ಕಲಬುರಗಿಯಲ್ಲಿ ಕಾಂಗ್ರೆಸ್‌ ಭಾರಿ ಶಕ್ತಿ ಪ್ರದರ್ಶನ: ಖರ್ಗೆ ಸ್ವಾಗತಕ್ಕೆ ‘ಕಲ್ಯಾಣ ಕ್ರಾಂತಿ’ ಸಮಾವೇಶ

ಡಾ. ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಡಿ.10ರಂದು ತವರು ಜಿಲ್ಲೆ ಕಲಬುರಗಿಗೆ ಭೇಟಿ ನೀಡುತ್ತಿದ್ದ ಸಂದರ್ಭವನ್ನೇ ಕಾಂಗ್ರೆಸ್‌ ಪಕ್ಷ ಕಲ್ಯಾಣದ 7 ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಮರ್ಥವಾಗಿ ಬಳಸಿಕೊಂಡಿತು. 

Congress shows huge power in Kalaburagi gvd

ಕಲಬುರಗಿ (ಡಿ.11): ಡಾ. ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಡಿ.10ರಂದು ತವರು ಜಿಲ್ಲೆ ಕಲಬುರಗಿಗೆ ಭೇಟಿ ನೀಡುತ್ತಿದ್ದ ಸಂದರ್ಭವನ್ನೇ ಕಾಂಗ್ರೆಸ್‌ ಪಕ್ಷ ಕಲ್ಯಾಣದ 7 ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಮರ್ಥವಾಗಿ ಬಳಸಿಕೊಂಡಿತು. ಕಲಂ 371 (ಜೆ) ಅನುಷ್ಠಾನ ದಶಕವೆಂದು ‘ಕಲ್ಯಾಣ ಕ್ರಾಂತಿ’ ಹೆಸರಲ್ಲಿ ಬೃಹತ್‌ ಸಮಾವೇಶ ಕಲಬುರಗಿಯಲ್ಲಿ ಸಂಘಟಿಸುವ ಮೂಲಕ ಡಾ. ಖರ್ಗೆಯವರಿಗೆ ಅದ್ದೂರಿ ಸ್ವಾಗತ ನೀಡಿದ್ದಲ್ಲದೆ ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಭರ್ಜರಿಯಾಗಿ ಶಕ್ತಿ ಪ್ರದರ್ಶನವನ್ನೂ ನಡೆಸಿತು.

ಕಲ್ಯಾಣ ನಾಡಿನ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ 41 ಅಸೆಂಬ್ಲಿ ಕ್ಷೇತ್ರಗಳಿಂದ ಹಾಲಿ, ಮಾಜಿ ಶಾಸಕರ, ಸಂಸದರು, ಪಕ್ಷದ ಮುಚೂಣಿ ಘಟಕಗಳ ಮುಖಂಡರು, ಜನ ಕಲಬುರಗಿಗೆ ಆಗಮಿಸಿ ಎನ್‌ವಿ ಮೈದಾನ ತುಂಬಿ ತುಳುಕಿತ್ತು. ಬೃಹದಾಕಾರದ ವೇದಿಕೆಯಲ್ಲಿ ಎಐಸಿಸಿಸಿ ಅದ್ಯಕ್ಷ ಡಾ. ಖರ್ಗೆಯವರೊಂದಿಗೆ ಪಕ್ಷದ ಉಸ್ತುವಾರಿ, ರಾಜ್ಯದ ಘಟಾನುಘಟಿಗಳೆಲ್ಲರು ಸೇರಿದಂತೆ 100 ಕ್ಕೂ ಹೆಚ್ಚು ನಾಯಕರು ಸೇರಿದ್ದರು. ಇದ್ಲದೆ ಪ್ರಧಾನ ವೇದಿಕೆ ಪಕ್ಕದಲ್ಲೇ ಇನ್ನೂ ಒಂದು ಮಿನಿ ವೇದಿಕೆ ಹಾಕಿ ಅಲ್ಲಿಯೂ ವಿವಿಐಪಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು.

ಖರ್ಗೆ ಅಧ್ಯಕ್ಷತೆಯಲ್ಲಿ ಗತವೈಭವ ಮರುಕಳಿಸಲಿ: ಸಿದ್ದರಾಮಯ್ಯ

5 ಕಿಮೀ ಮೆರವಣಿಗೆ, ಕಾಂಗ್ರೆಸ್‌ ಧ್ವಜಗಳ ಹಾರಾಟ: ಖರ್ಗೆಯವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ 11 ಗಂಟೆಗೆ ಬಂದಿಳಿಯುತ್ತಿದ್ದಂತೆಯೇ ನಗರವೇಶ್ವರ ಶಾಲೆ ಮೈದಾ®ದಿಂದ ಶುರುವಾದ ಮೆರವಣಿಗೆ ಸತತ 3 ಗಂಟೆಗೂ ಹೆಚ್ಚು ಅವಧಿ ನಡೆದು ಗಮನ ಸೆಳೆಯಿತು. 5 ಕಿಮೀ ಮೆರವಣಿಗೆ ಜಗತ್‌ ವೃತ್ತದಲ್ಲಿ ಕೊನೆಗೊಂಡಾಗ ಮಧ್ಯಾಹ್ನದ 3 ಗಂಟೆಯಾಗಿತ್ತು. ಮೆರವಣಿಗೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮೆರವಣಿಗೆ ಪ್ರಮುಖ ವೃತ್ತಗಳಲ್ಲಿ ಬಂದಾಕ್ಷಣ ಯುವಕರು ಬೃಹದಾಕಾರದ ಪುಷ್ಪ ಮಾಲೆಗಳನ್ನು ಕ್ರೇನ್‌ ಮೂಲಕ ಖರ್ಗೆಯವರಿಗೆ ಅರ್ಪಿಸಿ ಶುಭ ಕೋರಿದರು. ಹೆಲಿಕಾಪ್ಟರ್‌ನಿಂದಲೂ ಖರ್ಗೆ ಹಾಗೂ ಗಮ್ಯರ ಮೇಲೆ ಪುಷ್ಪವೃಷ್ಟಿಮಾಡಲಾಯ್ತು. ಕೈಯಲ್ಲಿ ಕಾಂಗ್ರೆಸ್‌ ಧ್ವಜ ಹಿಡಿದ ಜನರೇ ರಸ್ತೆಯಲ್ಲಿ 3 ಗಂಟೆಗಳಿಗೂ ಹೆಚ್ಚು ಕಾಲ ಕಾಣು ಮೂಲಕ ಇಡೀ ಕಲಬುರಗಿ ಸಂಪೂರ್ಣ ಕ್ರಾಂಗ್ರೆಸ್‌ ಧ್ವಜಗಳಿಂದ ಕಂಗೊಳಿಸಿತ್ತು.

ಇದೊಂದು ಅಭೂತಪೂರ್ವ ಕಾರ್ಯಕ್ರಮ: ತಮ್ಮ ತವರಲ್ಲಿ ಎಐಸಿಸಿ ಅಧ್ಯಕ್ಷನಾಗಿ ನೀಡುತ್ತಿರುವ ಚೊಚ್ಚಿಲ ಭೇಟಿ ಇ,್ಟಂದು ಸಡಗರ- ಸಂಭ್ರಣಕ್ಕೆ ಕಾರಣವಾಗರೋದನ್ನ ಕಂಡು ಖರ್ಗೆ ಪುಲಕಿತರಾಗಿದ್ದರು. ತಮ್ಮ ಭಾಷಣದಲ್ಲಿ ಇದನ್ನೊಂದು ಅದ್ಭುತ ಎಂದು ಬಣ್ಣಿಸಿದ್ದಲ್ಲದೆ 5 ಕಿಮಿ ಉದ್ದ ಭವ್ಯ ಮೆರವಣಿಗೆ ಮೂಲಕ ನನಗೆ ಬರಮಾಡಿಕೊಂಡಿದ್ದೀರಿ, ಅಚ್ಚು ಕಟ್ಟಿ$್ನಂದ ಕೂಡಿದಂತಹ ಅಭೂತಪೂರ್ವ ಕಾರ್ಯಕ್ರಮ ಎಂದು ಅಭಿಮಾನದಿಂದ ಸ್ಮರಿಸಿದರು.

ಕಚ್ಚಾಟ ನಿಲ್ಲಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನಿ: ಖರ್ಗೆ ಖಡಕ್‌ ಸಂದೇಶ

ಕಲ್ಯಾಣ ಗೆಲ್ಲುವ ಸಂಕಲ್ಪ: ವೇದಿಕೆಯಲ್ಲಿದ್ದ ಕಲ್ಯಾಣ ನಾಡಿನ 7 ಜಿಲ್ಲೆಗಳ ಪ್ರಮುಖರೆಲ್ಲರೂ ಮಾತನಾಡುತ್ತ ಕಲ್ಯಾಣ ನಾಡಿನಲ್ಲಿರುವ 41 ಸ್ಥಾನಗಳನ್ನೂ ಕೈವಶ ಮಾಡಿಕೊಳ್ಳುವುದೇ ತಮ್ಮ ಈ ಬಾರಿಯ ಸಂಕಲ್ಪ ಎಂದರು. ಈ ಬಾಗಕ್ಕೆ ಕಲಂ 371 (ಜೆ) ನೀಡಿರುವ ಖರ್ಗೆಯವರೇ ಅಧ್ಯಕ್ಷರಾಗಿದ್ದಾರೆ. ಅವರಿಗೆ ನಾವು ಹೆಚ್ಚಿನ ಸ್ಥಾನ ಗೆದ್ದು ಗೌರವಿಸಬೇಕಾಗಿದೆ ಎಂದೂ ಮಾತನಾಡುವಾಗ ಮುಖಂಡರುಗಳು ತಮ್ಮ ಮನದಾಳದ ಸಂಕಲ್ಪ ಬಹಿರಂಗಪಡಿಸಿದ್ದು ನಡೆಯಿತು.

Latest Videos
Follow Us:
Download App:
  • android
  • ios