ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ ಪ್ರಕರಣ ವೈಯಕ್ತಿಕ ಎಂಬ ಸಿಎಂ ಹೇಳಿಕೆಗೆ ಎಚ್‌ಡಿಕೆ ಕಿಡಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನ ಸರ್ಕಾರ ಅಂತಾ ಕರೆಯುತ್ತೀರಾ? ಆಡಳಿತ ನಡೆಯುತ್ತಿದೆಯೇ? ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Hubballi Neha hiremath murder case karnataka former CM HD Kumaraswamy outraged against congress govt rav

ಚಿತ್ರದುರ್ಗ (ಏ.19): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನ ಸರ್ಕಾರ ಅಂತಾ ಕರೆಯುತ್ತೀರಾ? ಆಡಳಿತ ನಡೆಯುತ್ತಿದೆಯೇ? ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಚಿತ್ರದುರ್ಗದ ಪರಶುರಾಂಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ವೈಯಕ್ತಿಕ ಎಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ನೇಹಾ ಹಿರೇಮಠ ಕೊಲೆ ಪ್ರಕರಣ ಸತ್ಯಾಂಶ ಏನಿದೆ ಅದು ಹೊರಗೆ ಬರಲಿ ಎಂದು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಹತ್ಯೆ ಪ್ರಕರಣ; ಕಿಮ್ಸ್ ಶವಾಗಾರಕ್ಕೆ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ

ರಾಜ್ಯದಲ್ಲಿ ನಿನ್ನೆಯಷ್ಟೇ ನಾಲ್ಕು ಕಡೆ ಕೊಲೆಗಳಾಗಿವೆ. ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿದೆ. ಮಲಗಿದ್ದ ವೇಳೆ ರಾಜಾರೋಷವಾಗಿ ನಾಲ್ವರ ಹತ್ಯೆಗಳು ನಡೆದಿವೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಬಳಿಕ ಸಮಾಜಘಾತಕರಿಗೆ ಯಾರ ಭಯ ಇಲ್ಲದಂತಾಗಿದೆ. ಇದೀಗ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಸರ್ಕಾರ ಲಘುವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಘಟನೆಗೆ ಕಾರಣರಾದವರ ವಿರುದ್ಧ ಸರಿಯಾಗಿ ತನಿಖೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಈ ರಾಜ್ಯವನ್ನ ಎಲ್ಲಿಗೆ ತೆಗೆದುಕೊಂಡು ಹೋಗಿ ಮುಟ್ಟಿಸುತ್ತಾರೋ ಅಂತಾ ಜನರು ಯೋಚಿಸುತ್ತಿದ್ದಾರೆ. ಕೇವಲ ವೋಟ್‌ಗಾಗಿ ಒಂದು ವರ್ಗವನ್ನು ಈ ಪರಿ ಒಲೈಕೆ ಮಾಡುತ್ತಿದೆ ಎಂದು ನಿಜಕ್ಕೂ ಕೊಲೆಗಡುಕರಿಗಿಂತ ಅಪಾಯಕಾರಿಯಾಗಿದೆ. ತಮ್ಮ ಅಧಿಕಾರಕ್ಕಾಗಿ ಒಂದು ವರ್ಗದ ಮತ ಪಡೆದು ಸಮಾಜ ಹಾಳು ಮಾಡುವ ಕೆಲಸಕ್ಕೆ ಕೈಹಾಕಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕು ಸಮೇತ ಕಾಲೇಜು ಕ್ಯಾಂಪಸ್‌ನೊಳಗೆ ನುಗ್ಗಿದ್ದ ಆರೋಪಿ ಫಯಾಜ್, ನೇಹಾ ಹಿರೇಮಠ ಕುತ್ತಿಗೆಗೆ ಮನಬಂದಂತೆ ಚಾಕು ಇರಿದು ಹತ್ಯೆ ಮಾಡಿದ್ದ. ಈಗ ಘಟನೆ ಭಯಾನಕ ದೃಶ್ಯ ಸಿಸಿಟಿವಿ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದ ನೆಟ್ಟಿಗರು. ಇಷ್ಟೆಲ್ಲ ಕಣ್ಣುಮುಂದೆ ನಡೆದರೂ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಆತಂಕ ಹುಟ್ಟಿಸುತ್ತಿದೆ.

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳು ಲವ್ ಜಿಹಾದ್‌ಗೆ ಬಲಿ? 9 ಬಾರಿ ಚಾಕು ಇರಿದ ಆರೋಪಿ ಫಯಾಜ್!

ಸ್ವತಃ ಮೃತ ವಿದ್ಯಾರ್ಥಿನಿ ಕುಟುಂಬಸ್ಥರೇ ಮಗಳಿಗೆ ಯಾವುದೇ ಲವ್ ಆಫೇರ್ ಇರಲಿಲ್ಲವೆಂದಿದ್ದರೂ ಹೀಗಿದ್ದರೂ ಗೃಹ ಸಚಿವರು ಲವ್ ಜಿಹಾದ್ ಅಲ್ಲ, ಲವ್ ಘಟನೆ ಅಂತಾ ತಿಪ್ಪೆ ಸಾರಿಸುವ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದಲೇ ಪ್ರಕರಣ ಮುಂದೆ ಏನಾಗುತ್ತದೆ ಎಂಬುದನ್ನು ಅಂದಾಜಿಸಬಹುದಾಗಿ ಎಂದು ನೆಟ್ಟಿಗರು ಸಹ ಕಾಂಗ್ರೆಸ್ ಸರ್ಕಾರ ಕೆಟ್ಟ ಓಲೈಕೆ ರಾಜಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios