ಇಂಡಿಯಾ ಕೂಟದ ನಾಯಕರು ಮೊಘಲರಂತೆ ವರ್ತಿಸುತ್ತಿದ್ದಾರೆ: ನರೇಂದ್ರ ಮೋದಿ
ಇಂಡಿಯಾ ಕೂಟದ ಕೆಲ ಹಿರಿಯ ನಾಯಕರು ನವರಾತ್ರಿ ಮತ್ತು ಹಬ್ಬಗಳ ಋತುವಾದ ಶ್ರಾವಣದಲ್ಲಿ ಮಾಂಸಾಹಾರವನ್ನು ಸೇವಿಸುವುದಷ್ಟೇ ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಸಂಖ್ಯಾತ ಭಾರತೀಯರ ಭಾವನೆಗೆ ಧಕ್ಕೆ ಉಂಟು ಮಾಡುವಲ್ಲಿ ಆನಂದ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಉಧಾಂಪುರ: ಇಂಡಿಯಾ ಕೂಟದ ಕೆಲ ಹಿರಿಯ ನಾಯಕರು ನವರಾತ್ರಿ ಮತ್ತು ಹಬ್ಬಗಳ ಋತುವಾದ ಶ್ರಾವಣದಲ್ಲಿ ಮಾಂಸಾಹಾರವನ್ನು ಸೇವಿಸುವುದಷ್ಟೇ ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಸಂಖ್ಯಾತ ಭಾರತೀಯರ ಭಾವನೆಗೆ ಧಕ್ಕೆ ಉಂಟು ಮಾಡುವಲ್ಲಿ ಆನಂದ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಈ ಮೂಲಕ 2 ದಿನದ ಹಿಂದೆ ಮೀನು ತಿನ್ನುವ ವಿಡಿಯೋ ಬಿಡುಗಡೆ ಮಾಡಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಹಾಗೂ ರಾಹುಲ್ ಗಾಂಧಿ ಮಟನ್ ಬೇಯಿಸಿದ ದೃಶ್ಯದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಕಾಶಿ ದೇಗುಲದಲ್ಲಿ ಕೇಸರಿಧಾರಿ ಪೊಲೀಸರು, ಅಖಿಲೇಶ್ ಯಾದವ ಆಕ್ರೋಶ
ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಮೊಘಲರು ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ಮಾಡಿ ವಿಕೃತ ಆನಂದ ಪಡೆಯುತ್ತಿದ್ದರು. ಅದೇ ರೀತಿ ಇಂಡಿಯಾ ಕೂಟದ ನಾಯಕರೂ ಸಹ ಭಾರತೀಯರ ಸಂಸ್ಕೃತಿಗೆ ಧಕ್ಕೆ ಮಾಡುವ ಮೂಲಕ ವಿಕೃತ ಆನಂದ ಮೆರೆಯುತ್ತಿದ್ದಾರೆ. ಅವರು ಹಿಂದೂಗಳ ಪವಿತ್ರ ಹಬ್ಬವಾದ ನವರಾತ್ರಿ ಸಮಯದಲ್ಲಿ ಮತ್ತು ಹಬ್ಬಗಳ ಋತುವಾದ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುತ್ತಾರೆ. ಅದನ್ನು ಸೇವಿಸಲು ಯಾರೂ ಅವರನ್ನು ತಡೆದಿಲ್ಲ. ಆದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಅದರ ಹಿಂದಿನ ಉದ್ದೇಶ ಸ್ಪಷ್ಟವಾಗುತ್ತದೆ’ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನಲ್ಲಿ ಬದಲಾವಣೆ; ಸ್ಥಳ, ಸಮಯದ ಮಾಹಿತಿ ಇಲ್ಲಿದೆ
ಏನಿದು ಪ್ರಕರಣ?
ರಾಹುಲ್ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಶ್ರಾವಣ ಮಾಸದಲ್ಲಿ ಮಟನ್ ಬೇಯಿಸಿ ಸೇವಿಸುತ್ತಿದ್ದ ದೃಶ್ಯಾವಳಿ ವೈರಲ್ ಆಗಿತ್ತು. ಇದು ವ್ಯಾಪಕವಾಗಿ ಜನಾಕ್ರೋಶಕ್ಕೂ ಕಾರಣವಾಗಿತ್ತು. ತೇಜಸ್ವಿ ಯಾದವ್ ಕೂಡ ಮೊನ್ನೆ ಹೆಲಿಕಾಪ್ಟರ್‌ನಲ್ಲಿ ಮೀನು ತಿನ್ನುವ ವಿಡಿಯೋ ಬಿಡುಗಡೆ ಮಾಡಿದದ್ದರು.