ್‌ ಮುಲ್‌ (Mandya District Co-operative Milk Producers Society's Union Limited- MANMUL) ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ. ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಮನ್ಮುಲ್ ಅಧಿಕಾರ ಹಿಡಿದಿದೆ. ಜೆಡಿಎಸ್, ಬಿಜೆಪಿ ಮೈತ್ರಿಗೆ ಸೆಡ್ಡು ಹೊಡೆದು ಕಾಂಗ್ರೆಸ್‌ ಅಧಿಕಾರ ಹಿಡಿದಿದ್ದು, ಪ್ರಭಲ ಪೈಪೋಟಿ ಒಡ್ಡಿದ್ದ ಜೆಡಿಎಸ್‌ಗೆ ಭಾರಿ ಹಿನ್ನಡೆ ಉಂಟಾಗಿದೆ. ಜೊತೆಗೆ, ಆಡಳಿತಾರೂಢ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ. ಬರೋಬ್ಬರಿ 9 ಮತಗಳನ್ನ ಪಡೆದ ಬೋರೇಗೌಡ ಅವರು  ಮನ್ಮುಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Breaking: ಕಾಂಗ್ರೆಸ್‌ ಸರ್ಕಾರ ಬೀಳಿಸಲು ವಿದೇಶದಲ್ಲಿ ಷಡ್ಯಂತ್ರ; ಡಿಸಿಎಂ ಡಿ.ಕೆ. ಶಿವಕುಮಾರ್

ಮತದಾನದಿಂದ ದೂರ ಉಳಿದ ಜೆಡಿಎಸ್‌ ನಿರ್ದೇಶಕರು: ಇನ್ನು ಮನ್‌ಮುಲ್‌ ಅಧ್ಯಕ್ಷ ಚುನಾವಣೆಯಲ್ಲಿ ಸೋಲಿನ  ಸುಳಿವು ಅರಿತು ಜೆಡಿಎಸ್ ನಿರ್ದೇಶಕರು ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದಿದ್ದರು. ಬಿಜೆಪಿಯ ಬೆಂಬಲಿತ ಅಭ್ಯರ್ಥಿ ಎಸ್.ಪಿ.ಸ್ವಾಮಿ ಮತದಾನ ಪ್ರಕ್ರಿಯೆಗೆ ಭಾಗಿಯಾಗಿದ್ದರು. ಉಳಿದಂತೆ ಮೂವರು ಅಧಿಕಾರಿಗಳು, ಓರ್ವ ನಾಮ ನಿರ್ದೇಶಕ ಸದಸ್ಯ ಹಾಗೂ 5 ಮಂದಿ ಚುನಾಯಿತ ನಿರ್ದೇಶಕರು ಸೇರಿ 9 ಮಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ನಾಮಪತ್ರ ಸಲ್ಲಿಸಿಯೂ ಮತದಾನ ಪ್ರಕ್ರಿಯೆಗೆ ಜೆಡಿಎಸ್ ನಿರ್ದೇಶಕರು ಗೈರಾಗಿದ್ದಾರೆ. ಇಬ್ಬರು ಜೆಡಿಎಸ್ ನಿರ್ದೇಶಕನ್ನ ಅನರ್ಹಗೊಳಿಸಿದ್ದ ಹಿನ್ನೆಲೆಯಲ್ಲಿ ಮತದಾನಕ್ಕೆ ಗೈರಾಗಿದ್ದಾರೆ. ಚುನಾವಣೆಯ ಮತದಾನದ ಯುದ್ಧಕ್ಕೂ ಮುನ್ನವೇ ಜೆಡಿಎಸ್‌ ನಿರ್ದೇಶಕರು ಶಸ್ತ್ರತ್ಯಾಗ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಾಲು ದರ ಹೆಚ್ಚಳ, ಸಿಎಂ ತೀರ್ಮಾನವೇ ಅಂತಿಮ: ಸಚಿವ ಚಲುವರಾಯಸ್ವಾಮಿ

ಚಲಾವಣೆಯಾದ ಎಲ್ಲ ಮತಗಳನ್ನು ಪಡೆದ ಬೋರೇಗೌಡ: ಮನ್‌ಮುಲ್‌ ಚುನಾವಣೆಗೆ ಜೆಡಿಎಸ್ ನಿಂದ ಮೂವರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಮತದಾನಕ್ಕೂ ಮುನ್ನವೇ ಜೆಡಿಎಸ್ ನ ವಿಶ್ವನಾಥ್ ಹಾಗೂ ರಾಮಚಂದ್ರ ಅವರನ್ನ ಅನರ್ಹಗೊಳಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಅಂದರೆ ಮೂವರ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತವಾಗಿತ್ತು. ಬಳಿಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನ ಬೋರೇಗೌಡಗೆ 9 ಮತ ಚಲಾವಣೆಯಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದ 9 ಮಂದಿಯೂ ಬೋರೇಗೌಡ ಪರ ವೋಟಿಂಗ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios