Asianet Suvarna News Asianet Suvarna News

'ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಅಂಬೇಡ್ಕರ್‌'

ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಕಲ್ಯಾಣ ನಾಡಿನ ಅಂಬೇಡ್ಕರ್‌ ಎಂದು ಹೋಲಿಕೆ ಮಾಡಿ ಸಂಬೋಧಿಸಿದ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್‌ 

Mallikarjun Kharge Ambedkar of Kalyana Karnataka grg
Author
First Published Dec 11, 2022, 9:00 PM IST

ಕಲಬುರಗಿ(ಡಿ.11): ಕಲಬುರಗಿಯಲ್ಲಿ ಶನಿವಾರ ನಡೆದ ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್‌ ಅವರು ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಕಲ್ಯಾಣ ನಾಡಿನ ಅಂಬೇಡ್ಕರ್‌ ಎಂದು ಹೋಲಿಕೆ ಮಾಡಿ ಸಂಬೋಧಿಸಿದರು. ಭಾರತಕ್ಕೆ ಸಂವಿಧಾನ ನೀಡಿದವರು ಅಂಬೇಡ್ಕರ್‌, ಕಲ್ಯಾಣ ನಾಡಿಗೆ ಕಲಂ 371 (ಜೆ) ಸಂವಿಧಾನದ ವಿಶೇಷ ರಕ್ಷಣೆ ಕೊಟ್ಟವರು ಡಾ. ಖರ್ಗೆ. ಹೀಗಾಗಿ ಇವರು ಕಲ್ಯಾಣದ ಅಂಬೇಡ್ಕರ್‌ ಎಂದಾಗ ಸೇರಿದ್ದ ಜನಸ್ತೋಮ ಜೈಘೋಷ ಹಾಕಿತ್ತು.

2) ಖಡ್ಗ ಝಳುಪಿಸಿದ ಖರ್ಗೆ!

ಕಲ್ಯಾಣ ಕ್ರಾಂತಿ ವೇದಿಕೆಯಲ್ಲಿ ರಾಯಚೂರು ಕಾಂಗ್ರೆಸ್‌ ಮುಖಂಡ ಬೋಸರಾಜು ಅವರು ಬೆಳ್ಳಿ ತಲವಾರ್‌ ಖರ್ಗೆಯವರಿಗೆ ಕೊಡುಗೆ ರೂಪಿದಲ್ಲಿ ನೀಡಿದಾಗ ಅದನ್ನು ಕೈಯಲ್ಲಿ ತೆಗೆದುಕೊಂಡವರೇ ಖರ್ಗೆ ಒಂದು ಕೈಯಲ್ಲ ಅದನ್ನೆತ್ತಿ ಝಳುಪಿಸುತ್ತ ಜನರತ್ತ ಕೈ ಬೀಸಿದಾಗ ಸೇರಿದ್ದ ಜನತೆ ಹೋ... ಎಂದು ಕೂಗುತ್ತ ಖರ್ಗೆಯವರಿಗೆ ಜಯಘೋಷ ಹಾಕಿದರು. ಕಲಬುರಗಿ ಯುವ ಅಭಿಮಾನಿಗಳು ಇದೇ ವೇದಿಕೆಯಲ್ಲಿ ಖರ್ಗೆಯವರಿಗೆ ಬೆಳ್ಳಿ ಗದೆ ನೀಡಿ ಗಮನ ಸೆಳೆದರು.

ಕಲಬುರಗಿಯಲ್ಲಿ ಕಾಂಗ್ರೆಸ್‌ ಭಾರಿ ಶಕ್ತಿ ಪ್ರದರ್ಶನ: ಖರ್ಗೆ ಸ್ವಾಗತಕ್ಕೆ ‘ಕಲ್ಯಾಣ ಕ್ರಾಂತಿ’ ಸಮಾವೇಶ

3) ಕೇಳಿಸದೆ ಕಲ್ಲು ಕಲ್ಲಿನಲಿ ಖರ್ಗೆ ಧ್ವನಿ!

ಕಾಂಗ್ರೆಸ್‌ ಮುಖಂಡ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿ ಎಚ್‌ಕೆ ಪಾಟೀಲ್‌ ತಮ್ಮ ಮಾತಲ್ಲಿ ಕಲಬಬುರಗಿ ಸೇರಿದಂತೆ ಕಲ್ಯಾಣ ಭಾಗದಲ್ಲಿರುವ ಪ್ರತಿಯೊಂದು ಅಭಿವೃದ್ಧಿ ಯೋಜನೆ, ಕಾಮಗಾರಿಗಳು, ಕಟ್ಟಡಗ ಹಿಂದೆ ಖರ್ಗೆ ಛಾಪು ಇದೆ ಎಂದು ಹೇಳುತ್ತಲೇ ಇಲ್ಲಿನ ಪ್ರತಿಯೊಂದು ಸರ್ಕಾರಿ ಕಟ್ಟಡಗಳ ಕಲ್ಲು ಖರ್ಗೆ ಹೆಸರನ್ನೇ ಪಿಸುಗುಟ್ಟುತ್ತಿವೆ ಎಂದಾಗಲೂ ಸೇರಿದ್ದ ಜನ ಖರ್ಗೆ ಪರ ಕಾಂಗ್ರೆಸ್‌ ಪರ ಜಯಗೋಷ ಹಾಕಿದರು. ಕಳೆದ 15 ವರ್ಷಗಳ ಹಿಂದಿನ ಕಲಬುರಗಿಗೂ ಈಗಿನ ಕಲಬುರಗಿಗೂ ಭಾರಿ ವ್ಯತ್ಯಾಸವಾಗಿದೆ. ಇದೀಗ ಕಲಬುರಗಿ ಸುದಾರಣೆಆಗಿದೆ. ಅದರ ಹಿಂದೆ ಖರ್ಗೆ ಕೈವಾಡವಿದೆ ಎಂದು ಹೇಳಿದಾಗ ಸೇರಿದ್ದ ಜನ ’ಕೇಳಿಸದೆ ಕಲ್ಲು ಕಲ್ಲಿನಲಿ ಖರ್ಗೆ ಧ್ವನಿ’ ಎಂದು ಮೆಲ್ಲಗೆ ಉಸುರಿದ್ದು ಕೇಳಿಬಂತು.

4) ಐತಿಹಾಸಿಕ ಘಟನಾವಳಿಗಳಿಗೆ ಎನ್‌ವಿ ಗ್ರೌಂಡ್‌ ಸಾಕ್ಷಿ!

ಕಾಂಗ್ರೆಸ್‌ನ ಕಲ್ಯಾಣ ಕ3ಆಂತಿ ಸಮಾವೇಶ ನಡೆದ ನೂತನ ವಿದ್ಯಾಲಯ ಮೈದಾನ ಕಾಂಗ್ರೆಸ್‌ ಪಕ್ಷದ ಬೆಳವಣಿಗೆಗೆ ಸಂಂಬಂಧಿಸಿದಂತಹ ಹಲವಾರು ಐತಿಹಾಸಿಕ ಘಟನಾವಳಿಗೆ ಕಾರಣವಾಗಿದ್ದನ್ನ ಎಲ್ಲರೂ ಸ್ಮರಿಸಿದರು. ರಣದೀಪಸಿಂಗ್‌ ಸುರ್ಜೆವಾಲಾ ಮಾತನಾಡುತ್ತ ಸಮಾವೇಶದ ಈ ಮೈದಾನದಲ್ಲೇ ಖರ್ಗೆಯವರು ಶಾಲಾ ದಿನಗಳಲ್ಲಿ ಹಾಕಿ ಆಡುತ್ತಿದ್ದರು. ಇಲ್ಲಿಂದಲೇ ಎಐಸಿಸಿ ತಲುಪಿದ್ದಾರೆಂದು ಕೊಂಡಾಡಿದರೆ, ಇನ್ನೂ ಅನೇಕರು ಕಲಂ 371 (ಜೆ) ಅನುಷ್ಠಾನದ ಭರವಸೆ ಸೋನಿಯಾ, ರಾಹುಲ್‌ ಗಾಂಧಿ ನೀಈಡಿದ್ದು ಇದೇ ಮೈದಾನದಲ್ಲಿ ಎಂದು ಸ್ಮರಿಸಿದರು. ಖರ್ಗೆಯವರೂ ತಮ್ಮ ಹಾಗೂ ಎನ್‌ವಿ ಮೈದಾನದ ನಂಟನ್ನು ಹೇಳುತ್ತ ಕಲಂ 371 (ಜೆ) ಕುರಿತಂತೆ ವಾಗ್ದಾನ, ಅನುಷ್ಠಾನಕೆಕ್ಲೆಲ ಎನ್‌ವಿ ಮೈದಾನವೇ ಸಾಕ್ಷಿಯಾಯ್ತು ಎಂದು ವಿವರಿಸಿದ್ದು ಸೇರಿದ್ದ ಜನಮನದಲ್ಲಿ ಸಮಾವೇಶ ನಡೆದ, ತಾವು ಕುಳಿತಂತಹ ಎನ್‌ವಿ ಗ್ರೌಂಡ್‌ ಬಗ್ಗೆ ಹೆಮ್ಮೆಯ ಭಾವ ಉಕ್ಕಿತ್ತು.

5) ಯುವಕರ ಗುಂಪಿನ ನಿರಂತರ ಕಿರುಚಾಟಕ್ಕೆ ಸಿದ್ರಾಮಯ್ಯ- ಖರ್ಗೆ ಸಿಡಿಮಿಡಿ

ಸಮಾವೇಶದಲ್ಲಿ ಯುವಕರ ಗುಂಪೊಂದು ನಿರಂತರ ಕೂಗೋದರಲ್ಲಿ, ಕಿರುಚೋದರಲ್ಲಿ ತೊಡಗಿದ್ದು ಸಿದ್ದರಾಮಯ್ಯ ಹಾಗೂ ಖರ್ಗೆಯವರ ಸಿಡಿಮಿಡಿಗೆ ಕಾರಣವಾಯ್ತು. ಸಿದ್ದರಾಮಯ್ಯನವರಂತೂ ತಮ್ಮ ಮಾತುಗಳನ್ನೇ ನಿಲ್ಲಿಸಿ ಸಾಕ್ರಪ್ಪ ನಿಲ್ಸಿ, ಕೂಗೋದನ್ನ... ನಿಮ್ದು ಅತಿಯಾಯ್ತು. ಎಲ್ಲಾಕ್ಕು ಮಿತಿ ಇರಬೇಕು, ನಿಲ್ಸಿ ಸಾಕು... ಎಂದು ಗದರಿದ್ದರು. ಖರ್ಗೆಯವರೂ ಸಹ ಇದೇ ರೀತಿ ಸಿಡಿಮಿಡಿಗೊಂಡಾಗ ಖುದ್ದು ಪ್ರಿಯಾಂಕ್‌ ಖರ್ಗೆ, ಡಾ. ಶರಣ ಪಾಟೀಲ್‌, ಡಾ. ಅಜಯ್‌ ಸಿಂಗ್‌ ಮೊದಲಾದವರು ಗುಂಪು ಇದ್ದಲ್ಲಿಗೆ ಹೋಗಿ ಸಮಾಧಾನಮಾಡುವಲ್ಲಿ ಸಾಕುಬೇಕಾಯ್ತು. ಈ ಗುಂಪು ಯಾರೇ ಭಾಷಣಕ್ಕೆ ಬರಲಿ, ಖರ್ಗೆ ಖರ್ಗೆ ಎಂದೂ, ಸಿದ್ದು ಸಿದ್ದು ಎಂದೇ ನಿರಂತರ ಕೂಗುತ್ತಿರೋದು ಸೇರ್ದಿವರೆಲ್ಲರಿಗೂ ರೇಜಿಗೆಗೆ ಕಾರಣವಾಗಿತ್ತು.

6) ಕಾರ್ಯಕ್ರಮ ನಿರೂಪಣೆಗೆ ಡಾಕ್ಟರ್‌ ದ್ವಯರಲ್ಲಿ ಸ್ಪರ್ಧೆ!

ಖರ್ಗೆಯವರನ್ನು ಸ್ವಾಗಿಸುವ ಹಾಗೂ ಕಲ್ಯಾಣ ಕ್ರಾಂತಿ ಜನಶಕ್ತಿ ಸಮಾವೇಶ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಸಮಾರಂಭದ ಭವ್ಯ ವೇದಿಕೆಯಲ್ಲಿ ನಿರೂಪಣೆ ಮಾಡುವುದೇ ಸವಾಲು. ಅದನ್ನು ಹಾಗೆಯೇ ಸ್ವೀಕರಿಸಿದ್ದ ಜೇವರ್ಗಿ ಶಾಸಕ ಡಾ. ಅಜಯ್‌ ಸಿಂಗ್‌ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ತಮ್ಮ ನಿರೂಪಣೆ ಶುರು ಮಾಡಿದ್ದರೂ ಸಹ ಮಧ್ಯದಲ್ಲಿ ಸೇಡಂ ಮಾಜಿ ಶಾಸಕರು, ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌ ಪ್ರತ್ಯಕ್ಷರಾಗಿ ಸೂಚನೆ ನೀಡುವ, ತಾವೂ ನಿರೂಪಣೆ ಮಾಡಲು ಶುರು ಮಾಡಿದಾಗ ಸೇರಿದ್ದವರಿಗೆ ಅದೊಂಥರಾ ಕಾಂಪಿಟೇಷನ್‌ ರೂಪದಲ್ಲಿ ಗೋಚರಿಸಿ ಗಮನ ಸೆಳೆಯಿತು. ಸಮಯ ತುಂಬಾ ಆಗಿದೆಎಂದು ಒಂದೊಂದೇ ಲೈನ್‌ನಲ್ಲಿ ಹೆಸರು ಡಾ. ಶರಣ ಪ್ರತಕಾಶ ಹೇಳಿ ಮುಗಿಸುತ್ತಿದ್ದರೆ, ಡಾ. ಅಜಯ್‌ ಸಿಂಗ್‌ ನಾಲ್ಕು ಲೈನ್‌ ಗಣ್ಯರ ಬಗ್ಗೆ ಹೇಳುತ್ತ ಮಾತಿಗೆ ಕರೆದರು.

ಕಚ್ಚಾಟ ನಿಲ್ಲಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನಿ: ಖರ್ಗೆ ಖಡಕ್‌ ಸಂದೇಶ

7) ಜಂಬೋ ವೇದಿಕೆ, ಯಾರೂ ಹೆಸರೂ ಹೇಳಬ್ಯಾಡ್ರಿ!

ಖರ್ಗೆಯವರ ಮೆರವಮಿಗೆ ವಿಳಂಬವಾಗಿ ಅವರು ಮುಖ್ಯ ವೇದಿಕೆ ಸಮಾರಂಭಕ್ಕೆ ಬರೋದು ತುಂಬ ವಿಳಂಬವಾದಾಗ ಹಲವಾರು ಚಿತ್ರ ವಿಚಿತ್ರ ಫಾರ್ಮಾನುಗಳು ನಿರೂಪಕರಿಂದ ವೇಇಕೆಯ ಮೇಲಿದ್ದವರು, ಕೆಳಗಿದ್ದವರೆಲ್ಲರೂ ಕೇಳಿ ನಕ್ಕು ಸುಸ್ತಾದರು. 200 ಜನರಷ್ಟುವಿಐಪಿಗಳೇ ಇದ್ದ ವೇದಿಕೆಯಲ್ಲಿ ಯಾರೇ ಭಾಷಣ ಶುರು ಮಾಡಿದರೂ ಅವರೆಲ್ಲರ ಹೆಸರು ಹೇಳಲೇಬೇಕು ತಾನೆ ಅಲ್ಲೇ ಸಮಯ ಭಾರಿ ವಿಳಂಬವಾಗೋದನ್ನ ಗಮನಿಸಿದ ನಿರೂಪಕ ಡಾ. ಶರಣ ಪಾಟೀಲ್‌ ನೇರವಾಗಿ ಮಾತಿಗೆ ಬನ್ನಿ, ಹೆಸರು ಹೇಳೋದು ಬೇಡ ಎಂದು ಫರ್ಮಾನು ಹೊರಡಿಸಿಬಿಟ್ಟರು. ಆರೆ ಖರ್ಗೆಯವರು ತಮ್ಮ ಮಾತಿಗೂ ಮುನ್ನ ವೇದಿಕೆಯಲ್ಲಿದ್ದವರ ಲಿಸ್ಟ್‌ ಕೇಳಿದ್ದೇ ಬಂತು. ಯಾರೂ ಜಂಬೋ ಲಿಸ್ಟ್‌ ಸಿದ್ಧಮಾಡಿರಲೇ ಇಲ್ಲ!

8) ಸಿನಿಯರ್‌ ಖರ್ಗೆ ಕುರ್ಚಿಯಲ್ಲಿ ’ಜ್ಯೂನಿಯರ್‌’ ಖರ್ಗೆ ಪ್ರತ್ಯಕ್ಷ..!

ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಡಾ. ಖರ್ಗೆ ಮಧ್ಯ ಕುಳಿತು ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಎಡಬಲ ಉಳಿತಿದ್ದರು. ಮುಖಂಡರ ಮಾತು ಶುರುವಾಗುತ್ತಿದ್ದಂತೆಯೇ ಡಾ. ಖರ್ಗೆಯವರಿಗೆ ಫೋನ್‌ ಕರೆಯೊಂದು ಬಂದಾಗ ಅವರು ಪಕ್ಕದಲ್ಲೇ ಕುಳಿತಿದ್ದ ರಣದೀಪ ಸಿಂಗ್‌ ಸುರ್ಜೆವಾಲಾ ಅವರನ್ನು ಕರೆದುಕೊಂಡು ವೇದಿಕೆ ಹಿಂದೆ ಹೋಗಿಬಿಟ್ಟರು. ಸುಮಾರು ಹೊತ್ತಾದರೂ ಬರಲೇ ಇಲ್ಲ. ಸಿದ್ದರಾಮಯ್ಯನವರೂ ತಮ್ಮ ಮಾತಿನ ಸರತಿ ಬಂದಾಗಲೂ ಡಾ. ಖರ್ಗೆ ಬಾರದ್ದನ್ನು ಗಮನಿಸಿ ವಿಚಾರಿಸಿದ್ದರು. ಈ ಹಂತದಲ್ಲೇ ಜ್ಯೂನಿಯರ್‌ ಖರ್ಗೆ ಪ್ರಿಯಾಂಕ್‌ ವೇದಿಕೆಯಲ್ಲೇ ಉಸ್ತುವಾರಿ ಹೊತ್ತು ಓಡಾಡುತ್ತಿದ್ದವರು ಡಿಕೆಶಿ ಹಾಗೂ ಸಿದ್ದು ನಡುವೆ ಖಾಲಿ ಇದ್ದಂತಹ ಕುರ್ಚಿಯಲ್ಲಿ ತುಂಬ ಹೊತ್ತು ಕುಳಿತದ್ದು ಕಂಡುಬಂತು. ಅನೇಕರು ಇದನ್ನು ಗಮನಿಸಿ ದೊಡ್ಡ ಸಾಬ್ರು ಕುರ್ಚಿಯಲ್ಲಿ ಸಣ್ಣ ಸಾಬ್ರು ಕುಂತಾರ ನೋಡ್ರಿ... ಎಂದು ಚರ್ಚಿಸಿದರು.

Follow Us:
Download App:
  • android
  • ios